ಮಡಿಕೇರಿ NEWS DESK ಜ.20 : ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಕುರಿತು ಚರ್ಚಿಸಲು ಅರಕಲಗೋಡು ಶಾಸಕ ಹಾಗೂ ಕೊಡಗು ಕೆಡಿಪಿ ಸದಸ್ಯ ಎ.ಮಂಜು ಅವರು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ಭೇಟಿಯಾಗಿ ಚರ್ಚಿಸಿದರು ಎಂದು ತಿಳಿದು ಬಂದಿದೆ. NEWS DESK ಕೊಡಗಿನಲ್ಲಿ ಶಾಂತಿ ನೆಲೆಸಬೇಕು, ಎಲ್ಲಾ ಜನಾಂಗದವರು ಒಗ್ಗಟ್ಟಾಗಿ ಶಾಂತಿ, ಪ್ರೀತಿಯಿಂದ ಜೀವನ ಸಾಗಿಸಬೇಕು, ವಿಳಂಬ ಮಾಡದೆ ಅಗತ್ಯ ಕ್ರಮ ಕೈಗೊಳ್ಳಿ. ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಜನಪ್ರತಿನಿಧಿಗಳು ಹಾಗೂ ಜನಾಂಗಗಳ ಪ್ರಮುಖರ ಸಭೆ ನಡೆಸಿ ಗೊಂದಲ ನಿವಾರಿಸುವಂತೆ ಸಲಹೆ ನೀಡಿದ್ದಾರೆ ಎಂದು ಮಾಹಿತಿ ಲಭಿಸಿದೆ. ಜ.25ಕ್ಕೆ ಜಿಲ್ಲಾಡಳಿತ ಸಭೆ ನಡೆಸುವ ಸಾಧ್ಯತೆಗಳಿದೆ ಎಂದು ತಿಳಿದು ಬಂದಿದೆ. NEWS DESK