
ನಾಪೋಕ್ಲು ಫೆ.4 NEWS DESK : ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪಟ್ರಪಂಡ ಮೋಹನ್ ಮುದ್ದಪ್ಪ, ಉಪಾಧ್ಯಕ್ಷರಾಗಿ ನಾಟೋಳಂಡ ಕಸ್ತೂರಿ ಉತ್ತಪ್ಪ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಗ್ರಾಹಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ನಿರ್ದೇಶಕರುಗಳಾಗಿ ಕುಲ್ಲೇಟಿರ ಎಂ.ಅರುಣ, ನಾಯಕಂಡ ಟಿ.ಮುತ್ತಪ್ಪ, ಬೊಟ್ಟೋಳಂಡ ಕೆ.ಕುಟ್ಟಪ್ಪ, ಬೊಟ್ಟೋಳಂಡ ಎ.ಪೊನ್ನಯ್ಯ, ಕೊಂಬಂಡ ಕೆ.ಗಣೇಶ್, ಹೆಚ್.ಎ.ಬೊಳ್ಳು, ಕೇಟೊಳಿರ ಗಣಪತಿ ಮುತ್ತಮ್ಮ, ಪಾಡಿಯಮ್ಮನ ಎ.ಮಹೇಶ್, ಕೆಲೇಟಿರ ಟಿ. ಗಣಪತಿ ಆಯ್ಕೆ ಆಗಿದ್ದಾರೆ. ಸಂಘದ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ತಿಮ್ಮಯ್ಯ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.









