Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಐಸಿಎಸ್‌ಇ 10 ನೇ ತರಗತಿ ಪರೀಕ್ಷೆಯಲ್ಲಿ ಅಧೃತ್ ಶರ್ಮ ಕೊಡಗಿಗೆ ಪ್ರಥಮ*
  • *ಇಂಟರ್ ಗೆಲ್ ಫೈಟಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ವಿದ್ಯಾರ್ಥಿಗಳು*
  • *ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*
  • *ಮೇ 12 ರಂದು ಉದ್ಯೋಗ ಮೇಳ*
  • *ಹುದ್ದೆಗೆ ಅರ್ಜಿ ಆಹ್ವಾನ*
  • *ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ
  • *ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*
  • *ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*
  • *ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*
  • *ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡವಾಮೇ ಬಾಳೋ ಪಾದಯಾತ್ರೆಗೆ ಶ್ರಮಿಸಿದ ಸಂಘಟನೆಗಳ ಪ್ರಮುಖರಿಗೆ ಅಭಿನಂದನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡವಾಮೇ ಬಾಳೋ ಪಾದಯಾತ್ರೆಗೆ ಶ್ರಮಿಸಿದ ಸಂಘಟನೆಗಳ ಪ್ರಮುಖರಿಗೆ ಅಭಿನಂದನೆ*

