ಮಡಿಕೇರಿ NEWS DESK ಜ.20 : ಮೂರ್ನಾಡು ಸಮೀಪದ ಕಟ್ಟೆಮಾಡ್ ಊರ್ ಮಂದ್ ನಲ್ಲಿ, ಪುತ್ತರಿ ಊರೊರ್ಮೆ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಊರ್ ತಕ್ಕ ಮತ್ತು ಮಂದ್ ಸಮಿತಿಯ ಅಧ್ಯಕ್ಷ ಚಂಗಣಮಕ್ಕಡ ವಿನು ಅಪ್ಪಯ್ಯ ಅವರ ಕೊರವುಕಾರಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಮೂರ್ನಾಡು ಕೊಡವ ಸಮಾಜ ಅಧ್ಯಕ್ಷ ಪುದಿಯೊಕ್ಕಡ ಕಾಶಿ ಕರುಂಬಯ್ಯ, ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ಬೆಳ್ಯಪ್ಪ, ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ, ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟಿರ ಪೃಥ್ವಿಸುಬ್ಬಯ್ಯ, ಹಳ್ಳಿಗಟ್ಟು ಊರ್ ತಕ್ಕ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಕನೆಕ್ಟಿಂಗ್ ಕೊಡವಾಸ್ ಸಂಚಾಲಕ ಶಾಂತೆಯAಡ ನಿರನ್ ನಾಚಪ್ಪ ಉಪಸ್ಥಿತರಿದ್ದರು. ಸಭೆಯನ್ನುದ್ದೇಶಿಸಿ ಮಾತಾನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ ನಮ್ಮ ಪೃಕೃತಿದತ್ತ ಬಳುವಳಿಯಾಗಿದ್ದು, ಇದನ್ನು ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ನಿಲ್ಲಬೇಕಾಗಿದೆ. ಮುಂದಿನ ದಿನಗಳಲ್ಲಿ ಕಟ್ಟೆಮಾಡಿನಲ್ಲಿ ಅಕಾಡೆಮಿಯ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಮಾತನಾಡಿ ನಮಗೆ ಏಟು ಬಿದ್ದಾಗ ಮಾತ್ರ ನಮ್ಮ ತಪ್ಪಿನ ಅರಿವು ಆಗುತ್ತದೆ. ಪ್ರತೀ ಮನೆ ಮನೆಯಲ್ಲಿ ಕೊಡವ ತಕ್ಕ್, ಸಂಸ್ಕೃತಿ, ಉಡುಪು ಕಟ್ಟುಪಾಡುಗಳನ್ನು ಪಾಲಿಸುವಂತಾಗಬೇಕು ಎಂದರು. ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ನಮ್ಮ ಮಂದ್ ಮಾನಿಗಳಲ್ಲಿಯೇ ನಮ್ಮ ಸಂಸ್ಕೃತಿಯ ಬೇರು ಅಡಗಿದ್ದು, ಅದನ್ನು ಬಲಪಡಿಸುವತ್ತ ನಾವೆಲ್ಲರೂ ಗಮನ ಹರಿಸಬೇಕು. ಪ್ರತಿಯೊಬ್ಬರು ಸಂಸ್ಕೃತಿಯ ಅರಿವು ಪಡೆಯುವ ಮೂಲಕ, ಜಾಗೃತಿ ಮೂಡಿಸಿ ನಮ್ಮ ಹಕ್ಕು ಎನ್ನುವುದನ್ನ ಪ್ರತಿಪಾದಿಸಬೇಕು ಎಂದು ಕರೆ ನೀಡಿದರು. ಹಳ್ಳಿಗಟ್ಟ್ ಊರ್ ತಕ್ಕ ಚೆಮ್ಮಟ್ಟಿರ ಪ್ರವೀಣ್ ಉತ್ತಪ್ಪ ಮಾತನಾಡಿ, ಕೊಡವರ ಒಗ್ಗಟ್ಟಿಗೆ ಮೂಲವಾಗಿರುವ ಮಂದ್ ನಲ್ಲಿ ನಾವಿಂದು ಒಗ್ಗಟ್ಟು ಮತ್ತು ಸಂಸ್ಕೃತಿಯನ್ನು ಸಾಬೀತು ಪಡಿಸಿದ್ದೇವೆ. ಮುಂದೆಯೂ ಕೂಡ ನಮ್ಮ ಸಂಪ್ರದಾಯದ ಉಳಿವಿಗಾಗಿ ಕಟಿಬದ್ಧರಾಗಿರುತ್ತೇವೆ ಎಂದರು. ಅಖಿಲ ಕೊಡವ ಸಮಾಜದ ಸಂಘಟನಾ ಕಾರ್ಯದರ್ಶಿ ನಂದೇಟಿರ ರಾಜಾಮಾದಪ್ಪ, ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಚೊಟ್ಟೆಯಂಡ ಸಂಜುಕಾವೇರಪ್ಪ, ಪ್ರಮುಖರಾದ ಅಜ್ಜಮಕ್ಕಡ ವಿನುಕುಶಾಲಪ್ಪ, ಚನ್ನಪಂಡ ದರ್ಶನ್, ನೆಲ್ಲಮಕ್ಕಡ ಮಾದಯ್ಯ, ಚಂಗುಲಂಡ ಅಯ್ಯಪ್ಪ, ಕಿರಿಯಮಾಡ ಕವಿನ್, ಉರ್ ಮಂದ್ ಸಮಿತಿಯ ಉಪಾಧ್ಯಕ್ಷ ಸಾಧೆರ ಮಧುಗಣಪತಿ, ಕಾರ್ಯದರ್ಶಿ ಅಚ್ಚಕಾಳೇರ ಸಂತು ಅಯ್ಯಣ್ಣ, ಖಜಾಂಚಿ ನಂದೇಟಿರ ವಿಶು ಮಾದಪ್ಪ ಉಪಸ್ಥಿತರಿದ್ದರು. ಹಿರಿಯರು, ಗ್ರಾಮಸ್ಥರು, ಮಹಿಳೆಯರು ಮತ್ತು ಮಕ್ಕಳು ಪುತ್ತರಿ ಕೋಲಾಟ್, ಪರೆಯಕಳಿ, ವಾಲಗತಾಟ್ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
Breaking News
- *ಕಟ್ಟೆಮಾಡು ಊರ್ ಮಂದ್ ನಲ್ಲಿ ಸಂಭ್ರಮದ ಊರೊರ್ಮೆ*
- *ಕುಟ್ಟಾದಿಂದ ಮಡಿಕೇರಿಯವರೆಗೆ ನಡೆಯಲಿದೆ ಕೊಡವರ ಬೃಹತ್ ಕಾಲ್ನಡಿಗೆ ಜಾಥಾ*
- *ಕುಶಾಲನಗರ ಡ್ರೀಮ್ಸ್ ಡೇ ಕೇರ್ ಪ್ಲೇ ಹೋಂ ನಲ್ಲಿ ಪುಟಾಣಿಗಳ ಕಲರವ*
- *ಸಚಿವರ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ*
- *ಕೊಡಗಿನಲ್ಲಿ ಶಾಂತಿ ನೆಲೆಸಬೇಕು, ವಿಳಂಬ ಮಾಡದೆ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಶಾಸಕ ಎ.ಮಂಜು*
- *ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿಯಿಂದ ಉಚಿತ ಸಾಮೂಹಿಕ ವಿವಾಹ : ಅರ್ಜಿ ಸಲ್ಲಿಸಲು ಫೆ.15 ಕೊನೆ ದಿನ*
- *ಜ.26 ರಂದು ಮಡಿಕೇರಿಯಲ್ಲಿ ರಕ್ತದಾನ ಶಿಬಿರ*
- *ವಿರಾಜಪೇಟೆ : ಜ.21 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಅರೆಭಾಷಿಕ ಗೌಡರ ಅವಹೇಳನ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ : ಮಡಿಕೇರಿಯಲ್ಲಿ “ಗೌಡ ಸಮುದಾಯದ ಸ್ವಾಭಿಮಾನದ ನಡೆ” ಬೃಹತ್ ಪ್ರತಿಭಟನೆ*
- *ವಿರಾಜಪೇಟೆ ಪಿ.ಎಲ್.ಡಿ ಬ್ಯಾಂಕ್ ನ ಅಧ್ಯಕ್ಷರಾಗಿ ವಿ.ವಿರಾಜ್, ಉಪಾಧ್ಯಕ್ಷರಾಗಿ ಬಿ.ಜೆ.ಬೋಪಣ್ಣ ಆಯ್ಕೆ*