


ಮಡಿಕೇರಿ NEWS DESK ಮಾ.20 : ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರ ಬಡಾವಣೆಯ ಶ್ರೀ ಕೋದಂಡ ರಾಮೋತ್ಸವದ ಭಜನಾ ಸಮಿತಿಯ ವಿಶಾಲಾಕ್ಷಿ ಸುಕುಮಾರ್ ಕಾರ್ಯನಿರ್ವಹಿಸಲಿದ್ದಾರೆ. ಏ.5 ರಂದು ನಗರದಲ್ಲಿ ನಡೆಯುವ ಶ್ರೀರಾಮನ ಮೆರವಣಿಗೆಯಲ್ಲಿ ಸುಮಾರು 12 ಕ್ಕೂ ಅಧಿಕ ಭಜನಾ ತಂಡಗಳ ಭಜನೆ ಪ್ರಮುಖ ಆಕರ್ಷಣೆಯಾಗಲಿದೆ. ಏ.5 ಮತ್ತು 6ರಂದು ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ರಾಮೋತ್ಸವ ಜರುಗಲಿದೆ.