



ಮಡಿಕೇರಿ ಮಾ.19 NEWS DESK : ಬಾತೂರು ಶ್ರೀ ಭಗವತಿ ಕ್ಷೇತ್ರದ ಕಯಗಂ ಪನತ್ತಡಿ ತಾನತ್ತಿಂಗಾಲ್ ಶ್ರೀ ವಯನಾಟ್ ಕುಲವನ್ ದೇವಾಲಯದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ.21, 22 ಹಾಗೂ 23 ರಂದು ಜರುಗಲಿದೆ. 120 ವರ್ಷಗಳ ನಂತರ ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿದೆ. ಮಾ.21 ರಂದು ಪೂರ್ವಾಹ್ನ 10.15 ರಿಂದ ಉಗ್ರಾಣ ತುಂಬುವುದು, 11 ಗಂಟೆಯಿಂದ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದ್ದು, ಕಾರ್ಯಕ್ರಮವನ್ನು ಕೇರಳದ ರೆವನ್ಯೂ ಸಚಿವ ಕೆ.ರಾಜನ್ ಉದ್ಘಾಟಿಸಲಿದ್ದಾರೆ. ಆಚರಣಾ ಸಮಿತಿ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಪಾಲ್ಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಕಾಸರಗೋಡು ಲೋಕಸಭಾ ಸದಸ್ಯ ರಾಜ್ ಮೋಹನ್ ಉಣ್ಣಿತ್ತಾನ್, ಕಾಞಂಗಾಡ್ ಶಾಸಕ ಇ.ಚಂದ್ರಶೇಖರನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಸರಗೋಡು ಜಿ.ಪಂ ಅಧ್ಯಕ್ಷರಾದ ಬೇಬಿ ಬಾಲಕೃಷ್ಣನ್, ಪನತ್ತಡಿ ಗ್ರಾ.ಪಂ ಅಧ್ಯಕ್ಷ ಪ್ರಸನ್ನ ಪ್ರಸಾದ್, ಕಳ್ಳಾರ್ ಗ್ರಾ.ಪಂ ಅಧ್ಯಕ್ಷ ಟಿ.ಕೆ.ನಾರಾಯಣ್, ಬಾತೂರು ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಇ.ಕೆ.ಶಾಜಿ, ಕಣ್ಣೂರು ವಿಶ್ವವಿದ್ಯಾನಿಲಯ ಮಾಜಿ ಉಪ ಕುಲಪತಿಗಳು ಖಾದರ್ ಮಾಙಡ್, ಕಳ್ಳಾರ್ ಸೈಂಟ್ ತೋಮಸ್ ಚರ್ಚ್ ಧರ್ಮಾಧಿಕಾರಿ ಫಾ.ಜೋಸಫ್ ತರಪ್ಪುತೊಟ್ಟಿಯಲ್ ಪಾಲ್ಗೊಂಡು ಶುಭ ಕೋರಲಿದ್ದಾರೆ. ಮಾ.22 ರಂದು ಸಂಜೆ 5 ಗಂಟೆಗೆ ಕೈವೀದ್ ಬಳಿಕ ದೈವಗಳ ಕೂಡುವಿಕೆ, ಸಂಜೆ 5 ಗಂಟೆಗೆ ಕೋರಚ್ಚನ್ ದೈವದ ವೆಳ್ಳಾಟ, ರಾತ್ರಿ 8 ಗಂಟೆಯಿಂದ ಕಂಡನಾರ್ ಕೇಳನ್ ದೈವದ ವೆಳ್ಳಾಟ ಹಾಗೂ ಬಪ್ಪಿಡಲ್ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11 ಗಂಟೆಯಿಂದ ಶ್ರೀ ವಿಷ್ಣುಮೂರ್ತಿ ದೇವರ ತಿಡಂಙಲ್, 11.30 ರಿಂದ ವಯನಾಟ್ ಕುಲವನ್ ದೇವರ ವೆಳ್ಳಾಟ ಜರುಗಲಿದೆ. ಮಾ.23 ರಂದು ಪೂರ್ವಾಹ್ನ 8 ಗಂಟೆಗೆ ಶ್ರೀ ಕೋರಚ್ಚನ್ ದೈವ ಹೊರಡುವುದು, ಪೂರ್ವಾಹ್ನ 10.30 ಗಂಟೆಗೆ ಶ್ರೀ ಕಂಡನಾರ್ ಕೇಳನ್ ದೈವ ಹೊರಡುವುದು, ಪೂರ್ವಾಹ್ನ 11 ಗಂಟೆಯಿಂದ ಅನ್ನದಾನ ನೆರವೇರಲಿದೆ. ಸಂಜೆ 3 ಗಂಟೆಗೆ ಶ್ರೀ ವಯನಾಟ್ ಕುಲವನ್ ದೈವ ಹೊರಡುವುದು, ಚೂಟ್ ಸಮರ್ಪಣೆ, ಶ್ರೀ ವಿಷ್ಣುಮೂರ್ತಿ ದೈವ ಹೊರಡುವುದು, ರಾತ್ರಿ 10 ಗಂಟೆಗೆ ಮರ ಪಿಳರ್ಕಲ್ ಕಾರ್ಯಕ್ರಮ ನಂತರ ಕೈವೀದ್ ನೆರವೇರಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಚರಣಾ ಸಮಿತಿ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್ ಹಾಗೂ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ. ಹೆಚ್ಚಿನ ಸುದ್ದಿಗಳಿಗಾಗಿ 8762987658 ಸಂಪರ್ಕಿಸಬಹುದಾಗಿದೆ.