ಪಾಲಿಬೆಟ್ಟ ಫೆ.1 NEWS DESK : ಸರ್ವಧರ್ಮ ಸಂಕೇತದ ಭಕ್ತರ ನಂಬಿಕೆಗೆ ಹೆಸರುವಾಸಿಯಾಗಿರುವ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಷಾ ವಲಿ ಉರೂಸ್ ನೇರ್ಚೆಗೆ ಗಣ್ಯರು ಚಾಲನೆ ನೀಡಿದರು. ಮಸೀದಿಯಲ್ಲಿ ಜುಮಾ ನಮಾಜ್ ಬಳಿಕ ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾಗೆ ತೆರಳಿ ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಿ
ಮಾತನಾಡಿ, ಇತಿಹಾಸ ಪ್ರಸಿದ್ಧ ಉರೂಸ್ ಗೆ ಸರ್ವಧರ್ಮಿಯರು ನಂಬಿಕೆಯೊಂದಿಗೆ ಆಗಮಿಸುತ್ತಿದ್ದು, ತಮ್ಮ ಕಷ್ಟಕಾರ್ಪಣ್ಯಗಳ ಇಷ್ಟಾರ್ಥ ಅರಕೆಗಳನ್ನ ತೀರಿಸುವುದರೊಂದಿಗೆ ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಫೆ.3 ರವರೆಗೆ ಉರೂಸ್ ಕಾರ್ಯಕ್ರಮ ನಡೆಯಲಿದ್ದು, ಕೊನೆಯ ದಿನದಂದು ಸರ್ವಧರ್ಮ ಸಮ್ಮೇಳನಕ್ಕೆ
ವಿವಿಧ ಧಾರ್ಮಿಕ ಪಂಡಿತರುಗಳು, ಜನಪ್ರತಿನಿಧಿಗಳು, ಸಮಾಜ ಸೇವಕರು, ಗಣ್ಯರು ಭಾಗವಹಿಸಲಿದ್ದಾರೆ. ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಕಾರ್ಯ ನಡೆಯಲಿದೆ ಎಂದರು. ಜುಮ ಮಸೀದಿ ಖತೀಬ್ ಝುಬೈರ್ ಸಖಾಫಿ ಮೌಲೂದ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಮುಖ್ಯ ಪ್ರವಚನಕಾರರಾಗಿ ಆಗಮಿಸಿದ ಸಯ್ಯದ್ ಅಬ್ದು ರೆಹಮಾನ್ ಮಶೂದ್ ಅಲ್ ಬುಖಾರಿ ತಂಜಳ್ ಕೂರತ್. ಪಟ್ಟಣ್ ಬಾಬಾ ಸಾವಲಿ ದರ್ಗಾ ಬಾಗಿಲು ತೆರೆದು ವಿಶೇಷ ಪ್ರಾರ್ಥನೆಯೊಂದಿಗೆ ದುಆ ನೇತೃತ್ವ ವಹಿಸಿ ಮಾತನಾಡಿ, ಇಂತಹ ಸೌಹಾರ್ದ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ. ಪ್ರತಿಯೊಬ್ಬರು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು. ಜುಮ ಮಸೀದಿಯ ಕಮಿಟಿ ಉಪಾಧ್ಯಕ್ಷ ಸೈನುದ್ದೀನ್, ಪ್ರಧಾನ ಕಾರ್ಯದರ್ಶಿ ಶಮೀರ್ ಮುನ್ನ, ಖಜಾಂಚಿ ಟಿ.ಕೆ. ಮುಸ್ತಫ, ಜಂಟಿ ಕಾರ್ಯದರ್ಶಿಗಳಾದ ಎ.ಹೆಚ್. ಶಮೀರ್, ಫಜಲ್ ರೆಹಮಾನ್,ತಾರಿಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಕೆ.ಎಂ. ಅಲಿ ಹಾಜಿ, ಮುಹಿಮ್ಮಾತುದ್ದೀನ್ ಮದ್ರಸದ ಸದರ್ ಮುಅಲ್ಲಿಂ, ಸಬಾಪ್ ಸಖಾಫಿ ಅಲ್ ಹಿಮಮಿ, ಪ್ರಮುಖರಾದ ಬಶೀರ್, ಫೈಜಲ್, ಮುನೀರ್, ಪಾಲಿಬೆಟ್ಟ ಜುಮಾ ಮಸೀದಿ ಮಾಜಿ ಅಧ್ಯಕ್ಷರುಗಳಾದ ಸಿ.ಕೆ.ಮೊಯ್ದು ಹಾಜಿ, ಸಿ.ಎಂ.ಅಬ್ದುಲ್ ಜಬ್ಬಾರ್ ಹಾಜಿ, ಕೆ.ಹೆಚ್. ಅಬೂಬಕ್ಕರ್, ಡಿ.ಎ. ಹಾರಿಸ್ ಹಾಜಿ ಎಂ.ಎ. ಅಲಿ. ಪಿ.ಎನ್. ಹನೀಫ, ಎಲ್ ಖಾಲಿದ್ ಹಾಜಿ, ಸೇರಿದಂತೆ ಸಮಿತಿಯ ಪ್ರಮುಖರು ಗ್ರಾಮಸ್ಥರು ಹಾಜರಿದ್ದರು.