



ಮಡಿಕೇರಿ NEWS DESK ಫೆ.6 : ಕೊಡವ ಜನಾಂಗ ಮತ್ತು ಕೊಡವ ಭಾಷಿಕ ಸಮುದಾಯಗಳ ಕೊಡವಾಮೆ ಬಾಳೋ ಪಾದಯಾತ್ರೆ ಹಿನ್ನೆಲೆ ಮಡಿಕೇರಿ ನಗರದಲ್ಲಿ ಫೆ.7 ರಂದು ನಗರದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ. ಸುದರ್ಶನ ರಸ್ತೆ, ಜಿಲ್ಲಾ ಆಸ್ಪತ್ರೆ ರಸ್ತೆ, ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗಳೂರು ರಸ್ತೆ, ವಿನೋದ್ ಮೆಡಿಕಲ್ ಮುಂಭಾಗ, ಬಾಲಾಜಿ ಸ್ಟೋರ್ ಮುಂಭಾಗ, ಹಳೇ ಖಾಸಗಿ ಬಸ್ ನಿಲ್ದಾಣ ಆವರಣ, ಕಾರ್ ಟ್ಯಾಕ್ಸಿ ನಿಲ್ದಾಣ, ಕಾಲೇಜು ರಸ್ತೆ, ಗಣಪತಿ ಬೀದಿ, ಮಾರುಕಟ್ಟೆ ಆವರಣ, ಜ್ಯೂನಿಯರ್ ಕಾಲೇಜು ರಸ್ತೆ ಸೇರಿದಂತೆ ಜನ ಸಂದಣಿ ಏರ್ಪಡುವ ಪ್ರದೇಶಗಳಲ್ಲಿ ಎಲ್ಲಾ ರೀತಿಯ ವಾಹನ ಪಾರ್ಕಿಂಗ್ ನಿಷೇಧ ಮಾಡಲಾಗಿದೆಯೆಂದು ಪೊಲೀಸ್ ಇಲಾಖಾ ಪ್ರಕಟಣೆ ತಿಳಿಸಿದೆ. ಎಲ್ಲೆಲ್ಲಿ ಪಾರ್ಕಿಂಗ್- ಪಾದಯಾತ್ರೆ ಮಡಿಕೇರಿಗೆ ಮೂರ್ನಾಡು ಮಾರ್ಗವಾಗಿ ಮಡಿಕೇರಿಗೆ ಬರುವ ಹಿನ್ನೆಲೆ, ಕಗ್ಗೋಡ್ಲು ಅಂಬರ ರೆಸಾರ್ಟ್ ಮೈದಾನದಲ್ಲಿ, ಮೇಕೇರಿ ಶಾಲಾ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಾಗಮಂಡಲ ಕಡೆಯಿಂದ ಬರುವವರ ವಾಹನಗಳ ನಿಲುಗಡೆಎ ತಾಳತ್‌ಮನೆ ನೇತಾಜಿ ಮೈದಾನ, ಗ್ಲಾಸ್ ಬ್ರಿಡ್ಜ್ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಿದ್ದಾಪುರ, ಚೆಟ್ಟಳ್ಳಿ, ಕುಶಾಲನಗರ ವಿಭಾಗಗಳಿಂದ ಬರುವವರಿಗೆ ಚೈನ್ ಗೇಟ್ ಬಳಿಯ ಕೊಡವ ಸಮಾಜದ ಜಾಗದಲ್ಲಿ, ಆರ್‌ಎಂಸಿ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದರೆ, ಗಾಳಿಬೀಡು ವಿಭಾಗದಿಂದ ಬರುವವರಿಗೆ ಐಟಿಐ ಮೈದಾನ, ಸಂತ ಜೋಸೆಫರ ಶಾಲಾ ಮೈದಾನ ಮತ್ತು ಹೊಸ ಖಾಸಗಿ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.