
ವಿರಾಜಪೇಟೆ ಮಾ.5 NEWS DESK : ವಿರಾಜಪೇಟೆ ತಾಲ್ಲೂಕು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸ್ವಸಾಯ ಸಂಘಗಳ ಒಕ್ಕೂಟಗಳು ಸಂಯುಕ್ತಾಶ್ರಯದಲ್ಲಿ ಕೃಷಿ ಕಾರ್ಯಕ್ರಮದಡಿಯಲ್ಲಿ ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ ಗೋಣಿಕೊಪ್ಪ ವಲಯದ ದೇವರಪುರ ಕಾರ್ಯಕ್ಷೇತ್ರದ ಶಿವಣ್ಣ ಅವರ ಕೃಷಿ ತಾಕುವಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಶೇಖರ್ ಮಾತನಾಡಿ, ಅಣಬೆ ಕೃಷಿ ಮನೆಯಲ್ಲಿಯೇ ಬೆಳೆಯಿರಿ, ಹೆಚ್ಚು ಆದಾಯಗಳಿಸಬಹುದು, ಅಣಬೆ ಕೃಷಿಯು ಒಂದು ಲಾಭದಾಯಕ ಕೃಷಿ ಉದ್ಯಮವಾಗಿದೆ. ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸುತ್ತದೆ. ಕೋಳಿ ಸಾಕಾಣಿಕೆ ಹೇಗೆ ಮಾಡುವುದು ಮತ್ತು ವಾಣಿಜ್ಯ ನರ್ಸರಿ ಬಗ್ಗೆ ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕರಾದ ಶಿವಣ್ಣ ಮಾತನಾಡಿ, ಬಾಳೆ ಕೃಷಿಯ ವಿವಿಧ ತಳಿಗಳ ಬಗ್ಗೆ ಮತ್ತು ಏಲಕ್ಕಿ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಮೇಲ್ವಿಚಾರಕರಾದ ವಸಂತ್, ಒಕ್ಕೂಟದ ಅಧ್ಯಕ್ಷರಾದ ನವೀನ್, ಸೇವಾ ಪ್ರತಿನಿಧಿ ಸರೋಜಾ, ಸಿಎಸ್‍ಸಿ ಸೇವಾದಾರರು ಸೌಜನ್ಯ, ಸಂಘದ ಸದಸ್ಯರು, ಊರ ಗ್ರಾಮಸ್ಥರು ಉಪಸ್ಥಿತರಿದ್ದರು.









