ನಾಪೋಕ್ಲು ಜ.21 NEWS DESK : ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಬದುಕಬೇಕು ಎಂಬುದು ನಮ್ಮ ಧ್ಯೇಯೋದ್ದೇಶವಾಗಿದೆ ಎಂದು ಪುನಶ್ಚೇತನ ಸಂಸ್ಥೆಯ ರೂವಾರಿ ಬೊಪ್ಪಂಡ ಸೂರಜ್ ಹೇಳಿದರು. ನಾಪೋಕ್ಲುವಿನ ಪುನಶ್ಚೇತನ ಸಂಸ್ಥೆಯ ವತಿಯಿಂದ ಆಯೋಜಿಸಿದ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪದಲ್ಲಿ ಮಾತನಾಡಿದ ಅವರು, ನೂರಾರು ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಥೆಯಿಂದ ಕೆಲಸ ಕೊಡಿಸಬೇಕೆಂದಿದ್ದೇವೆ. ಅಲ್ಲದೆ ಸಂಸ್ಥೆಯನ್ನ ಎಲ್ಲರು ಸೇರಿ ಉನ್ನತ ಮಟ್ಟಕ್ಕೆ ಬೆಳೆಸುವುದರ ಜೊತೆಗೆ ಇನ್ನಷ್ಟು ಮಕ್ಕಳಿಗೆ ಉಪಯೋಗ ಆಗುವಂತೆ ಕಾರ್ಯಪ್ರವೃತ್ತರಾಗುವ ಎಂದು ಆಶಿಸಿದರು. ಉದ್ಯಮಿ ಕುಂಡ್ಯೋಳಂಡ ದಿನೇಶ್ ಮಾತನಾಡಿ, ನಾವು ಮಾಡಿರುವ ಒಳ್ಳೆಯ ಕಾರ್ಯಗಳು ನಮ್ಮನ್ನು ಆಪತ್ತಿನಿಂದ ಕಾಪಾಡುತ್ತದೆ ಎಂದು ಅವರು ನಮ್ಮ ಸುತ್ತ ಮುತ್ತ ಎಷ್ಟೋ ಜನ ವಿಕಲಚೇತನ ಮಕ್ಕಳು ಇದ್ದಾರೆ. ಇನ್ನಷ್ಟು ಮಕ್ಕಳಿಗೆ ಉಪಯೋಗ ಆಗುವಂತೆ ಸಂಸ್ಥೆಯನ್ನ ಬೆಳೆಸಲು ನಾವು ನಮ್ಮಿಂದ ಆದಷ್ಟು ಸಹಕಾರಿ ಸಂಸ್ಥೆಯನ್ನ ಬೆಳಸೋಣ ಎಂದರು. ಹಲವಾರು ವರ್ಷದಿಂದ ಸಂಸ್ಥೆಗೆ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಾ ಬರುತ್ತಿರುವ ನಾಪೋಕ್ಲು ಪ್ರೌಢ ಶಾಲಾ ಶಿಕ್ಷಕಿ ಉಷಾರಾಣಿ ಮಾತನಾಡಿ, ವಿಕಲಚೇತನರು ಸಾಮಾನ್ಯರಲ್ಲ. ಅವರಲ್ಲಿ ಏನಾದರು ಒಂದು ಅಸಾಮಾನ್ಯ ಸಾಮಥ್ರ್ಯ ಇರುತ್ತದೆ. ಅದನ್ನ ಗುರುತಿಸಿ ಅವರಿಗೂ ಒಂದು ಉತ್ತಮವಾದ ಜೀವನಕ್ಕೆ ಅವಕಾಶ ಸಿಗಬೇಕು ಎಂದು ಹೇಳಿದರು. ವಿಕಲ ಚೇತನ ಮಕ್ಕಳು ಮುಖ್ಯವಾಹಿನಿಗೆ ಬರುವುದರ ಜೊತೆಗೆ ಹೆಣ್ಣು ಮಕ್ಕಳು ಸಬಲಾರಾಗಬೇಕು ಎನ್ನುವ ಉದ್ದೇಶಕ್ಕೆ ಉಚಿತ ಟೈಲರಿಂಗ್ ತರಬೇತಿಯನ್ನ ನೀಡುತ್ತಿದ್ದು, 2 ಹಂತದ ತರಬೇತಿ ಮುಕ್ತಾಯ ಗೊಂಡಿದ್ದು ಸುಮಾರು 26 ಜನ ತರ¨ಬೇತಿ ಪಡೆದುಕೊಂಡಿದ್ದಾರೆ ಎಂದು ಪುನಶ್ಚೇತನ ಸಂಸ್ಥೆಯ ಸ್ಥಾಪಕಿ ಬಾಳೆಯಡ ದಿವ್ಯ ಮಂದಪ್ಪ ಪ್ರಾಸ್ತವಿಕ ನುಡಿಯಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಚೋಕಂಡ ಸಂಜು, ಟೈಲರಿಂಗ್ ಶಿಕ್ಷಕಿ ಬೊಪ್ಪಂಡ ಯಶೋಧಾ, ಶಿಕ್ಷಕಿ ಅಸ್ಮಾ ಸೇರಿದಂತೆ ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.