
ವಿರಾಜಪೇಟೆ ಮಾ.4 NEWS DESK : ಭಾರತ ದೇಶ ಹಬ್ಬಗಳ ನಾಡು, ಅದರಲ್ಲಿಯೂ ಶಿವರಾತ್ರಿ ಹಬ್ಬ ಬಹಳ ಶ್ರೇಷ್ಠ, ವಿಶಿಷ್ಠವಾದ ಹಬ್ಬವಾಗಿದೆ ಎಂದು ವಿರಾಜಪೇಟೆ ಬ್ರಹ್ಮಾಕುಮಾರಿ ಸೇವಾ ಕೇಂದ್ರದ ಸಂಚಾಲಕರಾದ ಕೋಮಲ ಅಭಿಪ್ರಾಯಪಟ್ಟರು. ಶಿವರಾತ್ರಿ ಹಬ್ಬದ ಪ್ರಯುಕ್ತ ವಿರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಡೆದ 89ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿದ ಅವರು, ಆದ್ಯಾತ್ಮಿಕದ ಬಗ್ಗೆ ಮಾತನಾಡಿರು. ಮನುಷ್ಯನಿಗೆ ಜೀವನದಲ್ಲಿ ಪರಮಾತ್ಮನ ದ್ಯಾನದ ಅಗತ್ಯವಿದೆ. ಭಾರತದಲ್ಲಿ ಶಿವನ ಅವತಾರಣೆ ಕಾರಣ ಭಾರತ ಭಾಗ್ಯವಿಧಾತ ಎಂದು ಹಾಡುವುದಾಗಿದೆ. ಭಾರತ ದೇಶದಲ್ಲಿಯೇ ಶಿವರಾತ್ರಿಯನ್ನು ಆಚರಿಸುತ್ತಾರೆ. ಜ್ಞಾನ ಸಾಗರ ಪರಮಾತ್ಮನು ಮನುಷ್ಯನಿಗೆ ಜ್ಞಾನದ ಅವಶ್ಯಕತೆ ಇರುವುದನ್ನು ನೀಡಿದ್ದಾನೆ. ಕಲಿಯುಗದಲ್ಲಿ ವಿನಾಶ ಎಂದರೆ ಪ್ರಕೃತಿ ವಿಕೋಪಗಳು, 33ಕೋಟಿ ದೇವತೆಗಳು ಆದರು, ಶ್ರೀ ಪರಮಾತ್ಮ ಒಬ್ಬನೆ, ಮನುಷ್ಯರುಗಳು ಕಾಮ, ಕ್ರೋಧ, ಲೋಭ, ಮೋಹಗಳಿಂದ ಕರ್ಮವನ್ನು ಮಾಡುತ್ತಾರೆ. ನಂತರ ಪಾಪದ ಶರೀರವನ್ನು ತೊಳೆಯಲು ಅನೇಕ ನದಿಗಳಿಗೆ ತೀರ್ಥಸ್ಥಾನಕ್ಕೆಂದು ಹೋಗುತ್ತಾರೆ, ಆತ್ಮವನ್ನು ಪಾವನ ಮಾಡುವ ಶಕ್ತಿ ನೀರಿಗೆ ಇಲ್ಲ. ಪಾಪ ಪುಣ್ಯ ಇರುವುದು ಆತ್ಮದಲ್ಲಿ,’ ಶರೀರದಲ್ಲಿ ಅಲ್ಲ, ಮನಸ್ಸಿಗೆ ಬೇಕಾಗಿರುವ ಆನಂದ, ಸುಖ ಶಾಂತಿ ನೆಮ್ಮದಿಯನ್ನು ನೀಡುವವನು ಶ್ರೀ ಪರಮಾತ್ಮನಿಂದ ಮಾತ್ರ ಸಾಧ್ಯ ಎಂದ ಅವರು ಜೀವನವನ್ನು ಶ್ರೇಷ್ಠಮಾಡಿಕೊಳ್ಳಲು ನೀವು ಮಾಡುವ ಸಾಧನೆಯೋಂದಿಗೆ ದೇವರ ದಯೇ ಕೂಡ ಅಗತ್ಯವಾಗಿದೆ ಎಂದರು. ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯ ವಿರಾಜಪೇಟೆ ಸೇವಾ ಕೇಂದ್ರದ ಡಾ.ರೋಷನ್, ಕರ್ನಲ್ ಕರುಂಬಯ್ಯ, ಎನ್.ಎಂ.ಚಂಗಪ್ಪ, ರೂಪ ದೇವಯ್ಯ, ಎಂ.ಎಂ.ದೇವಮ್ಮ, ಬ್ರಹ್ಮಾಕುಮಾರಿಯರು ಹಾಗೂ ಪಟ್ಟಣ ಮತ್ತು ಇತರೆಡೆಗಳಿಂದಲೂ ಭಾಗವಹಿಸಿದ್ದರು.









