
ನಾಪೋಕ್ಲು ಫೆ.24 NEWS DESK : ಭಾಗಮಂಡಲ ಕೋರಂಗಲ ಗ್ರಾಮದ ವಾಜಪೇಯಿ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರುಗಳು ಸೇರಿ ವಿನೂತನ ರೀತಿಯಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಆಚರಿಸಿದರು. ವಾಜಪೇಯಿ ವಸತಿ ಶಾಲೆಯಲ್ಲಿ ಇರುವ ಎಲ್ಲಾ ಗುರುಗಳನ್ನು, ಸಿಬ್ಬಂದಿಗಳಿಗೆ ಗುರುದಕ್ಷಿಣೆಯನ್ನು ನೀಡಿ ತಮ್ಮ ಕೃತಜ್ಞತೆ ಸಲ್ಲಿಸಿದಲ್ಲದೆ ಊಟೋಪಚಾರ ಸಿಹಿ ಹಂಚಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಭ್ರಮಿಸಿದರು. ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಮಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವ ಗುರುಗಳಿಗೆ ಇಂಥ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಆಯೋಜಿಸುವುದು ಇತರರಿಗೆ ಮಾದರಿ. ಮಾತ್ರವಲ್ಲದೆ ಸ್ಪೂರ್ತಿ ದಾಯಕವಾಗಿದೆ ಎಂದರು. ಅಧ್ಯಕ್ಷತೆಯನ್ನು ಪೋಷಕರಾದ ಮಂಜುಳಾ ಮನೋಜ್ ವಹಿಸಿದ್ದು, ಶಿವ ಪಂಜಿಕೋಡಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಶೋಭಾ ವಂದಿಸಿದರು, ಶಾಲೆಯ ಮುಖ್ಯ ಶಿಕ್ಷಕ ಲೋಕೇಶ್, ಸಿಬ್ಬಂದಿಗಳು, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ











