



ಬೆಳಗಾವಿ ಫೆ.20 NEWS DESK : ಬೆಳಗಾವಿ-ಬೈಲಹೊಂಗಲ ಹೆದ್ದಾರಿಯ ಭರತೇಶ್ ಶಾಲೆಯ ಬಳಿ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು, ಅದೃಷ್ಟವಶಾತ್, ಪೊಲೀಸರು ಮತ್ತು ಅಗ್ನಿಶಾಮಕ ದಳದವರು ತಕ್ಷಣ ಕಾರ್ಯಪ್ರವೃತ್ತರಾದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಬೆಳಗಾವಿ ತಾಲ್ಲೂಕಿನ ದೇಸೂರಿನಿಂದ ಬೈಲಹೊಂಗಲದ ಕಡೆ ಹೊರಟಿದ್ದ ಟ್ಯಾಂಕರ್ (ಕೆಎ-23 ಎ 8171) ವೇಗವಾಗಿ ಸಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆದು, ಹೆದ್ದಾರಿಯ ಮತ್ತೊಂದು ಬದಿಯಲ್ಲಿ ಬಿದ್ದಿದೆ. ಘಟನೆಯಲ್ಲಿ ಸಾವಿರಾರು ಲೀಟರ್ ಪೆಟ್ರೋಲ್ ಮಣ್ಣು ಪಾಲಾಗಿದೆ.