Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಐಸಿಎಸ್‌ಇ 10 ನೇ ತರಗತಿ ಪರೀಕ್ಷೆಯಲ್ಲಿ ಅಧೃತ್ ಶರ್ಮ ಕೊಡಗಿಗೆ ಪ್ರಥಮ*
  • *ಇಂಟರ್ ಗೆಲ್ ಫೈಟಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ವಿದ್ಯಾರ್ಥಿಗಳು*
  • *ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*
  • *ಮೇ 12 ರಂದು ಉದ್ಯೋಗ ಮೇಳ*
  • *ಹುದ್ದೆಗೆ ಅರ್ಜಿ ಆಹ್ವಾನ*
  • *ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ
  • *ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*
  • *ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*
  • *ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*
  • *ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡವ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪುರಸ್ಕೃತರು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡವ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪುರಸ್ಕೃತರು*

ಮಾರ್ಚ್ 15, 20257 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.15 NEWS DESK : ಅಮ್ಮತ್ತಿ ಕೊಡವ ಸಮಾಜವು ಸಾಹಿತಿಕ ಹಾಗೂ ಸಾಂಸ್ಕೃತಿಕವಾಗಿ ಸಿಂಗಾರಗೊಳ್ಳುತ್ತಿದೆ. ಇದೇ ಮಾರ್ಚ್ 29,30ರಂದು ನಡೆಯಲಿರುವ ‘ಕೊಡವ ಬಲ್ಯನಮ್ಮೆ’ಗೆ ಸಕಲ ಸಿದ್ಧತೆಗಳು ಬಿಡುವಿಲ್ಲದೆ ನಡೆಯುತ್ತಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಅಮ್ಮತ್ತಿ ಕೊಡವ ಸಮಾಜದ ಸಹಯೋಗದಲ್ಲಿ ನಡೆಸುತ್ತಿರುವ ಕೊಡವ ಬಲ್ಯನಮ್ಮೆಯು ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡಿದ್ದು ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಸಾರಥ್ಯದಲ್ಲಿ ತಯಾರಿಗೊಳ್ಳುತ್ತಿದೆ.
ಸಾಂಸ್ಕೃತಿಕ – ಜಾನಪದ ಮೆರವಣಿಗೆ :: ಕೊಡವ ಬಲ್ಯನಮ್ಮೆಯ ಮೊದಲ ದಿನ ಬೆಳಗ್ಗೆ 9 ಗಂಟೆಗೆ ಹೊಸೂರು ಜಂಕ್ಷನ್‍ನಿಂದ ಕೊಡವ ಸಮಾಜದವರೆಗೆ ಕೊಡವ ಸಾಂಸ್ಕೃತಿಕ–ಜಾನಪದ ಮೆರವಣಿಗೆಯನ್ನು ಅಮ್ಮತ್ತಿ ನಾಡಿನ ಹಿರಿಯರು ಹಾಗೂ ಸಮಾಜ ಸೇವಕರಾದ ನೆಲ್ಲಮಕ್ಕಡ ಶಂಭು ಸೋಮಯ್ಯ, ಕಾವಾಡಿಚಂಡ ಯು. ಗಣಪತಿ ಉದ್ಘಾಟಿಸಲಿದ್ದಾರೆ. ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರಾದ ಐನಂಡ ಪ್ರಕಾಶ್ ಗಣಪತಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯನವರು ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಕೆ. ಸುಬ್ರಮಣಿ, ಕೊಡವ ಸಮಾಜ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ, ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್, ಕೊಡವ ಭಾಷಾ ಸಮುದಾಯಗಳ ಕೂಟ(ರಿ) ಅಧ್ಯಕ್ಷ ಡಾ| ಮೇಚಿರ ಸುಭಾಷ್ ನಾಣಯ್ಯ, ಸವಿತ ಸಮಾಜದ ಅಧ್ಯಕ್ಷ ತಾಪನೆರ ಎಂ. ಸಾಬು, ಬಣ್ಣ ಸಮಾಜದ ಅಧ್ಯಕ್ಷ ಬೀಕಚಂಡ ಬೆಳ್ಯಪ್ಪ, ಅರಮನೆಪಾಲೆ ಸಮಾಜದ ಮುಖ್ಯಸ್ಥ ಅರಮನೆಪಾಲೆರ ದೇವಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪುಸ್ತಕ ಬಿಡುಗಡೆ ::  ‘ಪಟ್ಟೋಲೆ ಪಳಮೆ’ಯ ನಡಿಕೇರಿಯಂಡ ಚಿಣ್ಣಪ್ಪ ಅವರ ಜ್ಞಾಪಕಾರ್ಥವಾಗಿ ನಡೆಸುವ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಪ್ಪುಡಿರ ಪಿ. ಬೆಳ್ಯಪ್ಪ ವಹಿಸಲಿದ್ದಾರೆ. ಮೇ| ಮುಂಡಂಡ ಎಂ. ಮಾಚಯ್ಯ(ರಿ) ಅವರು ಬರೆದಿರುವ ‘ಎಳ್ತ್‍ರ ಜೊಪ್ಪೆ’, ಕ್ಯಾ| ಬಿದ್ದಂಡ ನಾಣಿ ದೇವಯ್ಯ(ರಿ)ನವರು ಬರೆದಿರುವ ‘ಬೊಳ್ಳಿ ಕೊಂಬ್‍ರ ಕೂತ್’, ಸಣ್ಣುವಂಡ ಎಂ. ವಿಶ್ವನಾಥ್ (ಪ್ರಕಾಶ)ರವರು ಬರೆದಿರುವ ‘ಕೂತ್‍ಂಗೊರೆ’, ಉಡುವೆರ ರಾಜೇಶ್ ಉತ್ತಪ್ಪನವರು ಬರೆದಿರುವ ‘ಕೂಟ್‍ಕರಿ’, ಅಜ್ಜಿನಿಕಂಡ ಪ್ರಮೀಳ ನಾಚಯ್ಯನವರು ಬರೆದಿರುವ ‘ಮರಕೊಟ್ಟ’, ಮುಂಡಂಡ ಎ. ಪೂಣಚ್ಚನವರು ಬರೆದಿರುವ ‘ಎಳ್ತ್‍ರ ಪತ್ತಾಯ’, (ದಿ. ಬಾಚಮಡ ಡಿ. ಗಣಪತಿ)ಯವರ ‘ಕೊಡವ: ಓರ್ ಚಿತ್ರಕಥೆ’, ಮುಕ್ಕಾಟಿರ ಸರೋಜ ಸುಬ್ಬಯ್ಯನವರು ಬರೆದಿರುವ ‘ಸರೋಜ’, ಬೊಳ್ಳಚೆಟ್ಟಿರ ವಿಜಯ ಚೆಟ್ಟಿಚರವರು ಬರೆದಿರುವ ‘ಚೆಂಬಂದುಡಿ’ ಎಂಬ ಪುಸ್ತಕವನ್ನು ಐಆರ್‍ಎಸ್ ಅಧಿಕಾರಿ ದೇವಣಿರ ಪ್ರೀತ್ ಗಣಪತಿ ಇವರು ಬಿಡುಗಡೆ ಮಾಡಲಿದ್ದಾರೆ.
ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು :: ಬೆಳಗ್ಗೆ 11 ಗಂಟೆಗೆ ತ್ರಿಭಾಷಾ ಸಾಹಿತಿ ಮಂಡಿರ ಜಯ ಅಪ್ಪಣ್ಣ ಇವರ ಜ್ಞಾಪಕಾರ್ಥವಾಗಿ ನಡೆಯುವ ಕೊಡವ ಆಟ್-ಪಾಟ್ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯನವರು ವಹಿಸಲಿದ್ದು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಿದ್ದಾಟಂಡ ಎಸ್. ತಮ್ಮಯ್ಯ ವಿವಿಧ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಿದ್ದಾರೆ. ಸಮಾಜ ಸೇವಕ ಪಾಲಂದಿರ ಎ. ಜೋಯಪ್ಪ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪುದಿಯೊಕ್ಕಡ ಕಾಶಿ ಕರುಂಬಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೋರಿ ರಾಜಪ್ಪ ಇವರ ಜ್ಞಾಪಕಾರ್ಥವಾಗಿ ವಿವಿಧ ಸ್ಫರ್ಧಾ ಕಾರ್ಯಕ್ರಮಗಳಾದ ಉಮ್ಮತ್ತಾಟ್-ಪೊನ್ನಾಜಿರ ಧರಣಿ, ಬೊಳಕಾಟ್-ಕುಕ್ಕೆರ ಜಯ ಚಿಣ್ಣಪ್ಪ, ಕೋಲಾಟ್-ಡಾ| ಅಜ್ಜಿನಿಕಂಡ ಸಿ. ಗಣಪತಿ, ಕತ್ತಿಯಾಟ್-ಮಲ್ಲಪನೆರ ವಿನು ಚಿಣ್ಣಪ್ಪ, ಉರ್‍ಟಿಕೊಟ್ಟ್ ಆಟ್-ಕುಡಿಯರ ಶಾರದ, ಕಪ್ಪೆಯಾಟ್-ಚೊಟ್ಟೆಯಂಡ ಸಮಿತ್ ಸೋಮಣ್ಣ, ಬಾಳೋಪಾಟ್-ಬೊಟ್ಟೋಳಂಡ ಕಾಶಿ ಅಚ್ಚಯ್ಯ, ಕೊಂಬು-ಕೊಟ್ಟ್- ಶ್ರೀನಿವಾಸ್, ವಾಲಗತಾಟ್- ಅಜ್ಜಿಕುಟ್ಟಿರ ಸಿ. ಗಿರೀಶ್, ಸಮ್ಮಂಧ ಕೊಡ್‍ಪ-ಚೇನಂಡ ರಘು ಉತ್ತಪ್ಪ, ಪರಿಯಕಳಿ-ಪಾಲೇಂಗಡ ಅಮಿತ್ ಭೀಮಯ್ಯ, ಮಂಡೆಕ್ ‘ತುಣಿ’ ಕೆಟ್ಟುವ-ಕ್ಯಾಲೇಟಿರ ಪವಿತ್ ಪೂವಯ್ಯನವರು ಚಾಲನೆಯನ್ನು ನೀಡಲಿದ್ದಾರೆ.
ಪುಸ್ತಕ ಪ್ರದರ್ಶನ :: ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ಜ್ಞಾಪಕಾರ್ಥವಾಗಿ ಬೆಳಗ್ಗೆ 11.30 ಗಂಟೆಗೆ ಪುಸ್ತಕ ಮತ್ತು ವಸ್ತು ಪ್ರದರ್ಶನಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯನವರು ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವಂಡ ಪಿ. ಮುತ್ತಪ್ಪ, ಕೊಡಗು ಐರಿ ಸಮಾಜದ ಅಧ್ಯಕ್ಷರಾದ ಮೇಲತ್ತಂಡ ರಮೇಶ್ ಭಾಗವಹಿಸಲಿದ್ದಾರೆ.
ವಿಚಾರಗೋಷ್ಠಿ : ಡಾ. ಬೊವ್ವೇರಿಯಂಡ ನಂಜಮ್ಮ-ಚಿಣ್ಣಪ್ಪ ಇವರ ಜ್ಞಾಪಕಾರ್ಥವಾಗಿ ಮಧ್ಯಾಹ್ನ 12.00 ಗಂಟೆಗೆ ನಡೆಸುವ ವಿಚಾರಗೋಷ್ಠಿಗೆ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಚಾಲನೆ ನೀಡಲಿದ್ದು, ರಿ. ಲೆಕ್ಚರರ್ ಚೇಮಿರ ಎಂ. ಭೀಮಯ್ಯ, ರಿ. ಪ್ರಿನ್ಸಿಪಾಲ್ ಪ್ರೊ| ಪಟ್ಟಡ ಎ. ಪೂವಣ್ಣ, ಕುಶಾಲನಗರ ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಅರಮನೆಪಾಲೆ ಸಮಾಜದ ಅಧ್ಯಕ್ಷ ಅರಮನೆಪಾಲೆರ ಕೆ. ಮಂದಣ್ಣ, ಮಡಿಕೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತ ಬೊಳ್ಳಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಾಚರಣಿಯಂಡ ಪಿ. ಅಪ್ಪಣ್ಣ ವಹಿಸಲಿದ್ದು, ಡಾ. ಬೋಡುಕುಟ್ಟಡ ರಾಧಿಕ ಕುಟ್ಟಪ್ಪ “ಕೊಡವ ಸಂಸ್ಕೃತಿರ ಬೊಳ್‍ಚೆಲ್ ಕೆಂಬಟ್ಟಿ ಜನಾಂಗ” ಹಾಗೂ ಲೆ.ಕ.ಅಜ್ಜಿನಿಕಂಡ ಸಿ. ಬೆಳ್ಯಪ್ಪ(ರಿ) “ಕೊಡವಾಮೆರ ಬೊಳಿಲ್ ಒಕ್ಕಾಮೆರ ಬೊಳ್‍ಚೆ” ಎಂಬ ವಿಷಯದ ಬಗ್ಗೆ ವಿಚಾರ ಮಂಡನೆಯನ್ನು ಮಾಡಲಿದ್ದಾರೆ.
