


ಮಡಿಕೇರಿ NEWS DESK ಜ.12 : ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ 13ನೇ ಅಂತರಾಷ್ಟ್ರೀಯ ಆನ್ಲೈನ್ ಬ್ರೈನೋಬ್ರೈನ್ ಸ್ಪರ್ಧೆ-2025”ರಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ 89 ವಿದ್ಯಾರ್ಥಿಗಳು ಕೇವಲ 4 ನಿಮಿಷಗಳಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. 38 ಚಾಂಪಿಯನ್ ಟ್ರೋಫಿ, 34 ಚಿನ್ನದ ಪದಕ ಮತ್ತು 17 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 78 ರಾಷ್ಟ್ರಗಳ ಒಟ್ಟು 23,128 ವಿದ್ಯಾರ್ಥಿಗಳು ವಿವಿಧ ರಾಷ್ಟ್ರದ ಬ್ರೈನೋಬ್ರೈನ್ ಕೇಂದ್ರಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೊಡಗು ಜಿಲ್ಲೆಯ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದಿಂದ ಒಟ್ಟು 89 ವಿದ್ಯಾರ್ಥಿಗಳು ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಆನ್ಲೈನ್ ಸ್ಪರ್ಧೆಯಲ್ಲಿ 4 ನಿಮಿಷಗಳ ನಿಗಧಿತ ಸಮಯ ಮಾತ್ರವಿದ್ದು, ಮಡಿಕೇರಿ ಗುಡ್ಡಗಾಡು ಪ್ರದೇಶವಾಗಿದ್ದರಿಂದ ಇಂಟರ್ನೆಟ್ ಕನೆಕ್ಷನ್ ಹಾಗೂ ನೆಟ್ವರ್ಕ್ ಸಮಸ್ಯೆ ಇದ್ದರು ಸಹ ಸವಾಲಾಗಿ ಸ್ವೀಕರಿಸಿ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿ ಭಾಗವಹಿಸಿದ ಎಲ್ಲಾ 89 ಮಕ್ಕಳು ವಿಜೇತರಾಗಿರುವುದು ಪ್ರಶಂಸನೀಯವಾಗಿದೆ ಎಂದು ಮಾಪಂಗಡ ಕವಿತಾ ಕರುಂಬಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಪ್ರಶಂಸೆ ಮತ್ತು ಅಭಿನಂದನೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಲ್ಲಬೇಕು. ಕರ್ನಾಟಕದಿಂದ ಭಾಗವಹಿಸಿದ ಬ್ರೈನೋಬ್ರೈನ್ ಕೇಂದ್ರಗಳ ಪೈಕಿ ಮಡಿಕೇರಿ ಕೇಂದ್ರ ಅತ್ಯಧಿಕ ಚಾಂಪಿಯನ್ಸ್ ಪಟ್ಟ ಪಡೆದಿದ್ದು, ಇದು ನಮ್ಮ ಕೇಂದ್ರಕ್ಕೆ ಮತ್ತೊಂದು ಹೆಮ್ಮೆಯ ಗರಿ ಎಂದು ತಿಳಿಸಿದ್ದಾರೆ.
