ಮಡಿಕೇರಿ ಫೆ.18 NEWS DESK : ಅರಮೇರಿ ಕಳಂಚೇರಿ ಮಠದ 228ನೇ ತತ್ತ್ವ ಚಿಂತನಾಗೋಷ್ಠಿಯ ಅಂಗವಾಗಿ ‘ಮಕ್ಕಳ ಭವಿಷ್ಯದ ನಿರ್ಧಾರದಲ್ಲಿ ಪೋಷಕರ ಶಿಕ್ಷಕರ ಪಾತ್ರ’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಬಳಗದ ಸದಸ್ಯೆ ಕೆ.ಜಯಲಕ್ಷ್ಮಿ 65ನಿಮಿಷಗಳ ಉಪನ್ಯಾಸ ನೀಡಿ ವಿದ್ಯಾರ್ಥಿಗಳು ಹಾಗೂ ಹಿರಿಯ ಸಭಾ ಸದಸ್ಯರ ಗಮನ ಸೆಳೆದರು. ಕೇಳುಗರ ಮೆಚ್ಚುಗೆಯನ್ನು ಗಳಿಸಿದ ಕೆ.ಜಯಲಕ್ಷ್ಮಿ ಅವರಿಗೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕೃತಜ್ಞತೆ ಸಲ್ಲಿಸಿದರು.
ವರದಿ : ಕಿಗ್ಗಾಲು ಎಸ್.ಗಿರೀಶ್