ಕವಿಗೋಷ್ಠಿ ::  ತ್ರಿಭಾಷಾ ಸಾಹಿತಿ ಡಾ. ಐಚೆಟ್ಟಿರ ಮಾ. ಮುತ್ತಣ್ಣ ಇವರ ಜ್ಞಾಪಕಾರ್ಥವಾಗಿ ಮಧ್ಯಾಹ್ನ 2.00 ಗಂಟೆಗೆ ನಡೆಯಲಿರುವ ಕವಿಗೋಷ್ಠಿಯ ಉದ್ಘಾಟನೆಯನ್ನು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾದ ಬಿ. ಜಿ. ಅನಂತಶಯನರವರು ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕುಡಿಯರ ಮುತ್ತಪ್ಪ ಹಾಗೂ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣನವರು ಭಾಗವಹಿಸಲಿದ್ದಾರೆ. ಕವಿಗೋಷ್ಠಿ ಅಧ್ಯಕ್ಷತೆಯನ್ನು ಕ್ಯಾ. ಬಿದ್ದಂಡ ಡಿ. ನಾಣಯ್ಯ ವಹಿಸಲಿದ್ದು, ಪುತ್ತಾಮನೆ ವಿದ್ಯಾ ಜಗದೀಶ್, ಕೋಟೆರ ಉದಯ ಪೂಣಚ್ಚ, ಅಜ್ಜಿಕುಟ್ಟಿರ ಭವ್ಯ ಬೋಪಣ್ಣ, ವೈಲೇಶ್ ಪಿ. ಎಸ್, ಬಾದುಮಂಡ ಬೀನಾ ಕಾಳಯ್ಯ, ಕಾಣತಂಡ ವಿವೇಕ್ ಅಯ್ಯಪ್ಪ, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಕೊಟ್ರಂಡ ಶ್ರೀಕಾಂತ್ ಪೂವಣ್ಣ, ಪಂದ್ಯಂಡ ರೇಣುಕಾ ಸೋಮಯ್ಯ ಮತ್ತು ಮೂಕೊಂಡ ಪುಷ್ಪ ಪೂಣಚ್ಚ ಕವನ ವಾಚನ ಮಾಡಲಿದ್ದಾರೆ.
ಕೊಡವ ಸಾಹಿತ್ಯ ಬಲ್ಯನಮ್ಮೆ : ಸಾಹಿತಿ ಬಾಚಮಡ ಡಿ. ಗಣಪತಿ ಇವರ ಜ್ಞಾಪಕಾರ್ಥವಾಗಿ ದಿನಾಂಕ 30.03.2025 ಭಾನುವಾರದಂದು ಬೆಳಗ್ಗೆ 10.00 ಗಂಟೆಗೆ ನಡೆಯುವ ವಿಚಾರಗೋಷ್ಠಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ನಿ. ಜಂಟಿ ಆಯುಕ್ತರಾದ ಪವಿತ್ರ ಗಣಪತಿ ಉದ್ಘಾಟಿಸಲಿದ್ದು, ಹಿರಿಯ ವಕೀಲ ಮೇರಿಯಂಡ ಕೆ. ಪೂವಯ್ಯ (ಪೂಮಣಿ), ಬೇಂಗ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ, ಗೋಣಿಕೊಪ್ಪ ಕಾವೇರಿ ಸಂಸ್ಥೆಯ ಅಧ್ಯಕ್ಷ ಮಂಡೇಪಂಡ ಸುಗುಣ ಮುತ್ತಣ್ಣ, ಮಾದಾಪುರ ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಮನು ಮೇದಪ್ಪ, ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಾಹಿತಿ ಮತ್ತು ಸಂಶೋಧಕರಾಗಿರುವ ಮೂಕೊಂಡ ನಿತಿನ್ ಕುಶಾಲಪ್ಪ ವಿಚಾರಗೋಷ್ಠಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮೂವೇರ ರೇಖಾ ಪ್ರಕಾಶ್ ‘ಕೊಡವ ಪೊರಪಾಡ್‍ರ ಭೀರ್ಯ’ ಹಾಗೂ ಸೋಮೇಂಗಡ ಗಣೇಶ್ ತಿಮ್ಮಯ್ಯನವರು ‘ಕೃಷಿ ಬದ್‍ಕ್‍ಲ್ ಕೊಡವಾಮೆ’ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆಯನ್ನು ಮಾಡಲಿದ್ದಾರೆ.
ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ::  ಬೆಳಗ್ಗೆ 11.00 ಗಂಟೆಗೆ ಅಕಾಡೆಮಿ ಗೌರವ ಪ್ರಶಸ್ತಿ, ಪುಸ್ತಕ ಪ್ರಶಸ್ತಿ ಮತ್ತು ದುಡಿ-ತಾಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ವಹಿಸಲಿದ್ದು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರಾದ ಶಿವರಾಜ ಎಸ್. ತಂಗಡಗಿ ಇವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಿದ್ದಾರೆ. ಉಸ್ತುವಾರಿ ಸಚಿವರು ಕೊಡಗು ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಮಂತ್ರಿಗಳಾದ ಎನ್. ಎಸ್. ಬೋಸರಾಜು, ವಿರಾಜಪೇಟೆ ವಿಧಾನ ಸಭಾ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ|| ಮಂತರ್ ಗೌಡ, ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ, ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು, ಕೊಡಗು ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಕರವಟ್ಟಿರ ಟಿ. ಪೆಮ್ಮಯ್ಯ, ಮೈಸೂರು ಕೊಡವ ಸಮಾಜದ ಅಧ್ಯಕ್ಷರಾದ ಪೊಂಜಂಡ ಗಪ್ಪು ಗಣಪತಿ; ಕೊಡಗು ಜಿಲ್ಲಾಧಿಕಾರಿ, ವೆಂಕಟರಾಜ ಭಾ.ಆ.ಸೇ, ಬೆಂಗಳೂರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಾಜಿ ನಿರ್ದೇಶಕಿ ಧರಣೀದೇವಿ ಮಾಲಗತ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಭಾ.ಪೊ.ಸೇ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ. ಬೋಪಣ್ಣ, ಸ್ಟಾರ್‍ಲಾ ಪಾರ್ಟ್‍ನರ್ ಸಿ.ಇ.ಒ ಪುಗ್ಗೆರ ಎಂ. ದಿನೇಶ್ ದೇವಯ್ಯ, ಕೊಡಗು ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಐರಿರ ಎ. ಗೋಪಾಲ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ವಿ. ಎನ್. ಮಲ್ಲಿಕಾರ್ಜುನ ಸ್ವಾಮಿ, ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಎನ್. ಪೃಥ್ಯು, ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಜಿ. ಅಯ್ಯಪ್ಪ, ಅರಮನೆಪಾಲೆ ಸಮಾಜದ ಅಧ್ಯಕ್ಷ ಅರಮನೆಪಾಲೆರ ಕೆ. ಮಂದಣ್ಣ, ಕುಡಿಯ ಜನಾಂಗದ ಜಾನಪದ ಕಲಾವಿದ ಕುಡಿಯರ ಕೆ. ಪೊನ್ನಪ್ಪ, ಮೇದ ಜನಾಂಗದ ಜಾನಪದ ಕಲಾವಿದ ಮೇದರ ಚಂದ್ರ, ಕಾಪಾಳ ಜನಾಂಗದ ಜಾನಪದ ಕಲಾವಿದ ಕಾಪಾಳಡ ತಮ್ಮಯ್ಯ ಪೂಣಚ್ಚ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬಲ್ಯನಮ್ಮೆಗೆ ಕೊಡವ ಭಾಷಿಕ ಜನಾಂಗಗಳ ಸಮಾಜದ ಅಧ್ಯಕ್ಷರುಗಳು ಹಾಗೂ ಮುಖಂಡರುಗಳನ್ನು ವಿಶೇಷವಾಗಿ ಆಹ್ವಾನಿಸಿದ್ದು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿ ಬರುವ ಎಲ್ಲಾ ಪ್ರಾಧಿಕಾರಗಳು ಹಾಗೂ ಅಕಾಡೆಮಿ ಅಧ್ಯಕ್ಷರು, ಸದಸ್ಯರುಗಳನ್ನು ಆಹ್ವಾನಿಸಿರುವುದು ವಿಶೇಷವಾಗಿದೆ. ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪುರಸ್ಕೃತರು : 2022-23 ಮತ್ತು 2023-24ನೇ ವರ್ಷದ ಕೊಡವ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪುರಸ್ಕೃತರನ್ನು ಅಕಾಡೆಮಿಯು ಆಯ್ಕೆಮಾಡಿದ್ದು ಇದರ ಪ್ರದಾನ ಸಮಾರಂಭ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ವಹಿಸಲಿದ್ದು, ಕೊಡವ ಸಂಸ್ಕೃತಿ, ಪಾಟ್-ಪಡಿಪು ಕ್ಷೇತ್ರ-ಕೋಡಿಮಣಿಯಂಡ ತಮ್ಮುಣಿ ಬೋಪಯ್ಯ, ಕೊಡವ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರ- ಕಾಟಿಮಡ ಜಿಮ್ಮಿ ಅಣ್ಣಯ್ಯ, ಕೊಡವ ಜಾನಪದ ಕ್ಷೇತ್ರ-ಚೇನಂಡ ರಘು ಉತ್ತಪ್ಪ, ದಾನ-ಧರ್ಮ, ಸಮಾಜ ಸೇವಾ ಕ್ಷೇತ್ರ- ಕೈಬುಲಿರ ಪಾರ್ವತಿ ಬೋಪಯ್ಯ, ಕೊಡವ ಆಟ್-ಪಾಟ್, ಸಂಸ್ಕೃತಿ ಕ್ಷೇತ್ರ-ಚೀಯಕಪೂವಂಡ ಬಿ. ದೇವಯ್ಯ, ಜನ ಸೇವಾ ಕ್ಷೇತ್ರ- ಹೀರಕುಟ್ಟಡ ಟಸ್ಸಿ ಸದನ್ ಇವರುಗಳಿಗೆ ಗೌರವ ಪ್ರಶಸ್ತಿಯನ್ನು ಹಾಗೂ ಮಚ್ಚಮಡ ಲಾಲ ಕುಟ್ಟಪ್ಪ-‘ಮೂಪಾಜೆ ನಿಗಂಟ್’, ಐಚಂಡ ರಶ್ಮಿ ಮೇದಪ್ಪ-‘ಸಾಂಸ್ಕೃತಿರ ಪಿಞ್ಞ ಧಾರ್ಮಿಕ ಹಿನ್ನಲೆಲ್ ಕೊಡವಡ ಐನ್‍ಮನೆ ಅಧ್ಯಯನ ಗ್ರಂಥ ಪುಸ್ತಕ, ಕೊಟ್ಟ್‍ಕತ್ತಿರ ಪ್ರಕಾಶ್ ಕಾರ್ಯಪ್ಪ-‘ನಾಡ ಕೊಡಗ್(ಕಾದಂಬರಿ)’ ಹಾಗೂ ಚೊಟ್ಟೆಯಂಡ ಲಲಿತ ಕಾರ್ಯಪ್ಪ-‘ಅಗ್ಗೇನ’ ಎಂಬ ಪುಸ್ತಕಕ್ಕೆ ಪುಸ್ತಕ ಪ್ರಶಸ್ತಿಯನ್ನು ನೀಡಲಾಗುವುದು.
