
ನಾಪೋಕ್ಲು ಮಾ.3 NEWS DESK : ಡಾಕ್ಟರೇಟ್ ಪದವಿ ಪಡೆದ ಡಾ.ರೇಷ್ಮಾ ಕೆ.ಜೆ ಅವರನ್ನು ಕ್ರೈಸ್ತ ಸಮುದಾಯದ ವತಿಯಿಂದ ಸನ್ಮಾನಿಸಲಾಯಿತು. ಮೇರಿ ಮಾತೆಯ ದೇವಾಲಯದ ವತಿಯಿಂದ ನಾಪೋಕ್ಲು ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಧರ್ಮ ಕೇಂದ್ರದ ಜ್ಞಾನ ಪ್ರಕಾಶ್, ಪಾಲನಾ ಸಮಿತಿಯ ಸದಸ್ಯರು, ಯುವಕ ಸಂಘದ ಸದಸ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಪಾಲನಾ ಸಮಿತಿಯ ಸದಸ್ಯರು, ಯುವಕ ಸಂಘದ ಸದಸ್ಯರು, ಬಂಧು ಮಿತ್ರರು ಹಾಜರಿದ್ದರು. ಡಾ. ಕೆ.ಜೆ.ರೇಷ್ಮಾ ಬೆಂಗಳೂರಿನ ಎಂ.ಎಸ್ ರಾಮಯ್ಯ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗಮಾಡಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಮೂರು ವರ್ಷದ ಹಣಕಾಸು ವಿಶ್ಲೇಷಕರ ನಡವಳಿಕೆಯ ಮೇಲೆ ಮನೋವಿಜ್ಞಾನದ ಪ್ರಭಾವದ ಅಧ್ಯಯನ ಪಿ.ಹೆಚ್.ಡಿ ಪದವಿಯನ್ನು ಮುಗಿಸಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಸ್ಥಳೀಯ ನಿವಾಸಿ ಜಾಯ್ ಕೆ.ಜೆ.ಲೀನಾ ಜಾಯ್ ದಂಪತಿಗಳ ಪುತ್ರಿ. ಜಾರ್ಜ್ ಮಸ್ಕರೇನಸ್ ಕಾರ್ಯಕ್ರಮ ನಿರೂಪಿಸಿದರು, ಜೋಶಿ ಸಿರಿಯಕ್ ಸ್ವಾಗತಿಸಿದರು, ಡೇರಿನ ಲೂವಿಸ್ ವಂದಿಸಿದರು.
ವರದಿ : ದುಗ್ಗಳ ಸದಾನಂದ.









