
ಮಡಿಕೇರಿ NEWS DESK ಫೆ.4 : ಕೇವಲ ಮೂರುವರೆ ಸಾವಿರದಷ್ಟಿರುವ ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ “ಸಂಘ” ವರ್ಚುವಲ್ ಇಂಟ್ಯಾಂಜಿಬಲ್ (ಅದೃಶ್ಯ) ಮತ ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ಅಸೆಂಬ್ಲಿಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶೇಷ ಪ್ರಾತಿನಿಧ್ಯ, ಅಥವಾ ಪರ್ಯಾಯವಾಗಿ, ಕೊಡವ ಸಾಂಪ್ರದಾಯಿಕ ಆವಾಸಸ್ಥಾನವನ್ನು ಒಳಗೊಂಡಿರುವ ವಿಶೇಷ ಕೊಡವ ಅಸೆಂಬ್ಲಿ ಮತ್ತು ಸಂಸದೀಯ ಕ್ಷೇತ್ರವನ್ನು ರಚಿಸಬೇಕು. ಆ ಮೂಲಕ ನಮಗೆ ಕೇಂದ್ರ ವಿಸ್ತಾ ಅರ್ಥಾತ್ ಹೊಸ ಪಾರ್ಲಿಮೆಂಟ್ ಹಾಗೂ ರಾಜ್ಯ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಹಕ್ಕೊತ್ತಾಯ ಮಂಡಿಸಿತು. ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ “ಸಂಘ” ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ಅಸೆಂಬ್ಲಿಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ, ಆದಿಮಸಂಜಾತ ಕೊಡವರಿಗೆ ಕೊಡವ ಸಂಪ್ರದಾಯಿಕ ಜನ್ಮಭೂಮಿಯಲ್ಲಿ ಪ್ರತ್ಯೇಕ ಲೋಕಸಭೆ ಮತ್ತು ಅಸಂಬ್ಲಿ ಕೊಡವ ಮತ ಕ್ಷೇತ್ರವನ್ನು ರಚಿಸಬೇಕು ಎಂದು ಪ್ರತಿಪಾದಿಸಿದರು. 2026ರಲ್ಲಿ ಸಂಸತ್ತಿನ ಮತ್ತು ಅಸೆಂಬ್ಲಿಯ ಕ್ಷೇತ್ರದ ಗಡಿ ಮತ್ತು ಸಂಖ್ಯೆ ಪುನರ್ ನಿರ್ಣಯಿಸಲಾಗುತ್ತದೆ. ಇದಕ್ಕಾಗಿ ಪ್ರಕ್ರಿಯೆಯು ಪ್ರಾರಂಭವಾಗಿದೆ. ಇದರ ದುರ್ಲಾಭವನ್ನು ಪಡೆದುಕೊಂಡು ಕೊಡವ ವಿರೋಧಿಗಳು ಆದಿಮಸಂಜಾತ ಕೊಡವರನ್ನು ಹಣಿದು ಅಂಚಿಗೆ ಹಾಕಲು ಸಂಚು ಹೂಡುತ್ತಿದ್ದಾರೆ. ರಾಜ್ಯದಲ್ಲಿ ಗರಿಷ್ಟ ಪ್ರಾತಿನಿಧ್ಯವನ್ನು ಹೊಂದಿರುವ ಜನಸಂಖ್ಯಾ ಪ್ರಾಭಲ್ಯದ ಕೂಟ ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನು ನಿರ್ಮಿಸುವ ನೆಪದಲ್ಲಿ ಸುಳ್ಯ ತಾಲ್ಲೂಕನ್ನು ಕೊಡಗಿಗೆ ಸೇರಿಸಿ ಪ್ರತ್ಯೇಕ ಕೊಡಗು ಲೋಕಸಭಾ ಕ್ಷೇತ್ರ ನಿರ್ಮಿಸಿ ಶಾಶ್ವತವಾಗಿ ತಾವು ಸಂಸತ್ ಪ್ರಾತಿನಿಧ್ಯ ಪಡೆಯುವುದರೊಂದಿಗೆ ಕೊಡವರಿಗೆ ಪ್ರಾತಿನಿಧ್ಯ ಸಂಸತ್ತಿನಲ್ಲಿ ದಕ್ಕದಂತೆ ಒಳಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು. ಪ್ರಸ್ತುತ ಸರ್ಕಾರವು ಜನಸಂಖ್ಯೆಯ ಆಧಾರದ ಮೇಲೆ ವಿಧಾನಸಭೆ ಮತ್ತು ಸಂಸತ್ತನ್ನು ಮರುಹೊಂದಿಸುತ್ತಿದೆ ಮತ್ತು ಇದು ಮತ್ತೊಂದು ರೀತಿಯಲ್ಲಿ ಸರ್ಕಾರವು ದೇಶದ ಒಳಿತಿಗಾಗಿ ಜನಸಂಖ್ಯಾ ನಿಯಂತ್ರಣ ಮಾಡಿದ ದೇಶಭಕ್ತ ಕೊಡವರನ್ನು ಸಂಸತ್ತಿನಲ್ಲಿ ಪ್ರಾತಿನಿಧ್ಯವನ್ನು ಕಸಿದುಕೊಳ್ಳುವ ಮೂಲಕ ಶಿಕ್ಷಿಸುತ್ತಿದೆ. ಆದಿಮಸಂಜಾತ ಕೊಡವರು ಕೊಡವ್‌ಲ್ಯಾಂಡ್‌ನ ಪ್ರಾಚೀನ ಬುಡಕಟ್ಟು. ಆದಿಮಸಂಜಾತ ನೆಟೀವ್ ರೆಡ್ ಇಂಡಿಯನ್ನರು ಅಮೆರಿಕಕ್ಕೆ ಹೇಗೆ ಮೂಲನಿವಾಸಿಗಳೊ, ಕಾಶ್ಮೀರಿ ಪಂಡಿತರು ಜಮ್ಮು ಮತ್ತು ಕಾಶ್ಮೀರಕ್ಕೆ ಹೇಗೆ ಆದಿಮಸಂಜಾತರೋ ನಾವು ಕೊಡವರು ಕೊಡವಲ್ಯಾಂಡ್‌ಗೆ ಆದಿಮ ಸಂಜಾತರು ಮತ್ತು ಕೊಡವ ಲ್ಯಾಂಡ್‌ಗೆ ಮಾತ್ರ ಸೀಮಿತರು. ಆದಿಮಸಂಜಾತ ಕೊಡವರು ಒಂದೇ ಜನಾಂಗವಾಗಿದ್ದು, ಈ ಮಣ್ಣಿನೊಂದಿಗೆ ಅಂತರ್ಗತವಾದ ಅನನ್ಯ ಮತ್ತು ಅಪರೂಪದ ಬುಡಕಟ್ಟು ಜನರಾಗಿದ್ದೇವೆ. ನಮ್ಮ ಜನಸಂಖ್ಯಾ ಗಾತ್ರವು ಅತ್ಯಲ್ಪವಾಗಿದ್ದರೂ, ನಾವು ಸ್ವತಂತ್ರರಾಗಿದ್ದೇವೆ, ನಮ್ಮ ಆಲೋಚನಾ ಮಾದರಿಗಳು ವಿಭಿನ್ನವಾಗಿವೆ ಮತ್ತು ಸ್ಥಳಾಕೃತಿ, ಜನಸಂಖ್ಯಾಶಾಸ್ತ್ರ, ನಮ್ಮ ಸಾಮಾಜಿಕ ರಚನೆಯು ಸಂವೇದನಾಶೀಲ ಮತ್ತು ಸೂಕ್ಷ್ಮ ಆಂತರಿಕ/ಒಳಕೋಶಗಳಿಂದ ಸುತ್ತುವರಿಯಲ್ಪಟ್ಟಿದೆ. ರಾಜಕೀಯ ಕ್ಷೇತ್ರದಲ್ಲಿ ನಮಗೆ ಗೌರವಾನ್ವಿತ ಸ್ಥಾನಬೇಕು. ನಮ್ಮ ರಾಷ್ಟ್ರದ ಸರ್ವೋಚ್ಚ ಕಾನೂನು ರಚನೆ ಸಂಸ್ಥೆ ಹಾಗೂ ದೇಶದ ಪ್ರಜಾತಂತ್ರ ವ್ಯವಸ್ಥೆಯ ದೇಗುಲವಾಗಿರುವ ಪಾರ್ಲಿಮೆಂಟ್‌ನಲ್ಲಿ ಮತ್ತು ವಿಧಾನಸಭೆಯಲ್ಲಿ ನಮಗೆ ಪ್ರಾತಿನಿಧ್ಯವಿರಬೇಕು. ಭಾರತವು ಅತಿದೊಡ್ಡ ಜನಾಂಗೀಯ ವೈವಿಧ್ಯತೆ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ರಾಷ್ಟ್ರವಾಗಿದೆ. ನಮ್ಮ ಸಂವಿಧಾನವು ಹೊಂದಿಕೊಳ್ಳುವ ಮತ್ತು ಅದರ ಸ್ವರೂಪದಲ್ಲಿ ಅಳವಡಿಸಿಕೊಳ್ಳಬಹುದಾದ ಸರ್ವಕಾಲಿಕ ವಿಕಾಸಪೂರ್ಣ ಸಂವಿಧಾನವಾಗಿದೆ. ಆದ್ದರಿಂದ ಸೂಕ್ಷ್ಮ, ದೇಶಭಕ್ತ ಕೊಡವ ಸಮುದಾಯವನ್ನು ಸಬಲೀಕರಣಗೊಳಿಸಲು, ಕೊಡವ ಸಾಂಪ್ರದಾಯಿಕ ಆವಾಸಸ್ಥಳಕ್ಕೆ ವಿಶೇಷ ಪ್ರಾತಿನಿಧ್ಯವನ್ನು ರಚಿಸುವ ಮೂಲಕ ಅಥವಾ ಪರ್ಯಾಯವಾಗಿ, ಸಂಸತ್ತಿನಲ್ಲಿ ಮತ್ತು ಅಸೆಂಬ್ಲಿಯಲ್ಲಿ ನಮಗೆ ಅವಕಾಶ ಕಲ್ಪಿಸಿ 3500 ಬೌದ್ಧ ಸನ್ಯಾಸಿ ಸಮುದಾಯಕ್ಕೆ ಸಿಕ್ಕಿಂ “ಸಂಘ” ಕ್ಷೇತ್ರದ (ಇದು ಪ್ರಸ್ತುತ ಸೋನಮ್ ಲಾಮಾ ಪ್ರತಿನಿಧಿಸುತ್ತಿರುವ ನಮ್ಮ ಸಂವಿಧಾನದ 371 (ಎಫ್) ವಿಧಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.) ಮಾದರಿಯಲ್ಲಿ ಅಮೂರ್ತ, ವರ್ಚುವಲ್ ಅಸೆಂಬ್ಲಿ ಮತ್ತು ಸಂಸತ್ತಿನ ವಿಶೇಷ ಕ್ಷೇತ್ರ ರಚಿಸಬೇಕು. ಸಿಎನ್‌ಸಿ ಕೊಡವ ಆಕಾಂಕ್ಷೆಗಳ ಜ್ಯೋತಿ ಧಾರಕ ಆಂದೋಲನ, ಕೊಡವ ಲೋಕದ ಆಧಮನೀಯ ಧ್ವನಿ ಮತ್ತು ಕೊಡವರ ಸಾಕ್ಷಿ ಪ್ರಜ್ಞೆಯಾಗಿ ಕಳೆದ 35 ವರ್ಷಗಳಿಂದ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆದಿಮಸಂಜಾತ ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯ ಹಕ್ಕುಗಳಿಗಾಗಿ ಸಂವಿಧಾನ 371 ಮತ್ತು 244 ವಿಧಿ ಹಾಗೂ 6ನೇ ಮತ್ತು 8ನೇ ಶೆಡ್ಯೂಲ್, ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶ್ವ ರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಹಕ್ಕುಗಳ ಮಾನ್ಯತೆ ಮತ್ತು ಸಂವಿಧಾನದ 340-342 ವಿಧಿಗಳ ಅಡಿಯಲ್ಲಿ ಆದಿಮಸಂಜಾತ ಕೊಡವರಿಗೆ ಆದಿಮ ಬುಡಕಟ್ಟು ವರ್ಗೀಕರಣ ಹಾಗೂ ನಮ್ಮ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ÷್ಯಕ್ಕೆ ಸಂವಿಧಾನದ ವಿಶೇಷ ಖಾತರಿಗಾಗಿ ಶಾಂತಿಯುತವಾಗಿ, ಪಟ್ಟುಬಿಡದೆ ಶ್ರಮಿಸುತ್ತಿದೆ. ನೈಸರ್ಗಿಕ ನ್ಯಾಯಯುತ ದೃಷ್ಟಿಕೋನದಿಂದ ಸಂಸತ್ತು ಮತ್ತು ಅಸೆಂಬ್ಲಿ ಕ್ಷೇತ್ರಗಳ ಡಿಲಿಮಿಟೇಶನ್ ಕಸರತ್ತನ್ನು ಪ್ರಕ್ರಿಯೆಗೊಳಿಸುವಾಗ ನ್ಯಾಯ ಮತ್ತು ಸಮಾನತೆಯ ಹಿತಾಸಕ್ತಿಯಲ್ಲಿ ಅಪ್ರತಿಮ ದೇಶಭಕ್ತಿಯ ಆದಿಮಸಂಜಾತ ಕೊಡವರ ಈ ನ್ಯಾಯಸಮ್ಮತ ಹಕ್ಕನ್ನು ಈಗ ಸರ್ಕಾರವು ಅರಿತುಕೊಳ್ಳಬೇಕು. ಮೇಲಿನ ಶಾಸನ ಬದ್ಧ ಹಕ್ಕೋತ್ತಾಯಗಳೊಂದಿಗೆ ನಾವು