*ಚಾಂಪಿಯನ್ ಟ್ರೋಫಿ ವಿಜೇತರು* ಸಿಮ್ರಾ ಕುಲ್ಸುಮ್, ಜೋನ್ನಾ ಮಡ್ತಾ, ಕನಿಷಾ ಸುನಿತ್ ಕುಮಾರ್, ಲಿಬಾ ಅರ್ಜೀನ್, ನಿಲ್ಹಾ ಜೆ ತಾರಕನ್, ರಿಯಾಂಕ.ಎಂ., ಶಿಜ್ಹಾ ಫಾತೀಮಾ.ಎಂ.ಎಸ್, ಟಿಯ ಕಿಶೋರ್, ವರುಣಿಕ.ಜಿ, ಆರಾಧ್ಯ.ಎ.ಅಣ್ವೇಕರ್, ಆರಾಧ್ಯ.ಕೆ.ಸಿ, ಐಡೆನ್.ಜೆ.ತಾರಕನ್, ಭುವನ್.ಹೆಚ್.ಆರ್, ಹರ್ಷಿಣಿ.ಎಂ.ಕೆ, ಲಿವ್ಯ ಸುನಿತ್ ಕುಮಾರ್, ಮಾಯಂಕ್ ಎಂ., ನಿಧಿ ಆರ್.ಅಣ್ವೇಕರ್, ಶೌರ್ಯ ಎಸ್.ವಿ. ಕುಡ್ತೇಕರ್, ಯಾನ್ವಿ ಬೋಜಮ್ಮ ಎಂ.ಪಿ., ಅಭಿನವ್ ಕ್ರಿಷ್ ಜಿ., ದ್ರುಪದ್.ಪಿ ಮಣಿಕೋಥ್, ರೈವತ್ ಪಟೇಲ್ ಎನ್.ಆರ್, ಲಾಂಚನ್.ಕೆ.ಟಿ, ಮಾನ್ವಿ ಜಿ.ವರ್ಣೇಕರ್, ಅಲುಫ್ ಎ.ಆರ್, ಜಾರ್ಜ್ ಮ್ಯಾಥಿವ್, ಕೋಸಿಗಿ ಸಾತ್ವಿಕ್ ಸಾಮ್ರಾಟ್, ಲಿನಿತ್.ಬಿ.ಎಲ್, ಪ್ರಧಾನ್ ಶತಾಯುಷ್, ರೋನಿತ್ ತಮ್ಮಯ್ಯ.ಪಿ.ಕೆ, ಅನೀಸನ್ ಪಿ., ಬಿ.ಡಿ.ಕುಷಿ, ಕೋಸಿಗಿ ಸಮರ್ಥ್ ಸಾಮ್ರಾಟ್, ಜಿ.ಪ್ರಣಿತ, ಚಿರಂತನ್ ಆರ್ ಕಾಮತ್, ಆರವ್ ಬೋಪಣ್ಣ ಬಿ.ಎಂ, ಐಶ್ವರ್ಯಎಸ್., ಅನ್ವಿ.ಪಿ
*ಚಿನ್ನದ ಪದಕ ವಿಜೇತರು* ದಿಶಾ.ಎಸ್.ಶಿರೂರ್, ಕುಶನ್ ದೇವಪ್ಪ.ವೈ.ಡಿ, ಮೊಹಮ್ಮದ್ ಶಯಾನ್.ಎಂ.ಎಸ್., ಹಂಸಿನಿ.ಎಸ್.ಪಿ, ಪಾವನಿ.ಕೆ.ಕುಂದರ್, ಆಧ್ಯ ಜಿ ವರ್ಣೇಕರ್, ಚಾರ್ವಿ ದೇಚಮ್ಮ.ಎಸ್.ಎ, ಧನ್ವಿ ಪೂವಮ್ಮ.ಬಿ.ಎಂ., ಧನ್ವಿನ್ ಪೂವಣ್ಣ.ಬಿ.ಎಂ., ರಿಹಾಬ್, ರೋನಿತ್ ಗಣಪತಿ.ಎ.ಎಸ್., ವಿಕಾಸ್.ಹೆಚ್.ಹೆಚ್., ಯಶ್ರಾಜ್.ಆರ್.ಅಣ್ವೇಕರ್, ಅಭೀಷು.ಎಂ.ಹೆಚ್, ಭುವನ್.ಕೆ.ಟಿ, ತನಿಷ್ಕ.ಕೆ.ಎ, ಅದಿದ್ ಅನಿವ್ ಎನ್., ಗಾನವಿ ಗಂಗಮ್ಮ.ಸಿ.ವಿ, ಭುವನ್ ತಿಮ್ಮಯ್ಯ.ಎಂ., ದಿಗಂತ್ ಎಸ್.ಅಣ್ವೇಕರ್, ನಮನ್ ಎಂ.ಗೌಡ, ಶಿವಕುಮಾರ್ ಯು.ಆರ್., ಆದಿತ್ ಗೌತಮ್.ಕೆ., ಕಿಶಿ ಕಾವೇರಮ್ಮ ಎ.ಎಲ್, ಲಿಖಿತ್ ಸೋಮಣ್ಣ ಕೆ.ಎಲ್., ಮಿಯ ಅರುಣ್, ಸೃಷ್ಟಿ ಎಂ.ಆರ್, ಯಶಸ್.ಕೆ.ಯು, ಯಶಿಕಾ.ಎಸ್, ಲಾಸ್ಯ ಕೆ.ಸಿ, ಪ್ರತ್ಯುಷ ಎಂ ಸುವರ್ಣ, ಅಪೇಕ್ಷ ಆರ್ ರೈ, ಮೀನಾಕ್ಷಿ ಡಿ.ಎಂ., ನಾಪಂಡ ನಿಶಾ ಪೂವಣ್ಣ
*ಬೆಳ್ಳಿ ಪದಕ ವಿಜೇತರು* ಚಶ್ಮಿತ.ಎ.ಆರ್., ಅಲ್ಫಾ ಎ.ಆರ್., ಲಾಲಿತ್ಯ ಅಶೋಕ್.ಸಿ., ಶಿಶಿರ್ ಆರ್., ನಿಶ್ಚಲ್.ಆರ್. ಪ್ರೇಕ್ಷ ಟಿ.ಎಂ., ಸುಬ್ಬಯ್ಯ.ಕೆ.ಸಿ., ವಿವಿನ್ ಗಣಪತಿ ಹೆಚ್.ಎಲ್, ಯಜತ್ ಗಣಪತಿ ಪಿ.ಕೆ, ಚೇತಸ್ ಹೆಚ್.ಜೆ, ಹವಿಂತ ಹೆಚ್.ಎಸ್, ಧೃತಿ ಜೆ.ಪೂಜಾರಿ, ಪ್ರಣತಿ ಎಸ್.ಪಿ, ಎನ್.ನಿರಣ್ ಪೂವಣ್ಣ, ಕೃಷ್ಣ ಪ್ರಿಯ ಪಿ.ಕೆ, ನೈಶ ನಾಚಯ್ಯ ಪಾಲೇಕಂಡ, ಪ್ರೀತಂ ಟಿ.ಎಂ.