ಮಡಿಕೇರಿ ಜ.20 NEWS DESK : ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ 2021-22ನೇ ಸಾಲಿನಿಂದ (ಜುಲೈ/ಜನವರಿ ಆವೃತ್ತಿಯ) 2024-25 ನೇ ಸಾಲಿನವರೆಗೆ (ಜುಲೈ ಆವೃತ್ತಿ) ಪ್ರವೇಶಾತಿ ಪಡೆದಿರುವ ಸ್ನಾತಕ ಪದವಿಗಳಾದ ಬಿ.ಎ, ಬಿ.ಕಾಂ, ಎಲ್ಲಾ ಬಿ.ಎಸ್ಸಿ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್.ಡಬ್ಲ್ಯು ಹಾಗೂ ಸ್ನಾತಕೋತ್ತರ ಪದವಿಗಳಾದ ಎಂ.ಎ, ಎಂ.ಕಾಂ, ಎಂ.ಬಿ.ಎ, ಎಂ.ಸಿ.ಎ, ಎಂ.ಎಸ್.ಡಬ್ಲ್ಯು ಮತ್ತು ಎಲ್ಲಾ ಎಂ.ಎಸ್ಸಿ ಪದವಿಗಳು ಮತ್ತು ಡಿಪ್ಲೊಮಾ, ಪಿಜಿ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್‍ಗಳ ವಿದ್ಯಾರ್ಥಿಗಳ ಸಿ.ಬಿ.ಸಿ.ಎಸ್ ಸೆಮಿಸ್ಟರ್ ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೇ ಫೆ. 7, ರೂ.200 ದಂಡ ಶುಲ್ಕದೊಂದಿಗೆ ಪರೀಕ್ಷಾ ಶುಲ್ಕ ಪಾವತಿಸಲು ಫೆಬ್ರವರಿ 17 ಕೊನೆಯ ದಿನವಾಗಿದೆ ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ತಿಳಿಸಿದ್ದಾರೆ.