
ಸೋಮವಾರಪೇಟೆ ಫೆ.3 NEWS DESK : ಆಲೆಕಟ್ಟೆ ರಸ್ತೆಯ ಸಾರ್ವಜನಿಕ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ವಾರ್ಷಿಕ ಪೂಜೆ ಮತ್ತು ವೈಕುಂಠ ಏಕಾದಶಿ ಕಾರ್ಯಕ್ರಮ ಫೆ.10 ರಿಂದ 12ರ ತನಕ ಶ್ರದ್ಧಾಭಕ್ತಿಯಿಂದ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ಮಂಜುನಾಥ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.10 ರಂದು ವೈಕುಂಟ ಏಕಾದಶಿ ಅಂಗವಾಗಿ ಬೆಳಿಗ್ಗೆ 6.30 ರಿಂದ 10 ರವರೆಗೆ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ. ಸಂಜೆ 6 ರಿಂದ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ನಡೆಯಲಿದೆ ಎಂದು ತಿಳಿಸಿದರು. ಫೆ.12ರಂದು ವಾರ್ಷಿಕ ಪೂಜಾ ಮಹೋತ್ಸವ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಬೆಳಿಗ್ಗೆ 9 ರಿಂದ ನವ ಪ್ರಧಾನ ಕಲಾ ಕಲಶಪ್ರತಿಷ್ಠೆ, ವೆಂಕಟರಮಣ ಸ್ವಾಮಿಗೆ ಕಲಾತತ್ವಾಧದಿ ವಾಸ ಹೋಮ, ಶಿಖರಕ್ಕೆ ಕಲಶಾಭಿಷೇಕ, ಸ್ವಾಮಿ ಕಲಶಾಭಿಷೇಕ, ಮಹಾಪೂಜೆ ಮತ್ತು ಮಹಾ ಮಂಗಳಾರತಿ ನಡೆಯುವುದು. ಸಂಜೆ 5 ಗಂಟೆಯಿಂದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ದೇವಾಲಯಕ್ಕೆ ಆಗಮಿಸಿದ ಭಕ್ತಾರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪೂಜಾ ಕಾರ್ಯಕ್ಕೆ ಆಗಮಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ದೇವಾಲಯದ ಅಧ್ಯಕ್ಷ ಬಿ.ಡಿ.ಗೋವಿಂದ, ಉಪಾಧ್ಯಕ್ಷ ಪೆರುಮಾಳ್, ಖಜಾಂಚಿ ಸಿ.ಯು.ಉದಯಕುಮಾರ್ ಹಾಗೂ ಸಹಕಾರ್ಯದರ್ಶಿ ಟಿ.ಎಲ್.ಪ್ರಕಾಶ್ ಇದ್ದರು. ಹೆಚ್ಚಿನ ವಿವರಗಳಿಗೆ ಮೊ.9663784064, 9164173223 ಗೆ ಸಂಪರ್ಕಿಸಬಹುದು.









