



ಮಡಿಕೇರಿ ಮಾ.19 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅನುದಾನದಲ್ಲಿ ರೆಂಕಿಲ್ ಮೊಟ್ಟೆ ಹಾಗೂ ಚಾಂಬಾಡು ದೈವಸ್ಥಾನ ಬಳಿ ಕೈಗೊಂಡಿರುವ ಡಾಂಬರೀಕರಣ ಕಾಮಗಾರಿಯನ್ನು ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು ಅವರ ನೇತೃತ್ವದಲ್ಲಿ ಪರಿಶೀಲಿಸಲಾಯಿತು. ರಸ್ತೆಯ ಗುಣಮಟ್ಟ ಹಾಗೂ ಉದ್ದಗಲವನ್ನು ಪರಿಶೀಲಿಸಿದ ಸದಸ್ಯರು, ಗುತ್ತಿಗೆದಾರರಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಹಲವು ಬದಲಾವಣೆ ಮಾಡುವಂತೆ ಸಲಹೆ ನೀಡಿದರು. ಇದೇ ಸಂದರ್ಭ ಕಾಮಗಾರಿ ನಡೆಸಲು ಅನುದಾನ ಬಿಡುಗಡೆ ಮಾಡಿದ ಶಾಸಕರು, ಸಹಕರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಹಾಗೂ ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಅವರಿಗೆ ಗ್ರಾಮಸ್ಥರು ಗ್ರಾಮಸ್ಥರು ಧನ್ಯವಾದಗಳು ಅರ್ಪಿಸಿದರು.