
ಮಡಿಕೇರಿ ಮಾ.1 NEWS DESK : ಮಡಿಕೇರಿಯ ಇತಿಹಾಸ ಪ್ರಸಿದ್ಧ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದ್ದು, ದೇವಾಲಯದ ಪ್ರಧಾನ ಅರ್ಚಕರು ಒಳಗೊಂಡಂತೆ ಒಂಭತ್ತು ಮಂದಿ ಸದಸ್ಯರುಗಳನ್ನು ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.
ದೇವಾಲಯದ ಪ್ರಧಾನ ಅರ್ಚಕರಾದ ಸಂತೋಷ್ ಭಟ್, ವಿಶಾಲ್ ನಂದಕುಮಾರ್, ಎ.ಸಿ.ದೇವಯ್ಯ, ಕನ್ನಂಡ ಕವಿತಾ ಕಾವೇರಮ್ಮ, ಕೆ.ವೀಣಾಕ್ಷಿ, ಎಂ.ಎ.ನಿರಂಜನ್, ಜಿ.ರಾಜೇಂದ್ರ, ಅಂಬೆಕಲ್ ಕುಶಾಲಪ್ಪ, ಎ.ಎಸ್.ಪ್ರಕಾಶ್ ಅವರುಗಳನ್ನು ಸಮಿತಿ ಸದಸ್ಯರಾಗಿ ನೇಮಕ ಮಾಡಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.











