
ನಾಪೋಕ್ಲು ಮಾ.3 NEWS DESK : ಸಂಪಾಜೆ ಗ್ರಾ.ಪಂ ವ್ಯಾಪ್ತಿಯ ಗಡಿಕಲ್ಲು ಅಲಡ್ಕ-ಮುಂಡಡ್ಕ 14,36000 ರೂಪಾಯಿ ವೆಚ್ಚದಲ್ಲಿ ಗ್ರಾ.ಪಂ ನಿಧಿ 15ನೇ ಹಣಕಾಸು ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ನೂತನ ಕಾಂಕ್ರಿಟ್ ರಸ್ತೆಯನ್ನು ಕೇಂದ್ರ ನಾರು ಮಂಡಳಿ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಸಂಪಾಜೆ ಗ್ರಾಮದ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಮೂಲಕ 2 ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ. ಈ ಭಾಗದ ಜನ ಪ್ರತಿನಿಧಿಗಳು ಕ್ರಿಯಾಶೀಲಾರಾಗಿ ಕೆಲಸ ಮಾಡುವ ಮೂಲಕ ಅನುದಾನ ತರಿಸುವಲ್ಲಿ ಪ್ರಯತ್ನ ಮಾಡಿದ್ದಾರೆ ಎಂದರು. ಗಡಿಕಲ್ಲು ಅಂಗನವಾಡಿ ಕಟ್ಟಡ, ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಅನುದಾನ ದೊರಕಿಸಿ ಕೊಟ್ಟಿದ್ದೇನೆ. ಪೇರಡ್ಕ ದರ್ಕಾಸ್ ಭಾಗದಲ್ಲಿ ರಸ್ತೆ ಕಾಂಕ್ರಿಟ್ ಕಾಮಗಾರಿ, ಅಂಗನವಾಡಿ ಕೇಂದ್ರದ ಆವರಣ ಗೋಡೆ, ಪೇರಡ್ಕ ಸೇತುವೆ ಕಾಮಗಾರಿ, ಗೂನಡ್ಕ ದರ್ಕಾಸ್ ಪೇರಡ್ಕ ರಸ್ತೆ, ಪೆರುಂಗೋಡಿ ರಸ್ತೆ ಡಾಮರು ಕಾಮಗಾರಿ ನಡೆಸಲಾಗಿದೆ ಎಂದು ಹೇಳಿದರು. ರಾಜ್ಯ ಸರಕಾರದ ವಿವಿಧ ಇಲಾಖೆಯಿಂದ ಸುಮಾರು ಎರಡು ಕೋಟಿ ಹಣ ಬರಲಿದ್ದು, ಮುಂದೆಯೂ ಈ ಭಾಗದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಯಲ್ಲಿ ಕೈ ಜೋಡಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭ ಗಡಿಕಲ್ಲು ಹಾಗೂ ಕಲ್ಲುಗುಂಡಿ ಅಂಗನವಾಡಿ ಕೇಂದ್ರದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಉದ್ಘಾಟಿಸಿದರು. ಆನೆ ಮಲ್ಲಡ್ಕ ರಸ್ತೆ ಕಾಂಕ್ರಿಟ್ ರಸ್ತೆ ಕಾಮಗಾರಿ 3 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಮಗಾರಿಯನ್ನು ಮಾಜಿ ಪಂಚಾಯತ್ ಅಧ್ಯಕ್ಷ ಜಗದೀಶ್ ರೈ, ಕೈಪಡ್ಕ ಚರಂಡಿ ಕಾಂಕ್ರೀಟ್ ಕಾಮಗಾರಿಯನ್ನು ಪಂಚಾಯತ್ ಸದಸ್ಯೆ ವಿಮಲಾ ಪ್ರಸಾದ್, ಚಟ್ಟೆಕಲ್ಲು ರಸ್ತೆ ಕಾಂಕ್ರಿಟ್ ಕಾಮಗಾರಿ 5 ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟ್ ಕಾಮಗಾರಿ ಹಾಗೂ ಚಟ್ಟೆಕಲ್ಲು ಕಾಂಕ್ರೀಟ್ ಚರಂಡಿ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಂದರಿ, ಜಿ.ಕೆ.ಹಮೀದ್ ಗೂನಡ್ಕ, 3 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಡೆಪಾಲ ರಸ್ತೆ ಕಾಂಕ್ರಿಟ್ ಕಾಮಗಾರಿ, ಚರಂಡಿ ಕಾಂಕ್ರೀಟ್ ಕಾಮಗಾರಿಯನ್ನು ಮಾಜಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸದಸ್ಯರಾದ ಲಸ್ಸಿ ಮೊನಾಲಿಸಾ ಹಾಗೂ ದಿನಕರ ಗೌಡ ಸಣ್ಣಮನೆ, ಪೆರುಂಗೋಡಿ ಪೇರಡ್ಕ ರಸ್ತೆ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಂಕ್ರೀಟ್ ಕಾಮಗಾರಿಯನ್ನು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಕುಸುಮಾವತಿ ಪುಟ್ಟಯ್ಯ ಗೌಡ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷರಾದ ಸುಮಾತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಸುಂದರಿ, ರಜನಿ ಶರತ್, ವಿಮಲಾ ಪ್ರಸಾದ್, ವಿಜಯ ಕುಮಾರ್ ಅಲಡ್ಕ, ಮಾಜಿ ಪಂಚಾಯತ್ ಸದಸ್ಯರಾದ ತಾಜ್ ಮಹಮ್ಮದ್, ಸರೋಜಿನಿ ಕಡೆಪಾಲ, ಕುಸುಮಾವತಿ ಪುಟ್ಟಯ್ಯ, ದಿನಕರ ಗೌಡ ಸಣ್ಣ ಮನೆ, ಮಹಮ್ಮದ್ ಕುಂಞÂ, ಉಪ್ಪಿ ಅಬ್ದುಲ್ ರಹಿಮಾನ್ ಸಂಪಾಜೆ , ಬಿ.ಟಿ.ಬಷೀರ್, ಇಸ್ಮಾಯಿಲ್, ಮಹಮ್ಮದ್, ಹ್ಯಾರಿಸ್ ಸಂಪಾಜೆ, ಪ್ರಸಾದ್ ಕಲ್ಲುಗುಂಡಿ, ಅಬ್ದುಲ್ ಖಾದರ್ ಮೊಟ್ಟಂಗರ್, ಜನಾರ್ದನ ಗೌಡ ಪೇರಡ್ಕ, ವಿಶ್ವನಾಥ್ ಗೌಡ, ಸರೋಜಿನಿ ಕಡೆಪಾಲ, ಪಂಚಾಯತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ.ಕೆ. ಹಮೀದ್ ಗೂನಡ್ಕ, ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಮೋಹಿನಿ ವಂದಿಸಿದರು.
ವರದಿ : ದುಗ್ಗಳ ಸದಾನಂದ.