ಫೆಬ್ರವರಿ 28, 20254 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ಫೆ.28 NEWS DESK : ವಿರಾಜಪೇಟೆಯ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೊಡವಾಮೇ ಬಾಳೋ ಪಾದಯಾತ್ರೆಗೆ ಶ್ರಮಿಸಿದ ಸಂಘಟನೆಗಳ ಪ್ರಮುಖರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು. ವಿರಾಜಪೇಟೆ ಕೊಡವ ಸಮಾಜದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಸಂಸ್ಕೃತಿ, ಪದ್ಧತಿ, ಪರಂಪರೆಯ ರಕ್ಷಣೆ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವ ದಿಸೆಯಲ್ಲಿ ಕೊಡವರು ಹಾಗೂ ಕೊಡವ ಭಾಷಿಕ ಸಮುದಾಯದವರಿಂದ ದಕ್ಷಿಣ ಕೊಡಗಿನ ಕುಟ್ಟದಿಂದ ಮಡಿಕೇರಿವರೆಗೆ ‘ಕೊಡವಾಮೆ ಬಾಳೋ’ ಪಾದಯಾತ್ರೆ ಅತ್ಯಂತ ಶಾಂತಿಯುತವಾಗಿ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಪಾದಯಾತ್ರೆ ಯಶಸ್ವಿಗೆ ಶ್ರಮಿಸಿದವರನ್ನು ವಿರಾಜಪೇಟೆಯ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಅಲ್ಲಪಂಡ ತಾರ ಗಾಂಧಿ ಅವರು ತಪ್ಪಡಕ ಕಟ್ಟುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಕೊಡವರು ಮತ್ತು ಕೊಡವ ಭಾಷಿಕ ಸಮುದಾಯದವರು ಒಗ್ಗಟ್ಟಿನಿಂದ ನಡೆಸಿದ ಕೊಡವಾಮೆ ಬಾಳೋ ಪಾದಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ. ಪಾದಯಾತ್ರೆ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಅವರು, ಪಾದಯಾತ್ರೆ ಸಾಗುವ ಮಾರ್ಗದಲ್ಲಿ ವಿವಿಧ ಜಾತಿ, ಧರ್ಮಗಳ ಸಮುದಾಯದವರು ತಂಪು ಪಾನೀಯ, ಹಣ್ಣು ಹಂಪಲು ನೀಡುವ ಮೂಲಕ ಆತಿಥ್ಯವನ್ನು ನೀಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕೊಡಗಿನ ಕುಲದೇವಿ ಕಾವೇರಿ ಮಾತೆ ಹಾಗೂ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಬಗ್ಗೆ ಮತ್ತು ಕೊಡವ ಸಾಂಪ್ರದಾಯಿಕ ಉಡುಪಿನ ಬಗ್ಗೆ ಅವಹೇಳನ ಮಾಡಿದವರಿಗೆ ಕೊಡವಾಮೆ ಬಾಳೋ ಪಾದಯಾತ್ರೆ ಮೂಲಕ ಉತ್ತರ ನೀಡಿದ್ದೇವೆ. ಕೊಡವ ಹಾಗೂ ಕೊಡವ ಭಾಷಿಕ ಸಮುದಾಯದವರಿಗೆ ಮುಂದೆ ಏನೆ ಸಮಸ್ಯೆಯಾದರೂ ಒಗ್ಗಟ್ಟಿನಿಂದ ಎದುರಿಸುವುದಾಗಿ ಕರೆ ನೀಡಿದರು. ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಕೊಡಗಿನಲ್ಲಿ ಇಂತಹ ಘಟನೆ ನಡೆಯಬಾರದು. ಕೊಡಗಿನಲ್ಲಿ ತಕ್ಕಾಮೆಗೆ ಪ್ರಾಮುಖ್ಯತೆ ಇದೆ. ನಮ್ಮ ಉಡುಪಿನ ಬಗ್ಗೆ ಪ್ರಶ್ನೆ ಬಂದಾಗ ಎಲ್ಲರೂ ಆಕ್ರೋಶಗೊಂಡರು. ನಮ್ಮ ಮಾತೆ ಕಾವೇರಿಯ ಆರ್ಶಿವಾದದಿಂದ ಎಲ್ಲವೂ ಯಶಸ್ವಿಯಾಗಿ ನಡೆದಿದೆ. ಸಂವಿಧಾನಿಕ ಹಕ್ಕು ನಮಗೆ ದೊರಕಬೇಕು ಎಂದರು. ಜಬ್ಬೂಮಿ ಸಂಘಟನೆ ಅಧ್ಯಕ್ಷ ಚೊಟ್ಟಕ್‍ಮಾಡ ರಾಜೀವ್ ಬೋಪಯ್ಯ ಮಾತನಾಡಿ, ಸಮಾಜದಲ್ಲಿ ಒಡಕು ಮೂಡಿಸುವ ಕೆಲಸವನ್ನು ಯಾರು ಮಾಡಬಾರದು, ನಮ್ಮ ಅಸ್ಥಿತ್ವಕ್ಕೆ ದಕ್ಕೆ ಬಂದಾಗ ಕೊಡವ ಮತ್ತು ಕೊಡವ ಭಾಷಿಕರು ಒಂದಾಗಿ ಎದ್ದು ನಿಲ್ಲಬೇಕು. ಕೊಡವರಿಗೆ ಸರಕಾರದಿಂದ ಸಿಗುವ ಎಲ್ಲ ಪ್ರಾತಿನಿಧ್ಯ ಸಿಗಬೇಕು ಎಂದರು. ಯುಕೋ ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಕೊಡವಾಮೇ ಬಾಳೋ ಪಾದಯಾತ್ರೆ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಕೊಡವ ಮತ್ತು ಕೊಡವ ಭಾಷಿಕರ ಒಗ್ಗಟ್ಟು ಪ್ರದರ್ಶನಕ್ಕೆ ಇದು ನಾಂದಿಯಾಯಿತು ಎಂದರು. ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ಒಗ್ಗಟ್ಟು ಇದ್ದರೆ ಎನೂಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಕೊಡವಾಮೇ ಬಾಳೋ ಕಾರ್ಯಕ್ರಮವೇ ಸಾಕ್ಷಿ ಎಂದರು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ನಮ್ಮ ಸಂಸ್ಕೃತಿಯ ಉಳಿವಿಗೆ ಕಾನೂನು ಹೋರಾಟ ಮಾಡಬೇಕು ಎಂದರು. ಕೊಡವ ಪೊಮ್ಮಕ್ಕಡ ಕೂಟದ ಸದಸ್ಯೆ, ವೈದ್ಯರು ಆಗಿರುವ ಡಾ. ಸೋನಿಯ ಮಂದಪ್ಪ, ಗೋಣಿಕೊಪ್ಪ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಮಂಡೆಪಂಡ ಸುಗುಣ ಮುತ್ತಣ್ಣ, ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು, ಕೊಡವ ಭಾಷಿಕ ಜನಾಂಗದ ಒಕ್ಕೂಟದ ಕಾರ್ಯದರ್ಶಿ ಪಡಿಜ್ಞರಂಡ ಪ್ರಭುಕುಮಾರ್, ಅಖಿಲ ಕೊಡವ ಸಮಾಜ ಯೂಥ್ ವಿಂಗ್ ಅಧ್ಯಕ್ಷ ಚಮ್ಮಟಿರ ಪ್ರವೀಣ್ ಉತ್ತಪ್ಪ, ತೂಕ್ ಬೊಳಕ್ ಕಲೆ ಮತ್ತು ಕ್ರೀಡಾ ಸಂಘಟನೆ ಅಧ್ಯಕ್ಷ ಮುಲ್ಲೆಂಗಡ ಮುಧೋಶ್ ಪೂವಯ್ಯ, ಕೊಡವಾಮೆ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಯಪ್ಪ, ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಸಂಚಾಲಕ ಶಾಂತೆಯಂಡ ನಿರನ್, ಕೊಡವ ಅಕಾಡೆಮಿ ಹಾಗೂ ಮಡಿಕೇರಿ ಕೊಡವ ಸಮಾಜದ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಪರದಂಡ ಮಿಟ್ಟು, ಜಮ್ಮಡ ಗಣೇಶ್ ಮತ್ತಿತರ ಪ್ರಮುಖರು ಕೊಡವಾಮೆ ಬಾಳೋ ನಡ್ಪು ಯಶಸ್ಸನ್ನು ಬಣ್ಣಿಸಿ ಮಾತನಾಡಿದರು. ಕೊಡವ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಡವಾಮೇ ಬಾಳೋ ಎಂಬ ಘೋಷವಾಕ್ಯದಡಿಯಲ್ಲಿ ಕೊಡಗು ಮತ್ತು ಕೊಡವ ಜನಾಂಗದ ನೆಲ, ಜಲ, ಸಂಸ್ಕೃತಿ, ಸಂಪ್ರದಾಯಗಳು, ಧಾರ್ಮಿಕ ಆಚರಣೆಗಳು ಮತ್ತು ಸಾಮಾಜಿಕ ಭದ್ರತೆಗೆ ತುರ್ತು ಸಾಂವಿಧಾನಿಕ ರಕ್ಷಣೆಯ ಅಗತ್ಯವಿದೆ. ಕೊಡವ ಸಮುದಾಯವು ಅತ್ಯಂತ ಸೂಕ್ಷ್ಮ ಮತ್ತು ಸಣ್ಣ ಅಲ್ಪಸಂಖ್ಯಾತ ಸಮುದಾಯವಾಗಿರುವುದರಿಂದ, ಸಾಂವಿಧಾನಿಕ ರಕ್ಷಣೆ ಬೇಕಿದೆ. ಕೊಡವಾಮೆ ಬಾಳೋ ಕಾರ್ಯಕ್ರಮ ಆಯೋಜನೆ ಮಾಡಿದ ಆಯೋಜಕರನ್ನು, ಹಾಗೂ ಕುಟ್ಟದಿಂದ ಮಡಿಕೇರಿ ತನಕ ನಿರಂತರವಾಗಿ ಕಾಲು ನಡಿಗೆಯಲ್ಲಿ ತೊಡಗಿಸಿಕೊಂಡು ಕೊಡವ ಜನಾಂಗದ ಹಾಗೂ ಕೊಡಗಿನ ಕೊಡವ ಭಾಷಿಕ ಮೂಲನಿವಾಸಿಗರ ಒಗ್ಗಟ್ಟು ಪ್ರದರ್ಶನ ಮಾಡಿದ ತಂಡವನ್ನು ಕೊಡವ ಸಂಘಟನೆಯ ಮುಖಾಂತರ ಅಭಿನಂದನೆ ಸಲ್ಲಿಸುವ ಕಾರ್ಯವನ್ನು ನಾವು ಮಾಡಿದ್ದೇವೆ. ಹಾಗೇ ಈ ಒಂದು ಕೊಡವ ಬಾಳೋ ಕಾಲು ನಡಿಗೆ ಜಾತಾ ಇಷ್ಟೊಂದು ಯಶಸ್ವೀಯಾಗಲು ಆಯೋಜಕರ ಒಗ್ಗಟ್ಟಿನ ಶ್ರಮ ಕಾರಣವಾಗಿದೆ. ಕೊಡವರ ಒಗ್ಗಟ್ಟು ಪ್ರದರ್ಶನ ಯಾವುದೇ ಜನಾಂಗದ ವಿರುದ್ಧ ಆಗಬಾರದು. ನಮ್ಮ ಒಗ್ಗಟ್ಟಿನ ಪ್ರದರ್ಶನದ ಮುಖಾಂತರ ನಮ್ಮ ಜನಾಂಗದ ಅಸ್ತಿತ್ವ ಹಾಗೂ ನಮ್ಮ ವಿಶೇಷವಾದ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಬಗ್ಗೆ,ಸರ್ಕಾರದ ಮಟ್ಟದಲ್ಲಿ ಸಿಗಬೇಕಾದ ಮೀಸಲಾತಿ ಪ್ರಾತಿನಿಧ್ಯದ ಬಗ್ಗೆ, ಸಿಗಬೇಕಾದ ಸವಲತ್ತಿನ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯುವ ಕೆಲಸ ಆಗಬೇಕಾಗಿದೆ ಎಂದರು. ಜೊತೆಗೆ ನಾವು ನಮ್ಮ ಕೊಡಗಿನಲ್ಲಿ ಎಲ್ಲ ಜಾತಿ ಜನಾಂಗದವರೊಂದಿಗೆ ಅನ್ಯೋನತೆಯಿಂದ ಸಾಮರಸದಿಂದ ಬದುಕನ್ನು ಕಟ್ಟಿಕೊಂಡವರು. ಸಮಾಜದ ಸ್ವಾಸ್ತ್ಯವನ್ನು ಕೆಡಿಸುತ್ತಿರುವ ಕೇವಲ ಕೆಲವು ವ್ಯಕ್ತಿಗಳಿಂದ ಜನಾಂಗಿಯ ದ್ವೇಷ ಬೆಳೆದು ಸಾಮಾಜಿಕ ಶಾಂತಿ ಕದಡುವಂತಾಗಬಾರದು. ಶಾಂತಿ ಪಾಲನೆ ನಮ್ಮೆಲ್ಲರ ಕರ್ತವ್ಯ ಆಗಬೇಕು. ಯಾರಿಂದಲೂ ಕಾನೂನನ್ನು ಕೈಗೆ ಎತ್ತಿಕೊಳ್ಳುವಂತ ಕೆಲಸ ಆಗಬಾರದು. ಕಾನೂನಿಗೆ ಪ್ರತಿಯೊಬ್ಬರು ಗೌರವ ಕೊಡಬೇಕು. ಅವರವರ ಜನಾಂಗದ ಬಗ್ಗೆ ಅವರವರಿಗೆ ಅಭಿಮಾನ ಇರಬೇಕು. ಆ ಮಾತ್ರಕ್ಕೆ ಮತ್ತೊಂದು ಜನಾಂಗದ ಬಗ್ಗೆ ದುರಭಿಮಾನ ಸಲ್ಲದು. ಒಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಒಂದಾಗಿ ಸಾಮರಸ್ಯದಿಂದ ಬಾಳ ಬೇಕಾಗಿದೆ ಎಂದರು.

