
ಮಡಿಕೇರಿ ಫೆ.3 NEWS DESK : ಮಡಿಕೇರಿ ತಾಲ್ಲೂಕಿನ ಹೊಸ್ಕೇರಿ ಗ್ರಾಮ ಪಂಚಾಯತಿಯಲ್ಲಿ 69.5 ಲಕ್ಷ ರೂಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು, ಕ್ಷೇತ್ರದ ಗ್ರಾಮೀಣ ಭಾಗಗಳಿಗೆ ಮೂಲಭೂತ ಸೌಕರ್ಯವನ್ನು ಶೇ.100 ರಷ್ಟು ಒದಗಿಸುವುದು ತಮ್ಮ ಆದ್ಯತೆಯಾಗಿದ್ದು ಇದನ್ನು ಪೂರ್ಣಗೊಳಿಸಲು ಬದ್ದನಿದ್ದೇನೆ ಎಂದು ತಿಳಿಸಿದರು. ಮುಖ್ಯಮಂತ್ರಿಯವರು, ಉಪ ಮುಖ್ಯಮಂತ್ರಿಯವರು ಸೇರಿದಂತೆ ಸಚಿವ ಸಂಪುಟದ ಎಲ್ಲಾ ಸದಸ್ಯರು ಕೊಡಗಿನ ಅಭಿವೃದ್ಧಿ ಬಗ್ಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದು ಅವರ ಸಹಕಾರಕ್ಕೆ ಧನ್ಯವಾದ ಹೇಳಬಯಸುತ್ತೇನೆ ಎಂದು ತಿಳಿಸಿದರು. ನೂತನವಾಗಿ ನಿರ್ಮಾಣವಾಗುತ್ತಿರುವ ಹೊಸ್ಕೇರಿ ಪಂಚಾಯತಿ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿದ ಶಾಸಕರು ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ
ಎಂದರು. ಈಗಾಗಲೇ ಪಂಚಾಯತ್ ಭವನ ನಿರ್ಮಾಣಕ್ಕೆ ಈಗಿನ ಸರ್ಕಾರದಿಂದ ಹತ್ತು ಲಕ್ಷ ರೂಗಳ ಅನುದಾನ ಒದಗಿಸಲಾಗಿದ್ದು, ಹೆಚ್ಚುವರಿ ಅನುದಾನ ನೀಡುವ ಭರವಸೆಯನ್ನು ನೀಡಿದರು. ಈ ಸಂಧರ್ಭದಲ್ಲಿ ಹೆಚ್.ಎ.ಹಂಸ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರಿರ ಮೋಹನ್ ದಾಸ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಭಾರ್ಗವ್ ಚೇರಿಯಮನೆ ಬ್ಲಾಕ್ ಸಂಘಟನ ಕಾರ್ಯದರ್ಶಿ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಬ್ದುಲ್ ರಜಾಕ್, ಗ್ರಾ.ಪಂ ಅಧ್ಯಕ್ಷರಾದ ಕವಿತ, ಗ್ರಾ.ಪಂ ಸದಸ್ಯರಾದ ಪಿ.ಕೆ.ಯುಸೂಫ್ ಆಲಿ, ಬಿ.ಎ.ಉಷಾ ತಂಗಮ್ಮ, ಪ್ರಮುಖರಾದ ಚಂದನ್ ಬಲ್ಲಚಂಡ, ವಿ.ಜಿ.ಮೋಹನ್, ಹರಿ ಪ್ರಸಾದ್ ಕೋಚನ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ಹೊಸ್ಕೇರಿ ಅರೆಕಾಡು ವಲಯಧ್ಯಕ್ಷರದ ಸದಾ ಡೇನಿಸ್ ಮುಕ್ಕಾಟಿ, ಮರಗೋಡು ವಲಯಧ್ಯಕ್ಷರಾದ ವಿವೇಕಾನಂದ,ಹಿರಿಯ ಮುಖಂಡರಾದ ಮಂದಿ ದೇವಯ್ಯ, ಕವನ್ ಕೊತ್ತೊಳಿ,ಶರಣ್, ನೆಲ್ಲಮಕ್ಕಡ ಪ್ರಕಾಶ್, ಕಿರಣ್ ದೇರಜೆ,P ಆ ಔ ಅಬ್ದುಲ್ಲಾ, ಹಾಗೂ ಗ್ರಾಮಸ್ಥರು ಹಾಜರಿದ್ದರು.









