



ಮಡಿಕೇರಿ ಮಾ.19 NEWS DESK : ಡಾ.ಅಂಬೇಡ್ಕರ್ ಭವನದ ಆವರಣದಲ್ಲಿ ಪ್ರತಿಮೆ ಸ್ಥಾಪಿಸಬಾರದೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ನಗರಸಭಾ ಸದಸ್ಯ ಹೆಚ್.ಸಿ.ಸತೀಶ್, ಪ್ರಮುಖರಾದ ಪ್ರೇಂ ಕುಮಾರ್, ಎನ್.ವೀರಭದ್ರಯ್ಯ, ಡಿ.ಜೆ.ಈರಪ್ಪ, ಟಿ.ಎನ್.ಗೋವಿಂದಪ್ಪ, ಹೆಚ್.ಕೆ.ಪ್ರೇಮ ಕೃಷ್ಣಪ್ಪ, ನಾಗೇಂದ್ರ, ದಿಲೀಪ್ ಮತ್ತಿತರರು ಪ್ರತಿಭಟನೆಗೆ ಮುಂದಾದರು. ಈ ಸಂದರ್ಭ ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಭವನದ ಸುತ್ತ ನಿಷೇಧಾಜ್ಞೆ ವಿಧಿಸಿರುವುದರಿಂದ ಪ್ರತಿಭಟನೆಗೆ ಅವಕಾಶವಿಲ್ಲ ಎಂದರು. ಒಂದು ಹಂತದಲ್ಲಿ ಹೆಚ್.ಎಂ.ನಂದಕುಮಾರ್ ಹಾಗೂ ಹೆಚ್.ಸಿ.ಸತೀಶ್ ನಡುವೆ ಏಕವಚನದಲ್ಲಿ ಮಾತಿನ ಚಕಮಕಿ ನಡೆಯಿತು. ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಎಲ್.ದಿವಾಕರ್ ಹಾಗೂ ದಲಿತ ಸಂಘಟನೆಗಳ ಮುಖಂಡ ಟಿ.ಈ.ಸುರೇಶ್ ಅವರು ಡಾ.ಅಂಬೇಡ್ಕರ್ ಭವನದ ಎದುರು ಪ್ರತಿಮೆ ಸ್ಥಾಪನೆಗೆ ನಮ್ಮ ವಿರೋಧವಿದೆ. ಜಿಲ್ಲಾಡಳಿತ ಹಾಗೂ ನಗರಸಭೆ ಸೂಚಿಸುವ ಸ್ಥಳದಲ್ಲಿ ಪ್ರತಿಮೆ ನಿರ್ಮಾಣವಾಗಲಿ ಎಂದರು.