


ಚೆಟ್ಟಳ್ಳಿ NEWS DESK ಜ.21 : ಜಾರ್ಕಂಡ್ ನಲ್ಲಿ ಜ.29 ರಿಂದ ಫೆ.2ರವರೆಗೆ ನಡೆಯಲಿರುವ 19 ವರ್ಷದೊಳಗಿನ ರಾಷ್ಟ್ರೀಯ ಬಾಲಕರ ಹಾಕಿ ತಂಡಕ್ಕೆ ನಾಪೋಕ್ಲುವಿನ ಬಿದ್ದಾಟಂಡ ಹರ್ಷ ನಾಣಯ್ಯ ಹಾಗೂ ಸ್ವರ್ಣ ದಂಪತಿ ಪುತ್ರ ಬಿದ್ದಾಟಂಡ ಬೋಪಣ್ಣ, ಗೋಣಿಕೊಪ್ಪಲುವಿನ ಕೈಕೇರಿಯ ಬಲ್ಯಂಡ ಪೂಣಚ್ಚ ಹಾಗೂ ಶೀಲಾ ದಂಪತಿ ಪುತ್ರ ಬಲ್ಯಂಡ ಸಂಪನ್ನ್ ಗಣಪತಿ ಮತ್ತು ಹುದಿಕೇರಿಯ ಚಕ್ಕೇರ ರಾಜೇಶ್ ಹಾಗೂ ಆಶಾ ದಂಪತಿ ಪುತ್ರ ವರುಣ್ ಮಾದಪ್ಪ ಆಯ್ಕೆಯಾಗಿದ್ದಾರೆ.