ಮಡಿಕೇರಿ ಜ.23 NEWS DESK : ಅಂತರಾಷ್ಟ್ರೀಯ “ವೃಕ್ಷ” ಸಂಸ್ಥೆ ಹೈದರಾಬಾದ್‌ನಲ್ಲಿ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ FEET ON EARTH FESTIVAL ಎಂಬ ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲ್ಲೂಕು ತೋರ ಗ್ರಾಮದ ಕಲಾವಿದರಾದ ಕಬ್ಬೆಮಲೆ ಶಾರದಾ ಸೋಮಯ್ಯ ಹಾಗೂ ತಂಡ “ಕಾಡಿನ ಹಾಡು” ಶೀರ್ಷಿಕೆಯಡಿಯಲ್ಲಿ ಪ್ರದರ್ಶಿಸಿದ ಹಾಡು ಹಾಗೂ ನೃತ್ಯ ಕಲಾವಿದರ ಮೆಚ್ಚುಗೆಗೆ ಪಾತ್ರವಾಗಿದೆ. ಕಬ್ಬೆಮಲೆ ಶಾರದಾ ಸೋಮಯ್ಯ ಅರಣ್ಯ, ಪ್ರಾಣಿ ಸಂಕುಲ, ನದಿ, ಬೆಟ್ಟ-ಗುಡ್ಡಗಳು ಮತ್ತು ಇವುಗಳ ನಡುವೆ ಕಾಡಿನ ಮಕ್ಕಳಾದ ಕುಡಿಯರ ಬದುಕು ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಸುದೀರ್ಘ 40 ನಿಮಿಷಗಳ ಉರ್ಟಿಕೊಟ್ಟ್ ಪಾಟ್ ನೃತ್ಯ ಪ್ರದರ್ಶನ ನೀಡಿದರು. ಕುಡಿಯರ ಯುವ ಕಲಾವಿದರಾದ ಕೆ.ಎಂ.ಜ್ಯೋತಿ, ಕೆ.ಆರ್.ಚಷ್ಮಿತಾ ಮತ್ತು ಕೆ.ಆರ್.ಸೌಮ್ಯ ತಮ್ಮಅದ್ಭುತವಾದ ನೃತ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮವನ್ನು ಕರ್ನಾಟಕದ ಜನಪದ ತಜ್ಞ ಡಾ. ಸಿರಿಗಂಧ ಶ್ರೀನಿವಾಸ್‌ಮೂರ್ತಿ ಉದ್ಘಾಟಿಸಿದರು.
ವರದಿ : ಅಲ್ಲಾರಂಡ ವಿಠಲ ನಂಜಪ್ಪ