
ನಾಪೋಕ್ಲು ಫೆ.3 NEWS DESK : ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮತ್ತು ಗುರಿಯ ಕಡೆಗೆ ಗಮನ ನೀಡಬೇಕೆಂದು ಕೀಪಾಡಂಡ ಮೊಣ್ಣಪ್ಪ ಹೇಳಿದರು. ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 10ನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿ ಮುಫೀದಳಿಗೆ ಕೀಪಾಡಂಡ ಬಸಪ್ಪ ಸ್ಮರಣಾರ್ಥ ಸ್ಥಾಪಿಸಿದ ರೂ.7000 ಮೊತ್ತವನ್ನು ವಿತರಿಸಿ ಮಾತನಾಡಿದರು. ದತ್ತಿನಿಧಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಿ.ಎಸ್.ರಾಮಕೃಷ್ಣ, ವಿದ್ಯಾರ್ಥಿಗಳ ಕಲಿಕೆಗೆ ಇದೊಂದು ಪ್ರೇರಣದಾಯಕವಾದ ಅಂಶವಾಗಿದ್ದು, ವಿದ್ಯಾರ್ಥಿಗಳು ಈ ಹಣವನ್ನು ತಮ್ಮ ಮುಂದಿನ ಕಲಿಕೆಗೆ ಬಳಸಿಕೊಳ್ಳುವುದರ ಮೂಲಕ ಉನ್ನತವ್ಯಾಸಂಗವನ್ನು ಮಾಡುವಂತಾಗಲಿ ಎಂದರು. ಶಿಕ್ಷಕರಾದ ಸಿ.ಆರ್.ಲೋಕೇಶ್ ಸ್ವಾಗತಿಸಿದರು. ಎಸ್.ಪಿ.ಪರಮೇಶ್ ವಂದಿಸಿದರು.
ವರದಿ : ದುಗ್ಗಳ ಸದಾನಂದ