ವಿವಿಧ ಸಮಿತಿಗಳು : ಕೊಡವ ಬಲ್ಯನಮ್ಮೆಯ ಯಶಸ್ಸಿಗೆ ಅನುಕೂಲವಾಗುವಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ಸಮಿತಿಯ ಗೌರವ ಅಧ್ಯಕ್ಷರಾಗಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಅಜ್ಜಿಕುಟ್ಟಿರ ಎಸ್. ಪೊನಣ್ಣ, ಅಧ್ಯಕ್ಷರಾಗಿ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹಾಗೂ ಅಮ್ಮತ್ತಿ ಕೊಡವ ಸಮಾಜದ ಐನಂಡ ಪ್ರಕಾಶ ಗಣಪತಿ ಇದ್ದು ಪ್ರಚಾರ ಸಮಿತಿಯ ಸಂಚಾಲಕರಾಗಿ ಅಕಾಡೆಮಿಯ ಸದಸ್ಯರುಗಳಾದ ಪುತ್ತರಿರ ಪಪ್ಪು ತಿಮ್ಮಯ್ಯ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಹಾಗೂ ಅಧ್ಯಕ್ಷರಾಗಿ ಮೂಕೊಂಡ ನಿತಿನ್ ಕುಶಾಲಪ್ಪ ಹಾಗೂ ಸದಸ್ಯರು ಕಾರ್ಯನಿರ್ವಹಿಸಲಿರುವರು. ಸ್ವಾಗತ ಸಮಿತಿ ಸಂಚಾಲಕರಾಗಿ ಅಕಾಡೆಮಿಯ ಸದಸ್ಯರುಗಳಾದ ನಾಪಂಡ ಗಣೇಶ್, ಕಂಬೆಯಂಡ ಡೀನಾ ಬೋಜಣ್ಣ ಹಾಗೂ ಅಧ್ಯಕ್ಷರಾಗಿ ಕೇಚಂಡ ಕುಶಾಲಪ್ಪ ಹಾಗೂ ಸದಸ್ಯರು ಕಾರ್ಯನಿರ್ವಹಿಸಲಿರುವರು. ಮೆರವಣಿಗೆ ಸಮಿತಿ ಸಂಚಾಲಕರಾಗಿ ಅಕಾಡೆಮಿಯ ಸದಸ್ಯರುಗಳಾದ ಪಾನಿಕುಟ್ಟಿರ ಕೆ. ಕುಟ್ಟಪ್ಪ, ನಾಪಂಡ ಸಿ. ಗಣೇಶ್ ಹಾಗೂ ಅಧ್ಯಕ್ಷರಾಗಿ ಕಾಣತಂಡ ಬೀನಾ ಜಗದೀಶ್ ಹಾಗೂ ಸದಸ್ಯರು ಕಾರ್ಯನಿರ್ವಹಿಸಲಿರುವರು. ವೇದಿಕೆ ಸಮಿತಿ ಸಂಚಾಲಕರಾಗಿ ಅಕಾಡೆಮಿಯ ಸದಸ್ಯರುಗಳಾದ ನಾಯಂದಿರ ಆರ್. ಶಿವಾಜಿ ನಾಯಕಂಡ ಬೇಬಿ ಚಿಣ್ಣಪ್ಪ ಹಾಗೂ ಅಧ್ಯಕ್ಷರಾಗಿ ಮಾಚಿಮಂಡ ಸುರೇಶ್ ಅಯ್ಯಪ್ಪ ಹಾಗೂ ಸದಸ್ಯರು ಕಾರ್ಯನಿರ್ವಹಿಸಲಿರುವರು. ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಅಕಾಡೆಮಿಯ ಸದಸ್ಯರುಗಳಾದ ಚೊಟ್ಟೆಯಂಡ ಎ. ಸಂಜು ಕಾವೇರಪ್ಪ, ಕಂಬೇಯಂಡ ಡೀನಾ ಬೋಜಣ್ಣ ಹಾಗೂ ಅಧ್ಯಕ್ಷರಾಗಿ ಕ್ಯಾ. ಬಿದ್ದಂಡ ನಾಣಿ ದೇವಯ್ಯ ಹಾಗೂ ಸದಸ್ಯರು ಕಾರ್ಯನಿರ್ವಹಿಸಲಿರುವರು. ಊಟೋಪಚಾರ ಸಮಿತಿ ಸಂಚಾಲಕರಾಗಿ ಅಕಾಡೆಮಿಯ ಸದಸ್ಯರುಗಳಾದ ಚೆಪ್ಪುಡಿರ ಎ. ಉತ್ತಪ್ಪ, ಕೊಂಡಿಜಮ್ಮನ ಕೆ. ಬಾಲಕೃಷ್ಣ ಹಾಗೂ ಅಧ್ಯಕ್ಷರಾಗಿ ಮಾಚಿಮಂಡ ಬಿ. ವಸಂತ ಹಾಗೂ ಸದಸ್ಯರು ಕಾರ್ಯನಿರ್ವಹಿಸಲಿರುವರು.
ಶಿಸ್ತು ಸಮಿತಿ ಸಂಚಾಲಕರಾಗಿ ಅಕಾಡೆಮಿಯ ಸದಸ್ಯರುಗಳಾದ ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ನಾಯಂದಿರ ಆರ್. ಶಿವಾಜಿ, ಕುಡಿಯರ ಕಾವೇರಪ್ಪ ಹಾಗೂ ಅಧ್ಯಕ್ಷರಾಗಿ ನೆಲ್ಲಮಕ್ಕಡ ವಿಠಲ್ ಉತ್ತಯ್ಯ ಹಾಗೂ ಸದಸ್ಯರು ಕಾರ್ಯನಿರ್ವಹಿಸಲಿರುವರು. ಆರೋಗ್ಯ ಹಾಗೂ ಸ್ವಚ್ಛತೆ ಸಮಿತಿ ಸಂಚಾಲಕರಾಗಿ ಅಕಾಡೆಮಿಯ ಸದಸ್ಯರುಗಳಾದ ಪುತ್ತರಿರ ಪಪ್ಪು ತಿಮ್ಮಯ್ಯ, ಪಾನಿಕುಟ್ಟಿರ ಕುಟ್ಟಪ್ಪ ಹಾಗೂ ಅಧ್ಯಕ್ಷರಾಗಿ ಕ್ಯಾ. ಪಟ್ಟಡ ಕಾರ್ಯಪ್ಪ ಹಾಗೂ ಸದಸ್ಯರು