ಶಾಂತಿಯುತ ಸಭೆಗಳು, ಮಾನವ ಸರಪಳಿ, ಬೀದಿ ಮೂಲೆ ಸಭೆಗಳು, ಗ್ರಾಮ ಮಂದ್ ಸಭೆಗಳು, ನಾಡ್ ಮಂದ್ ಸಭೆಗಳನ್ನು ಆಯೋಜಿಸುವ ಮೂಲಕ ಕೊಡವರ ಸಾಮೂಹಿಕ ಮಂಜೂರಾತಿಯನ್ನು ಸಜ್ಜುಗೊಳಿಸಲು, ವರ್ಷವಿಡೀ, ಅಂದರೆ ಡಿಲಿಮಿಟೇಶನ್ ಪ್ರಕ್ರಿಯೆ 2026 ಪೂರ್ಣಗೊಳ್ಳುವವರೆಗೆ ಜಾಗೃತಿ ನಡೆಸುತ್ತ ಬೆಂಬಲವನ್ನು ಪಡೆಯುವ ಕಾರ್ಯವನ್ನು ಇಂದಿನಿಂದಲೇ ಮುಂದುವರೆಸುತ್ತೇವೆ. ಸಿಎನ್‌ಸಿ ನಮ್ಮ ಪವಿತ್ರ ಯಾತ್ರಾಸ್ಥಳವಾದ ತಲಕಾವೇರಿಯಲ್ಲಿ ಪ್ರಾರ್ಥನೆ ನಡೆಸುವ ಮೂಲಕ ಮತ್ತು ನಮ್ಮ ಈ ಧರ್ಮಯಾತ್ರೆ (ಮಿಷನ್) ಯಶಸ್ವಿಯಾಗಲು ಆಶೀರ್ವಾದವನ್ನು ಕೋರಿದ್ದೇವೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ, ರೇಖಾ ನಾಚಪ್ಪ, ಅರೆಯಡ ಸವಿತಾ, ಬೊಟ್ಟಂಗಡ ಸವಿತಾ, ಚೋಳಪಂಡ ಜ್ಯೋತಿ, ನಂದಿನೆರವಂಡ ನಿಶಾ, ಶ್ರೀಮತಿ ಅಪ್ಪಾರಂಡ ನಂದಿನಿ, ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಪಟ್ಟಮಾಡ ಕುಶ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅರೆಯಡ ಗಿರೀಶ್, ಮಂದಪಂಡ ಮನೋಜ್, ಚಂಬಂಡ ಜನತ್, ಬೊಟ್ಟಂಗಡ ಗಿರೀಶ್, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಕಿರಿಯಮಾಡ ಶೆರಿನ್, ಮೇದುರ ಕಂಠಿ, ಬಾಚಿನಾಡಂಡ ಗಿರಿ, ಮೂಕೊಂಡ ದಿಲೀಪ್, ಕೂಪದೀರ ಸಾಬು, ನಂದಿನೆರವಂಡ ವಿಜು, ಅಪ್ಪಾರಂಡ ಪ್ರಸಾದ್, ಪಾರ್ವಂಗಡ ನವಿನ್, ಅಪ್ಪೆಂಗಡ ಮಾಲೆ, ಚೋಳಪಂಡ ನಾಣಯ್ಯ, ನಂದಿನೆರವಂಡ ಬೋಪಣ್ಣ, ಮೂಕೊಂಡ ದಿಲೀಪ್, ಅಪ್ಪಚ್ಚಿರ ಮಂದಣ್ಣ, ಬೊಳ್ಳಾರ್‌ಪಂಡ ಸಾಬು ಚೆಂಗಪ್ಪ, ಕುಂಚೇಟಿರ ಸುರೇಶ್ ನಂಜಪ್ಪ, ಚೀಯಬೇರ ಸತೀಶ್ ಸೋಮಣ್ಣ, ಪಟ್ಟಮಾಡ ಅಶೋಕ್, ಬಡ್ಡಿರ ನಂದ, ಕಾಡಂಡ ಅಪ್ಪಸ್ವಾಮಿ, ಕೇಕಡ ಸೂರಿ ಪಳಂಗಪ್ಪ, ಕೇಕಡ ರಮೇಶ್ ಉತ್ತಪ್ಪ, ಅಪ್ಪಾರಂಡ ಶ್ರೀನಿವಾಸ್, ಕೇಕಡ ಸುಬ್ರಮಣಿ, ಮಂದಪಂಡ ವೇಣಾ, ಮಂದಪಂಡ ಸೂರಜ್, ಪುಲ್ಲೇರ ಕಾಳಪ್ಪ ಅವರುಗಳು ಪಾಲ್ಗೊಂಡು ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಕ್ಕೊತ್ತಾಯ ಮಂಡಿಸಿದರು.











