


ಮಡಿಕೇರಿ ಫೆ.17 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯು ಪರಿಷತ್ತಿನ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆಯನ್ನು ಆಚರಿಸುವ ಕುರಿತು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳು ತಾಲ್ಲೂಕು ಅಧ್ಯಕ್ಷರು ಮತ್ತು ಹೋಬಳಿ ಅಧ್ಯಕ್ಷರುಗಳಿಗೆ ಜವಾಬ್ದಾರಿ ಹಂಚಿದ್ದು, ಸ್ವಾಗತ ಸಮಿತಿ ಆಹಾರ ಸಮಿತಿ ಸನ್ಮಾನ ಸಮಿತಿ ಮತ್ತು ಸಾಂಸ್ಕೃತಿಕ ಸಮಿತಿಯನ್ನು ರಚಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಪದ್ಮನಾಭ, ಸದಸ್ಯರುಗಳಾಗಿ ಎ.ವಿ.ಮಂಜುನಾಥ , ಎಸ್.ಎಸ್.ಸಂಪತ್ ಕುಮಾರ್, ಕೆ.ಟಿ.ಬೇಬಿ ಮ್ಯಾಥ್ಯೂ, ಕೋಳೆರ ದಯಾ ಚಂಗಪ್ಪ, ಕೆ.ಎಸ್.ನಾಗೇಶ್, ಕುಲ್ಲಚಂಡ ಪ್ರಮೋದ್ ಗಣಪತಿ, ಉಳುವಂಗಡ ಕಾವೇರಿ ಉದಯ, ವಿ.ಟಿ.ಮಂಜುನಾಥ್ ಜವಾಬ್ದಾರಿ ವಹಿಸಲಾಯಿತು. ವೇದಿಕೆ ಸಮಿತಿ ಅಧ್ಯಕ್ಷರಾಗಿ ಅಂಬೆಕಲ್ ನವೀನ್ ಸದಸ್ಯರುಗಳಾಗಿ ಎಸ್.ಡಿ.ವಿಜೇತ್, ಸುನಿಲ್ ಪತ್ರವೋ, ನಂಗಾರು ಕೀರ್ತಿ ಪ್ರಸಾದ್, ಈರಮಂಡ ಹರಿಣಿ ವಿಜಯ್, ಪಿ.ಎಫ್ ಸಭಾಸ್ಟಿನ್, ಬಿ.ಬಿ.ನಾಗರಾಜ ಆಚಾರ್, ಬಾನಂಗಡ ಅರುಣ್ ರವರನ್ನು ಆರಿಸಲಾಯಿತು. ಆಹಾರ ಸಮಿತಿ ಅಧ್ಯಕ್ಷರಾಗಿ ಕಡ್ಲೇರ ತುಳಸಿ ಮೋಹನ್, ನೆರವಂಡ ಉಮೇಶ್, ಪಿ ರಷಿತ್ ಮಾದಯ್ಯ, ಪಡಞಾರಂಡ ಪ್ರಭು, ಗೋಪಾಲ್ ಪರಾಜೆ, ಸಿ.ಎಸ್ ನಾಗರಾಜ್ ಆರಿಸಲಾಯಿತು. ಸನ್ಮಾನ ಸಮಿತಿ ಅಧ್ಯಕ್ಷರಾಗಿ ಪುದಿಯನೆರವನ ರೇವತಿ ರಮೇಶ್, ಡಾ. ಕಾವೇರಿ ಪ್ರಕಾಶ್, ಈರಮಂಡ ಹರಿಣಿ ವಿಜಯ್, ಕಟ್ಟೆ ಮನೆ ಮಹಾಲಕ್ಷ್ಮಿ, ಎಚ್. ಜಿ ಸಾವಿತ್ರಿ, ಉಳುವಂಗಡ ಕಾವೇರಿ ಉದಯ, ಡಿ.ಪಿ ಶಾಂತಮಲ್ಲಪ್ಪ ಅವರನ್ನು ಆರಿಸಲಾಯಿತು. ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ಡಾ. ಕಾವೇರಿ ಪ್ರಕಾಶ್, ಕಟ್ಟೆಮನೆ ಮಹಾಲಕ್ಷ್ಮಿ, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಜಲಜಾ ಶೇಖರ್, ಎಂ.ಎನ್ ಮೂರ್ತಿ, ಹೆಚ್.ಎಸ್ ಪ್ರೇಮ್ ಕುಮಾರ್, ಈ ಸುಲೇಮಾನ್, ಬಿ.ಹೆಚ್ ಪುಷ್ಪ, ಸಹನಾ ಕಾಂತಬೈಲು, ಕೆ ಎನ್ ದೇವರಾಜ್, ಆರ್.ಪಿ ಚಂದ್ರಶೇಖರ್ ಅವರನ್ನು ಆರಿಸಲಾಯಿತು. ಅದೇ ಸಂದರ್ಭದಲ್ಲಿ ಅಂಜೆ ಮಂಗೇಶರಾಯರ 150ನೇ ವರ್ಷಾಚರಣೆಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಜಿಲ್ಲಾಧ್ಯಕ್ಷ ಎಂ ಪಿ ಕೇಶವ ಕಾಮತ್ ಬಿಡುಗಡೆಗೊಳಿಸಿದರು. ಆ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷರಾದ ಟಿ.ಪಿ ರಮೇಶ್, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಎಸ್ ಐ ಮುನೀರ್ ಅಹ್ಮದ್ ಮತ್ತು ರೇವತಿ ರಮೇಶ್, ಜಿಲ್ಲಾ ಸಹಕಾರ್ಯದರ್ಶಿಗಳಾದ ಜಲಜ ಶೇಖರ್ ಮತ್ತು ವಿ.ಎ ಮಂಜುನಾಥ್, ವಿರಾಜಪೇಟೆ ತಾಲೂಕು ಅಧ್ಯಕ್ಷರಾದ ರಾಜೇಶ್ ಪದ್ಮನಾಭ, ಹೋಬಳಿ ಅಧ್ಯಕ್ಷರುಗಳಾದ ಟಿ.ಹೆಚ್ ಮಂಜುನಾಥ್, ಎಂ ಎನ್ ಮೂರ್ತಿ, ಬಿ.ಬಿ ನಾಗರಾಜ್, ಪಿ.ಎಫ್ ಸಭಾಸ್ಟಿನ್, ಈರಮಂಡ ಹರಿಣಿ ವಿಜಯ್, ಬಿ.ಪಿ ಶಾಂತಮಲ್ಲಪ್ಪ, ಉಪನ್ಯಾಸಕರಾದ ಡಾ. ಕಾವೇರಿ ಪ್ರಕಾಶ್, ಸದಸ್ಯರುಗಳಾದ ಶಬೀರ್, ರಹೀಮ್ ಕಚೇರಿ ಸಿಬ್ಬಂದಿ ರೇಣುಕಾ ಉಪಸ್ಥಿತರಿದ್ದರು.