
ಮಡಿಕೇರಿ ಫೆ.6 NEWS DESK : ಕೇಂದ್ರ ಬಜೆಟ್ ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕೊಡಗು ಜಿಲ್ಲಾ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಸಮಿತಿಯ ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್, 2025-26 ಕೇಂದ್ರ ಬಜೆಟ್ ಜನವಿರೋಧಿಯಾಗಿದ್ದು, ಜನಸಾಮಾನ್ಯರ ಪರವಾಗಿಲ್ಲ. ಅಂಬಾನಿ, ಅದಾನಿ ಪರವಾಗಿದ್ದು, ದೇಶದ ಕಾರ್ಪೊರೇಟ್ ಕಂಪೆನಿಗಳು, ಬಂಡವಾಳಶಾಹಿಗಳಿಗೆ ಶಕ್ತಿ ತುಂಬುವ ಬಜೆಟ್ ಆಗಿದೆ. ಅಸಂಘಟಿತ ಕಾರ್ಮಿಕರ ವೇತನ ಹೆಚ್ಚಳ ಸೇರಿದಂತೆ ಅವರನ್ನು ಆರ್ಥಿಕವಾಗಿ ಸಬಲರಾಗಿಸುವ ಯೋಜನೆಗಳಿಲ್ಲ. ರೈತರಿಗೂ ಯಾವುದೇ ಕೊಡುಗೆ ಕೊಟ್ಟಿಲ್ಲ ಎಂದು ದೂರಿದ ಅವರು, ಕಾರ್ಮಿಕರ ಪರವಾಗಿ ಬಜೆಟ್ ಮಂಡಿಸುವಂತೆ ಎಂದು ಆರೋಪಿಸಿದ ಭರತ್ ಕೇಂದ್ರ ಸರ್ಕಾರ ಕಾರ್ಮಿಕರ ಪರವಾದ, ರೈತರ ಪರವಾದ ಬಜೆಟ್ ಮಂಡಿಸುವಂತೆ ಒತ್ತಾಯಿಸಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಾಬು, ಖಜಾಂಚಿ ಎನ್.ಡಿ.ಕುಟ್ಟಪ್ಪ, ಪದಾಧಿಕಾರಿಗಳಾದ ಶಾಜಿ ರಮೇಶ್, ಸಾವಿತ್ರಿ, ಜಾನಕಿ, ಯಮುನಾ, ಲಲಿತ, ಹಮೀದ್ ಸೇರಿದಂತೆ ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.