ಕಾರ್ಯನಿರ್ವಹಿಸಲಿರುವರು. ಬಲ್ಯನಮ್ಮೆಯ ಕಾರ್ಯಕ್ರಮಗಳನ್ನು ಎರಡು ದಿವಸ ಕೋಡಿಮಣಿಯಂಡ ಅಶ್ವಿನಿ ಗಣಪತಿ, ಕುಟ್ಟಂಡ ಸಾಬು ಸುಬ್ಬಯ್ಯ, ಅಜ್ಜಿನಿಕಂಡ ಪ್ರಮೀಳ ನಾಚಯ್ಯ, ಪಟ್ಟಡ ಧನು ಉತ್ತಯ್ಯ, ಚೋಕಿರ ಅನಿತ ದೇವಯ್ಯ, ಕ್ಯಾ. ಬಿದ್ದಂಡ ನಾಣಿ ದೇವಯ್ಯ, ಅಜ್ಜಿಕುಟ್ಟಿರ ಸಿ. ಗಿರೀಶ್, ಕುಕ್ಕೆರ ಜಯಾ ಚಿಣ್ಣಪ್ಪ ಹಾಗೂ ಚೆಯ್ಯಂಡ ಸತ್ಯ ಗಣಪತಿ ನಿರೂಪಿಸುವುದರ ಮೂಲಕ ಮನರಂಜಿಸಲಿರುವರು. ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಹಾಗೂ ಸದಸ್ಯರುಗಳಾದ ಕಂಬೆಯಂಡ ಡೀನಾ ಬೋಜಣ್ಣ, ನಾಯಕಂಡ ಬೇಬಿ ಚಿಣ್ಣಪ್ಪ, ನಾಯಂದಿರ ಆರ್. ಶಿವಾಜಿ, ನಾಪಂಡ ಸಿ. ಗಣೇಶ್ ಹಾಗೂ ಪುತ್ತರಿರ ಪಪ್ಪು ತಿಮ್ಮಯ್ಯ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಪೊನ್ನಿರ ಯು. ಗಗನ್, ಚೊಟ್ಟೆಯಂಡ ಸಂಜು ಕಾವೇರಪ್ಪ ಹಾಜರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಐಸಿಎಸ್‌ಇ 10 ನೇ ತರಗತಿ ಪರೀಕ್ಷೆಯಲ್ಲಿ ಅಧೃತ್ ಶರ್ಮ ಕೊಡಗಿಗೆ ಪ್ರಥಮ*

ಮೇ 10, 2026

*ಇಂಟರ್ ಗೆಲ್ ಫೈಟಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ವಿದ್ಯಾರ್ಥಿಗಳು*

ಮೇ 10, 2026

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಇಂಟರ್ ಗೆಲ್ ಫೈಟಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ವಿದ್ಯಾರ್ಥಿಗಳು*

ಮೇ 10, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಮೇ 10 : ಇಂಡಿಯನ್ ಇಂಟರ್ ಗೆಲ್ ಫೈಟಿಂಗ್ ಅಸೋಸಿಯೇಷನ್ ವತಿಯಿಂದ ಉತ್ತರ ಪ್ರದೇಶದ ಸಹರಂಗಪುರದಲ್ಲಿ…

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಮೇ 9, 2026

*ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*

ಮೇ 9, 2026

*ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*

ಮೇ 9, 2026

*ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*

ಮೇ 9, 2026

*ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*

ಮೇ 9, 2026

*ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*

ಮೇ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.