ಕುಶಾಲನಗರ ಫೆ.1 NEWS DESK : ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಬಿ.ಎನ್.ಪುಷ್ಪ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಸಂಸ್ಥೆಗೆ ಹಿರಿಯ ಉಪನ್ಯಾಸಕಿಯಾಗಿ ಮುಂಬಡ್ತಿ ಹೊಂದಿದ್ದಾರೆ. ಬಿ.ಎನ್.ಪುಷ್ಪ ಶುಕ್ರವಾರ ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಕರ್ತವ್ಯಕ್ಕೆ ಹಾಜರಾದರು. ಈ ಸಂದರ್ಭ ಡಯಟ್ ಸಂಸ್ಥೆಯ ಪ್ರಾಂಶುಪಾಲ ಹಾಗೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ(ಅಭಿವೃದ್ಧಿ)ರಾದ ಚಂದ್ರಕಾಂತ್ ಶುಭಾಶಯ ಕೋರಿ ಸ್ವಾಗತಿಸಿದರು. 25 ವರ್ಷಗಳ ಕಾಲ ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಪುಷ್ಪ ಅವರು ಮುಂದಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತಷ್ಟು ಉತ್ತಮ ಸಾಧನೆ ಹೊಂದಲಿ ಎಂದು ಡಯಟ್ ನ ಪ್ರಾಂಶುಪಾಲ ಚಂದ್ರಕಾಂತ್ ಶುಭಾಶಯ ಕೋರಿದರು. ಡಯಟ್ ನ ಹಿರಿಯ ಉಪನ್ಯಾಸಕರಾದ ಬಿ.ಎಂ.ಗೀತಾ, ಸ್ವಾಮಿ, ಹೇಮರಾಜ್, ಉಪನ್ಯಾಸಕರಾದ ವಿಜಯ್, ನಳಿನಾಕ್ಷಿ, ಗೀತಾ, ಬಿ.ಆರ್.ಸಿ., ಎಂ.ವಿ.ಮಂಜೇಶ್, ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಹೇಮಂತ್, ನಿರ್ದೇಶಕ ಪಾಲಾಕ್ಷ,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮೈಸೂರು ವಿಭಾಗದ ಸಂಚಾಲಕ ನವೀನ್ ಕುಮಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಪರಮೇಶ್ವರಪ್ಪ, ಟಿ.ಜಿ.ಪ್ರೇಮಕುಮಾರ್, ಎಸ್.ಎಸ್.ಗೋಪಾಲ, ಜಿಲ್ಲಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ( ಗ್ರೇಡ್ -1) ದ ಅಧ್ಯಕ್ಷ ಡಾ ಸದಾಶಿವಯ್ಯ ಎಸ್.ಪಲ್ಲೇದ್, ಡಯಟ್ ಸಿಬ್ಬಂದಿ ಹಾಗೂ ಶಿಕ್ಷಕರು ಇದ್ದರು.