
ಕಣಿವೆ ಮಾ.1 NEWS DESK : ಕುಶಾಲನಗರದ ಬೈಚನಹಳ್ಳಿಯ ಗ್ರಾಮದೇವತೆ ಮಾರಮ್ಮ ದೇವರ ವಾರ್ಷಿಕ ಪೂಜೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಪ್ರಧಾನ ಅರ್ಚಕ ಉಮೇಶ್ ಹೊಳ್ಳ ನೇತೃತ್ವದಲ್ಲಿ ಹರಿಶ್ಚಂದ್ರ ಭಟ್, ವೇದವ್ಯಾಸ ಭಟ್, ಸೋಮಶೇಖರ ಭಟ್, ಗಿರೀಶ್ ಭಟ್, ರಾಘವೇಂದ್ರ ಭಟ್ ಸುಬ್ರಮಣ್ಯ ಭಟ್ ಅರ್ಚಕರ ತಂಡ ಹೋಮ ಹವನಾದಿ ಧಾರ್ಮಿಕ ವಿಧಿಗಳನ್ನು ನಡೆಸಿತು. ದೇವತಾ ಸಮಿತಿ ಅಧ್ಯಕ್ಷ ರಾಮದಾಸ್, ಕಾರ್ಯದರ್ಶಿ ಎಂ.ಎಂ.ಚರಣ್, ಕೋಶಾಧಿಕಾರಿ ಮುತ್ತಣ್ಣ, ನಿರ್ದೇಶಕರಾದ ಕೆ.ಎನ್.ಅಶೋಕ್, ಜಗದೀಶ್, ರಾಮಚಂದ್ರ ಸೇರಿದಂತೆ ಬೈಚನಹಳ್ಳಿಯ ಗೆಳೆಯರ ಬಳಗದ ಸದಸ್ಯರು ಇದ್ದರು. ದೇವಾಲಯದಲ್ಲಿ ಮಹಿಳಾ ತಂಡದಿಂದ ಭಜನೆ ನಡೆಯಿತು. ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ, ಅನ್ನಸಂತರ್ಪಣೆ ನೀಡಲಾಯಿತು. ಪೂಜಾ ಅಂಗವಾಗಿ ಗುಡಿಯೊಳಗಿನ ಅಮ್ಮನವರನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯವನ್ನು ತಳಿರು ತೋರಣಗಳಿಂದ ಅಕಂಕರಿಸಲಾಗಿತ್ತು.