ಸನ್ಮಾನ ::  ಕೊಡವಾಮೇ ಬಾಳೊ ಯಶಸ್ವಿಗೆ ಶ್ರಮಿಸಿದ ಪರದಂಡ ಸುಬ್ರಮಣಿ ಕಾವೇರಪ್ಪ, ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಚೊಟ್ಟೇಕ್ ಮಾಡ ರಾಜೀವ್ ಬೋಪಯ್ಯ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ. ಮಂಡೇಪಂಡ ಸುಗುಣ ಮುತ್ತಣ್ಣ, ಅಜ್ಜಿನಿಕಂಡ ಮಹೇಶ್ ನಾಚಯ್ಯ, ಪರದಂಡ ವಿಠಲ್, ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಮುಲ್ಲೇಂಗಡ ಮಧೋಶ್ ಪೂವಯ್ಯ, ಬಾನಂಡ ಪ್ರಥ್ವಿ, ಪಡಿಜ್ಞಾರಂಡ ಅಯ್ಯಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ಶಾಂತೆಯಂಡ ನಿರನ್, ಚಾಮೆರ ದಿನೇಶ್ ಬೆಳ್ಯಪ್ಪ, ಹಂಚೇಟ್ಟಿರ ಮನು ಮುದ್ದಪ್ಪ, ಮನೆಯಪಂಡ ಭವಿಷ್, ಜಮ್ಮಡ ಗಣೇಶ್ ಅಯ್ಯಣ್ಣ, ಪಾಲೇಂಗಡ ಅಮಿತ್, ಚಟ್ಟಂಗಡ ರವಿ ಸುಬ್ಬಯ್ಯ, ಕುಕ್ಕೇರ ಜಯ ಚಿಣ್ಣಪ್ಪ, ಅಚ್ಚಾಂಡಿರ ಕುಶಾಲಪ್ಪ, ಚೆಪ್ಪುಡಿರ ಸಂಜು, ಚೇಂದಂಡ ಶಮ್ಮೀ, ಮೂಡೇರ ರಾಯ್, ಕಳ್ಳಿಚಂಡ ರಾಬಿನ್, ಉಳುವಂಗಡ ಲೋಹಿತ್, ಅಣ್ಣೀರ ಹರೀಶ್ ಮಾದಪ್ಪ, ಅಜ್ಜಿನಿಕಂಡ ತಿಮ್ಮಯ್ಯ, ಕಾಣತಂಡ ಬೀನಾ ಜಗದೀಶ್, ಬಾಳೆಯಡ ಪ್ರತೀಶ್ ಪೂವಯ್ಯ, ಕಾಣತಂಡ ರೋಷನ್, ತಂಬಂಡ ಡ್ಯಾನಿ ನಾಣಯ್ಯ, ಮೂಕಳೇರ ಕಾವ್ಯ, ಮೂಕಲೇರ ಪಟ್ಟು, ಮೀದೇರಿರ ಕವಿತಾ, ಬೊಳ್ಳಚಂಡ ಶೃಂಗ, ಬಾರಿಯಂಡ ಸುನೀಲ್, ಮಚ್ಚಮಾಡ ರಮೇಶ್, ಚೋಕೀರ ಅನಿತಾ, ಕಡೇಮಾಡ ಸುಮಿತ್, ಚಂಗುಲಂಡ ಅಯ್ಯಪ್ಪ, ಕರಿನೆರವಂಡ ಡ್ಯಾನಿ, ಮುಂಜಂದೀರ ಕುಟ್ಟಣ್ಣ, ದೇಯಂಡ ಸಂತೋಷ್, ಅವರನ್ನು ಸನ್ಮಾನಿಸಲಾಯಿತು. ಕೊಡವಾಮೇ ಬಾಳೋ ಶಾಶ್ವತವಾಗಿರಲಿ ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮದ ಮೊದಲಿಗೆ ಕೊಡವ ಸಂಪ್ರದಾಯದಂತೆ ಆತ್ಮೀಯವಾಗಿ ಸ್ವಾಗತಿಸಿ ಕೊಡವರ ಪದ್ದತಿಯಂತೆ ಆತೀಥ್ಯ ನೀಡಲಾಯಿತು. ಒಕ್ಕೂಟದ ಪೊನ್ನಕ್ಕ ಗ್ರೂಪ್‍ನವರು ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಮ್ಮುಣಿಚಂಡ ಈಶ್ವರಿ ಗಂಗಮ್ಮ, ತಾತಂಡ ಜ್ಯೋತ್ ಪ್ರಕಾಶ್, ಬಯವಂಡ ಇಂದಿರಾ ಬೆಳ್ಯಪ್ಪ, ಉದ್ದಪಂಡ ವಿಮಲ ಸೇರಿದಂತೆ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಐಸಿಎಸ್‌ಇ 10 ನೇ ತರಗತಿ ಪರೀಕ್ಷೆಯಲ್ಲಿ ಅಧೃತ್ ಶರ್ಮ ಕೊಡಗಿಗೆ ಪ್ರಥಮ*

ಮೇ 10, 2026

*ಇಂಟರ್ ಗೆಲ್ ಫೈಟಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ವಿದ್ಯಾರ್ಥಿಗಳು*

ಮೇ 10, 2026

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಇಂಟರ್ ಗೆಲ್ ಫೈಟಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ವಿದ್ಯಾರ್ಥಿಗಳು*

ಮೇ 10, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಮೇ 10 : ಇಂಡಿಯನ್ ಇಂಟರ್ ಗೆಲ್ ಫೈಟಿಂಗ್ ಅಸೋಸಿಯೇಷನ್ ವತಿಯಿಂದ ಉತ್ತರ ಪ್ರದೇಶದ ಸಹರಂಗಪುರದಲ್ಲಿ…

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಮೇ 9, 2026

*ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*

ಮೇ 9, 2026

*ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*

ಮೇ 9, 2026

*ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*

ಮೇ 9, 2026

*ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*

ಮೇ 9, 2026

*ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*

ಮೇ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.