ಸೋಮವಾರಪೇಟೆ NEWS DESK ಜ.28 : ಜಿಲ್ಲೆಯ ಮೂರ್ನಾಡು ಸಮೀಪದ ಕಟ್ಟೆಮಾಡು ದೇವಾಲಯದ ಆರ್ಚಕರಾದ ವಿಘ್ನೇಶ್ ಭಟ್ ಅವರ ಮೇಲಿನ ಹಲ್ಲೆ ಖಂಡನೀಯವಾಗಿದ್ದು ಕೂಡಲೇ ಅರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಸೋಮವಾರಪೇಟೆ ಬ್ರಾಹ್ಮಣ ಸಮಾಜ ಆಗ್ರಹಿಸಿದೆ. ಸದಾಕಾಲ ಧರ್ಮದ ಒಳಿತಿಗಾಗಿ ಸೇವೆಸಲ್ಲಿಸುತ್ತ ದೇವಾಲಯ ಮತ್ತು ಆಡಳಿತ ಮಂಡಳಿಗಳೀಗೆ ಹೊಂದಿಕೊ0ಡು ಭಕ್ತರ ಒಳಿತಿಗಾಗಿ ಸರ್ವೇಜನ ಸುಖಿನೋಭವಂತು ಎನ್ನುತ್ತಾ ಭಗವಂತನ ಸೇವೆ ಮಾಡುತ್ತಿರುವ ಅರ್ಚಕರ ಮೇಲೆ ಹಲ್ಲೆ ನಡೆಸುವುದು ಅಮಾನೀಯ ಕೃತ್ಯವಾಗಿದೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಎಸ್.ಆರ್.ಸೋಮೇಶ್ ಖಂಡಿಸಿದ್ದಾರೆ. ಈಗಾಗಲೆ ಸಂಖ್ಯೆಯಲ್ಲಿ ಕಡಿಮೆಯಿರುವ ಬ್ರಾಹ್ಮಣವರ್ಗದ ರಕ್ಷಣೆಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಕೂಡಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಸಮಾಜ ಬಾಂಧವರ ಸಹಕಾರದಿಂದ ಜಿಲ್ಲಾಡಳಿತ ಭವನದ ಮುಂಭಾಗ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು. ಹಲವಾರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಜಾತಿಗಳ ನಡುವೆ ಯಾವುದೇ ಗಲಾಟೆ ಜಗಳ ಇಲ್ಲದೆ ಅನೂನ್ಯವಾಗಿ ಬದುಕು ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಜಾತಿ ವೈಷಮ್ಯಗಳು ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಸೂಕ್ರ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಶ್ರೀಕಾಂತ್, ನಿರ್ದೇಶಕ ಮಧುಸೂದನ್ ಇದ್ದರು.