


ವಿರಾಜಪೇಟೆ ಫೆ.NEWS DESK : ವಿರಾಜಪೇಟೆಯ ಮದರ್ ತೆರೇಸಾ ಸೇವಾ ಕೇಂದ್ರ ವತಿಯಿಂದ ವಿರಾಜಪೇಟೆಯ ಏಕೈಕ ಆಟೋ ಚಾಲಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಿಯಾ ಜೈಸನ್ ಅವರನ್ನು ಸನ್ಮಾನಿಸಲಾಯಿತು. ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳು ಹಾಗೂ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ವಂ.ಫಾ.ಜೇಮ್ಸ್ ಡೊಮಿನಿಕ್ ಸನ್ಮಾನಿಸಿ, ಗೌರವಿಸಿದರು. ನಂತರ ಮಾತನಾಡಿದ ಅವರು ಕುಟುಂಬವನ್ನು ನಿರ್ವಹಿಸಲು ಮಹಿಳೆ ಸಮರ್ಥಳು. ಮಹಿಳೆ ಅಬಲೆಯಲ್ಲ, ಸಬಲೆ. ಮಹಿಳೆ ಮನಸ್ಸು ಮಾಡಿದ್ದಲ್ಲಿ ತನ್ನ ಕುಟುಂಬವನ್ನು ಪೋಷಿಸುವಲ್ಲಿ ಯಾವ ಕಠಿಣ ಕೆಲಸವನ್ನು ಮಾಡಲಿಕ್ಕೆ ಹಿಂಜರಿಯುವುದಿಲ್ಲ ಎಂಬುದಕ್ಕೆ ಪ್ರಿಯ ಜೈಸನ್ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಗುರುಗಳಾದ ರೆ.ಫಾ ಮದಲೈ ಮುತ್ತು, ಸಂಘದ ಅಧ್ಯಕ್ಷರು ಹಾಗೂ ನಿವೃತ್ತ ಡಿ.ಡಿ.ಪಿ.ಐ ಪೆರಿಗ್ರೀನ್ ಎಸ್.ಮಚಡೋ, ಮಾರ್ಟಿನ್ ಬರ್ನಾಡ್, ಚೋಪಿ ಜೋಸೆಫ್, ಜೇಮ್ಸ್ ಮೆನೇಜಸ್, ಅನಿತಾ ನರೋನ್ನ, ಅರುಣ ಡಿಸೋಜಾ, ಮರ್ವಿನ್, ಜೋಕಿಂ ರಾಡ್ರಿಗೀಸ್, ಬೆನೆಡಿಕ್ಟ್ ಸಾಲ್ದಾನ್ಹ, ಚಾರ್ಲ್ಸ್ ಡಿಸೋಜ ಹಾಗೂ ಕೇಂದ್ರದ ಸರ್ವ ಸದಸ್ಯರು ಹಾಜರಿದ್ದು, ಪ್ರಿಯಾ ಅವರನ್ನು ಅಭಿನಂದಿಸಿದರು.