



ಮಡಿಕೇರಿ ಮಾ.19 NEWS DESK : ಬೆಳ್ಳಿ ಮಹೋತ್ಸವದ ಹೊಸ್ತಿಲಲ್ಲಿರುವ ಕೊಡವ ಕೌಟುಂಬಿಕ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳಲು ದಾಖಲೆಯ 396 ಕೊಡವ ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊAಡಿದ್ದು, ಇದೊಂದು ನೂತನ ದಾಖಲೆಯಾಗಿದೆ. ಈ ಬಾರಿ ಕೊಡವ ಕೌಟುಂಬುಕ ಹಾಕಿ ಉತ್ಸವದ ಜವಾಬ್ದಾರಿಯನ್ನು ಮುದ್ದಂಡ ಕುಟುಂಬ ವಹಿಸಿಕೊಂಡಿದ್ದು, ಪಂದ್ಯಾವಳಿ ಇದೇ ಮಾ.28 ರಿಂದ ಒಂದು ತಿಂಗಳ ಕಾಲ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎರಡು ಮೈದಾನ ಮತ್ತು ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಲಿದೆ.
ಕೌÀಟುಂಬಿಕ ಹಾಕಿ ಪಂದ್ಯಾವಳಿ ಸಮೀಪಿಸುತ್ತಿದ್ದು, ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿದೆ. ಕಳೆದ ಸಾಲಿನ ಕುಂಡ್ಯೋಳ0ಡ ಕೊಡವ ಹಾಕಿ ಉತ್ಸವದಲ್ಲಿ 360 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ ಇದಕ್ಕೂ ಮಿಗಿಲಾಗಿ 36 ಹೆಚ್ಚುವರಿ ತಂಡಗಳು ಪಾಲ್ಗೊಳ್ಳುವ ಮೂಲಕ ಹಾಕಿ ಉತ್ಸವದ ಕಳೆ ಹೆಚ್ಚಿಸಲಿವೆ. ಕೊಡವ ಹಾಕಿ ಅಕಾಡೆಮಿಯ ಸಹಭಾಗಿತ್ವದಲ್ಲಿ ಮುದ್ದಂಡ ಕುಟುಂಬಸ್ಥರಿ0ದ ಆಯೋಜನೆಯಾಗುತ್ತಿರುವ ಹಾಕಿ ಪಂದ್ಯಾವಳಿಯ ‘ಕ್ರೀಡಾ ಜ್ಯೋತಿ’ಯ ಮೆರಥಾನ್ ಇದೇ ಮಾ.24 ರಿಂದ ಪಾಂಡAಡ ಕುಟುಂಬಸ್ಥರ ಕರಡದ ಐನ್ ಮನೆಯಿಂದ ಆರಂಭವಾಗಲಿದೆ.