
ಕುಶಾಲನಗರ ಮಾ.8 NEWS DESK : ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ರೂಪಕಗಳ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಅಂತರ್ರಾಷ್ಟ್ರೀಯ ಮಹಿಳಾ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು. ವಿದ್ಯಾವಂತರು ಹಾಗೂ ಉದ್ಯೋಗಸ್ಥರು ಹೆಚ್ಚಾಗಿ ತಮ್ಮ ತಮ್ಮ ಹೆತ್ತವರನ್ನು ವೃದ್ಧಾಶ್ರಮಗಳಿಗೆ ದಾಖಲಿಸುತ್ತಾ ಮಾನವೀಯತೆ ಮರೆಯುತ್ತಿರುವ ಚಿತ್ರಣ, ಸಮಾಜದಲ್ಲಿ ಇಂದಿಗೂ ಕೂಡ ಮರುಳಿಸುವ, ಹೆಣ್ಣುಮಕ್ಕಳ ಭ್ರೂಣ ಹತ್ಯೆಗಳು ಹಾಗೂ ಪರಿಣಾಮಗಳು, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಲೇ ಇರುವ ಲೈಂಗಿಕ ದೌರ್ಜನ್ಯಗಳ ಕುರಿತು ವಿದ್ಯಾರ್ಥಿಗಳಿಂದ ರೂಪುಗೊಂಡಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಕಾಲೇಜು ಪ್ರಾಂಶುಪಾಲೆ ಟಿ.ಎ.ಲಿಖಿತಾ ಅವರ ಪರಿಕಲ್ಪನೆಯಲ್ಲಿ ಕಲಾರಂಭ್ ಎಂಬ ವಿನೂತನ ಕಾರ್ಯಕ್ರಮಕ್ಕೆ ಕಾಲೇಜು ಆವರಣ ಸಾಕ್ಷಿಯಾಗಿತ್ತು. ಕಾಲೇಜಿನ ಟ್ರಿಸ್ಟಿ ಎನ್.ಎನ್.ನಂಜಪ್ಪ, ಕಾಲೇಜು ಅಧೀಕ್ಷಕ ಮಹೇಶ್ ಅಮೀನ್, ವಿವೇಕಾನಂದ ಪಿಯು ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಶ್ಮಾ ಇದ್ದರು. ರೂಪಕಗಳ ತೀರ್ಪುಗಾರರಾಗಿ ಪಿಯು ವಿಭಾಗದ ಉಪನ್ಯಾಸಕ ವಿಕ್ರಂ, ಮಂಜುನಾಥ್, ಮಹೇಶ್ ಅಮೀನ್, ಕಾರ್ಯನಿರ್ವಹಿಸಿದರು. ಉಪನ್ಯಾಸಕ ಮಂಜೇಶ್ ಸ್ವಾಗತಿಸಿದರು. ದೀಪ್ತಿ ನಿರೂಪಿಸಿದರು.









