
ಮಡಿಕೇರಿ ಫೆ.27 NEWS DESK : ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಯು 2025 ರ ಮೇ, 02 ರಿಂದ 2026 ರ ಫೆಬ್ರವರಿ, 28 ರವರೆಗೆ ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ನಡೆಯಲಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು 2025 ರ ಮಾರ್ಚ್, 31 ರ ಸಂಜೆ 5.30 ಕೊನೆಯ ದಿನವಾಗಿದೆ. ಅರ್ಜಿಯನ್ನು ಈ ಕಚೇರಿಯಿಂದ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಈ ಕಚೇರಿಯನ್ನು ಬೆಳಗ್ಗೆ 10 ರಿಂದ ಸಂಜೆ 5.30 ರೊಳಗೆ ಸಂಪರ್ಕಿಸಬಹುದು ಅಥವಾ ಅಂತರ್ಜಾಲ https://horticulturedir.karnataka.gov.in ಇಲ್ಲಿ ಅರ್ಜಿ ಪಡೆಯಬಹುದು. ಮೂಲ ಅಗತ್ಯ ದಾಖಲಾತಿಗಳೊಡನೆ (ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಛಾಪಾ ಕಾಗದ, ತಂದೆ/ತಾಯಿ/ಪೋಷಕರ ಹೆಸರಿನಲ್ಲಿರುವ ಜಮೀನಿನ ಆರ್‍ಟಿಸಿ, ಜಾತಿ ಪ್ರಮಾಣ ಪತ್ರ, ಫೋಟೋ, ತಂದೆ/ತಾಯಿಯವರ ಒಪ್ಪಿಗೆ ಪತ್ರ ಇತ್ಯಾದಿ) ಅರ್ಹ ಅಭ್ಯರ್ಥಿಗಳು ನಿಗಧಿತ ಸಮಯದೊಳಗೆ ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ರಾಜ್ಯ ವಲಯ), ಮಡಿಕೇರಿಗೆ ಖುದ್ದು ಸಲ್ಲಿಸಬೇಕು ಎಂದು ರಾಜ್ಯ ವಲಯ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.









