
ಮಡಿಕೇರಿ ಮಾ.10 NEWS DESK : ಕೊಡಗು ಗೌಡ ಯುವ ವೇದಿಕೆ ಆಯೋಜಿಸುತ್ತಿರುವ GPL ಸೀಸನ್ 3 ಒಕ್ಕಲಿಗರ ಲೆದರ್ ಬಾಲ್ ಕ್ರೀಡಾಕೂಟಕ್ಕೆ ಆಟಗಾರರ ಹರಾಜು ಪ್ರಕ್ರಿಯೆ ಗೌಡ ಸಮಾಜದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕೊಡಗು ಗೌಡ ಸಮಾಜ ಮಡಿಕೇರಿಯ ಕಾರ್ಯದರ್ಶಿ ಕೋಳುಮುಡಿಯನ ಅನಂತಕುಮಾರ್ ಉದ್ಘಾಟಿಸಿ ಶುಭಹಾರೈಸಿದರು. ಕೊಡಗು ಜಿಲ್ಲಾ ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ, ಎಒಎಲ್ಇ ಯ ಜನರಲ್ ಸೆಕ್ರೆಟರಿ ಕುರುಂಜಿ ಅಕ್ಷಯ್ ಚಿದಾನಂದ ಭಾಗವಹಿಸಿ ಕ್ರೀಡಾಕೂಟದ ಯಶಸ್ಸಿಗೆ ಹಾರೈಸಿ ಯುವ ವೇದಿಕೆಯ ಕಾರ್ಯವನ್ನು ಶ್ಲಾಘಿಸಿದರು. ಮಡಿಕೇರಿಯ ಯುವ ವಕೀಲರಾದ ಕೊಟ್ಟಕೇರಿಯನ ಶ್ರೀಜಾ ದಯಾನಂದ್ ಗಂಟೆ ಬಾರಿಸುವ ಮೂಲಕ ಬಿಡ್ಡಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದರು. ಯುವ ವೇದಿಕೆಯ ಅಧ್ಯಕ್ಷರಾದ ಪಾಣತ್ತಲೆ ಜಗದೀಶ್ ಮಂದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನವೀನ್ ದೇರಳ ಸ್ವಾಗತಿಸಿದರು. ಪರಿಚನ ಸತೀಶ್ ವಂದಿಸಿದರು. ಈ ಬಾರಿ 10 ಫ್ರಾಂಚೈಸಿಗಳು, 180 ಆಟಗಾರರನ್ನು ಹರಾಜು ಪ್ರಕ್ರಯೆಯ ಮುಖಾಂತರ ಖರೀದಿ ಮಾಡಲಿವೆ.









