ವಿರಾಜಪೇಟೆ ಜ.22 NEWS DESK : ಅಮ್ಮತ್ತಿ ಒಂಟಿಅಂಗಡಿ ಗ್ರಾಮದ ಶ್ರೀ ಕ್ಷೇತ್ರ ಎಡೂರು ನಲ್ಲಿ ಶ್ರೀ ಕಲ್ಲುರ್ಟಿ, ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಜ.17 ರಂದು ಗಣಹೋಮ, ಆಶ್ಲೇಷ ಬಲಿ, ನಾಗ ತಂಬಿಲ ಮತ್ತು ಸತ್ಯನಾರಾಯಣ ಪೂಜೆ ನೆರವೇರಿತು. ಸಂಜೆ ದೇವಿಯ ವಿಶೇಷ ಪೂಜೆಗಳು ನಡೆಯಿತು. ಜ.18 ರಂದು ಸಂಜೆ ದೈವಗಳ ಭಂಡಾರ ಇಳಿಸುವ ಮೂಲಕ ಆರಂಭಗೊಂಡ ವಾರ್ಷಿಕ ಪೂಜಾ ಮಹೋತ್ಸವ ಆರಂಭಗೊಂಡಿತು. ಶ್ರೀ ಜೋಡಿ ಕಲ್ಲುರ್ಟಿ, ಶ್ರೀ ಮಂತ್ರದೇವತೆ, ಶ್ರೀ ಮಂತ್ರ ಗುಳಿಗ ದೈವಗಳ ಪ್ರದರ್ಶನ ನಡೆಯಿತು. ಮರುದಿನ ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ಧರ್ಮದೈವ ಅಣ್ಣಪ್ಪ, ಪಂಜೂರ್ಲಿ ದೈವ ಹಾಗೂ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು. ಎರಡು ದಿನವು ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಉತ್ಸವ ಸಂದರ್ಭದಲ್ಲಿ ದೇವಾಲಯ ಪ್ರಮುಖರಾದ ಲವನ್ ಪೂಜಾರಿ, ಐತ್ತಪ್ಪ ಪೂಜಾರಿ ಹಾಗೂ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ನಗರದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ.