



ಮಡಿಕೇರಿ ಮಾ.1 NEWS DESK : ಕೊಡಗು ಜಿಲ್ಲಾ ಗೃಹರಕ್ಷಕದಳದ ಗೌರವ ಸಮಾದೇಷ್ಟರ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೊಡಗು ಜಿಲ್ಲೆಯ ಗೃಹ ರಕ್ಷಕದಳದ ಗೌರವ ಸಮಾದೇಷ್ಟರ ಹುದ್ದೆಯು ಖಾಲಿ ಇದ್ದು ತುರ್ತಾಗಿ ಅರ್ಹರನ್ನು ಅರ್ಹತೆಯ ಮೇರೆಗೆ ಸರ್ಕಾರದ ಮಟ್ಟದಲ್ಲಿ ಆಯ್ಕೆ ಮಾಡಬೇಕಾಗಿರುತ್ತದೆ. ಈ ಗೌರವ ಹುದ್ದೆಗೆ ಇಚ್ಛೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇಚ್ಛೆಯುಳ್ಳ ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ 2025ರ ಏ.4 ರೊಳಗೆ ಸಲ್ಲಿಸುವಂತೆ ಪೌರರಕ್ಷಣೆ ಗೃಹರಕ್ಷಕದಳದ ಮಹಾ ಸಮಾದೇಷ್ಟರು ಮತ್ತು ನಿರ್ದೇಶಕರು, ಆರಕ್ಷಕ ಮಹಾ ನಿರ್ದೇಶಕರು ತಿಳಿಸಿದ್ದಾರೆ.