
ಮಡಿಕೇರಿ ಫೆ.20 NEWS DESK : ಶ್ರೀಮಂಗಲ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಈ ವಿದ್ಯುತ್ ಕೇಂದ್ರದಿಂದ ಹೊರಹೊಮ್ಮುವ 11 ಕೆವಿ ಮಾರ್ಗಗಳಾದ ಎಫ್1 ಬಿರುನಾಣಿ, ಎಫ್2 ಕುಟ್ಟ, ಎಫ್3 ಶ್ರೀಮಂಗಲ, ಎಫ್ 4 ಕಣ್ಣೂರು, ಎಫ್5 ಬಾಡಗ, ಎಫ್6 ಬೀರುಗ, ಎಫ್7 ಶೆಟ್ಟಿಗೇರಿ, ಮಾರ್ಗಗಳಲ್ಲಿ ಫೆಬ್ರವರಿ, 21 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಕಾಯಿಮನೆ, ಮಂಚಳ್ಳಿ, ಪೂಜೆಕಲ್ಲು, ನಾಲ್ಲೂರು, ನಾಥಂಗಾಲ, ತೈಲ, ಕುಟ್ಟ, ಸಿಂಕೋನ, ಕೆ.ಎಂ ಕೊಲ್ಲಿ, ಶ್ರೀಮಂಗಲ, ಹರಿಹರ, ನಾಲ್ಕೇರಿ, ಅಲುಮಡಿಕೇರಿ, ಚೀಪೆಕೊಲ್ಲಿ, ಗುಂಡಮಾಡು, ಎರ್ಮಾಡು, ಚೂರಿಕಾಡು, ಪಲ್ಲೇರಿ, ಕೆ.ಬಾಡಗ, ನಾಣಾಚಿ, ಬೊಳ್ಳೇರ ಗೇಟ್, ಕೆಟ್ಟಿಗೇರಿ, ತಾವಳಗೇರಿ, ಗೂಟುಕೊಲ್ಲಿ, ಹೊಗರೆ, ಹೊಸಕೇರಿ, ಈಸ್ಟ್-ನೆಮ್ಮಲೆ, ಕೆಕೆಆರ್, ಬಿರುಗ, ಇರ್ಪು, ಚಪ್ಪಡಿಕೊಲ್ಲಿ, ಕುಮಟೂರು, ಕಾಕೂರು, ಕುರ್ಚಿ, ವೆಸ್ಟ್-ನೆಮ್ಮಲೆ, ಬಾಡಗಕೇರಿ, ಕೂಟಿಯಾಲು, ಬಿರುನಾಣಿ, ಪೂಕೆಳ, ಕಾಳಕೊರೆ, ಪರಕಟಕೇರಿ, ತೇರಾಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗೆಯೇ 66/11ಕೆವಿ ಪೊನ್ನಂಪೇಟೆ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಈ ವಿದ್ಯುತ್ ಕೇಂದ್ರದಿಂದ ಹೊರಹೊಮ್ಮುವ 11ಕೆವಿ ಎಫ್12 ಬೆಕ್ಕೆಸೊಡ್ಲೂರು, ಎಫ್1 ನಲ್ಲೂರು, ಎಫ್2 ಬಾಳೆಲೆ, ಎಫ್4 ತಿತಿಮತಿ, ಎಫ್5 ಪಾಲಿಬೆಟ್ಟ, ಎಫ್6 ಬೇಗೂರು, ಎಫ್7 ಗೋಣಿಕೊಪ್ಪ, ಎಫ್13 ದೇವನೂರು, ಎಫ್8 ಪೊನ್ನಂಪೇಟೆ, ಎಫ್9 ಹಾತೂರು, ಎಫ್10 ಹೈಸೂಡ್ಲೂರು ಮಾರ್ಗಗಳಲ್ಲಿ ಗ್ರಾಮಗಳಾದ ಸುಳುಗೋಡು ಕೋಣನಕಟ್ಟೆ, ಧನುಗಾಲ, ನಲ್ಲೂರು, ಜಾಗಲೆ, ಕಾರ್ಮಾಡು, ಕೊಟ್ಟಗೇರಿ, ನಿಟ್ಟೂರು, ಬಾಳೆಲೆ, ರಾಜಪುರ, ದೇವನೂರು, ಮಲ್ಲೂರು, ವೆಡ್ಡರಮಾಡು, ಮಲ್ಲಂಗೆರೆ, ಕಿರುಗೂರು, ಪೊನ್ನಂಪೇಟೆ, ಗೋಣಿಕೊಪ್ಪಲು, ತಿತಿಮತಿ, ಹಾತೂರು, ಅರವತೋಕ್ಲು, ಅತ್ತೂರು, ಕಾನೂರು, ದೇವರಪುರ, ಮಾಯಮುಡಿ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.









