ನಾಪೋಕ್ಲು ಮಾ.7 NEWS DESK : ನೆಲಜಿ ಶ್ರೀ ಈಶ್ವರ ಇಗ್ಗುತ್ತಪ್ಪ ದೇವರ ವಾರ್ಷಿಕ ಕಲಾಡ್ಚ ಉತ್ಸವವು ಮಾ.13 ರಂದು ನಡೆಯಲಿದೆ. ಉತ್ಸವದ ಪ್ರಯುಕ್ತ ತುಲಾಭಾರ ಸೇವೆ, ಎತ್ತು ಪೋರಾಟ, ಮಹಾಪೂಜೆ, ದೇವರ ನೃತ್ಯ ಬಲಿ ಹಾಗೂ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಕೋರಿದ್ದಾರೆ. ತುಲಾಭಾರ ಸೇವೆ ಮಾಡಲಿಚ್ಚಿಸುವವರು ಮುಂಚಿತವಾಗಿ ದೇವಸ್ಥಾನದ ಕಾರ್ಯದರ್ಶಿ ಮುಕ್ಕಾಟ್ಟಿರ ವಿನಯ್ – 94495 54997 ಗೆ ಸಂಪರ್ಕಿಸಿ ಹೆಸರು ನೊಂದಾಯಿಸಿ ಕೊಳ್ಳುವಂತೆ ಮನವಿ ಮಾಡಿದ್ದಾರೆ.
ವರದಿ – ದುಗ್ಗಳ ಸದಾನಂದ.











