



ಮಡಿಕೇರಿ ಮಾ.25 NEWS DESK : ಮುದ್ದಂಡ ಹಾಕಿ ಉತ್ಸವದ ಕ್ರೀಡಾಜ್ಯೋತಿಗೆ ಬಾಳೆಲೆಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
24 ಕುಟುಂಬಗಳ ಐನ್ ಮನೆಗಳಿಗೆ ಮ್ಯಾರಥಾನ್ ಮೂಲಕ ತಲುಪಲುಪಿಸುವ ನಿಟ್ಟಿನಲ್ಲಿ ಇಂದು ಅಳಮೇಂಗಡ ಐನ್ ಮನೆಗೆ ಆಗಮಿಸಿದ ಕ್ರೀಡಾ ಜೋತಿಯನ್ನು ಬಾಳೆಲೆ ವಿಜಯಲಕ್ಷ್ಮಿ ವಿದ್ಯಾಸಂಸ್ಥೆಯ ಮುಂಭಾದಲ್ಲಿ ಅಳಮೇಂಗಡ ವಕ್ಕ, ಬಾಳೆಲೆ ಕೊಡವ ಸಮಾಜ ಮತ್ತು ವಿವಿಧ ಸಂಘಸಂಸ್ಥೆಗಳು ಆರತಿ ಬೆಳಗಿ, ಮೆರವಣಿಗೆ ಮೂಲಕ ಅಳಮೇಂಗಡ ಐನ್ ಮನೆಗೆ ಬರಮಾಡಿಕೊಂಡು. ಈ ಸಂದರ್ಭ ಮುದ್ದಂಡ ಕುಟುಂಬದ ಅಧ್ಯಕ್ಷ ಮುದ್ದಂಡ ದೇವಯ್ಯ, ಅಳಮೇಂಗಡ ಕುಟುಂಬದ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಉಪಾಧ್ಯಕ್ಷ ಅಳಮೇಂಗಡ ಸತೀಶ್ ಕಾರ್ಯಪ್ಪ, ಕಾರ್ಯದರ್ಶಿ ಅಳಮೇಂಗಡ ತಮ್ಮು ಸೋಮಯ್ಯ, ಹಿರಿಯರಾದ ಅಳಮೇಂಗಡ ಪೊನ್ನಪ್ಪ, ಪ್ರಮುಖರಾದ ಅಳಮೇಂಗಡ ನಧೀರ ಸೋಮಯ್ಯ, ಅಳಮೇಂಗಡ ದಿಲು, ಅಳಮೇಂಗಡ ರಮೇಶ್, ರಾಜಪ್ಪ, ಸುರೇಶ್ ಸುಬ್ಬಯ್ಯ, ಮುದ್ದಂಡ ಕುಟುಂಬದ ಪಟ್ಟೆದಾರರಾದ ಡಾಲಿ ತಿಮ್ಮಯ್ಯ, ಕಾರ್ಯಧ್ಯಕ್ಷ ರಸೀನ್ ಸುಬ್ಬಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಕಾರ್ಯದರ್ಶಿ ಮಾಲೇಟಿರ ಶ್ರೀನಿವಾಸ್, ಮುದ್ದಂಡ ಅಧ್ಯ ತಿಮ್ಮಯ್ಯ, ಬಾಳೆಲೆ ಕೊಡವ ಸಮಾಜದ ಉಪಾಧ್ಯಕ್ಷ ಮಾಚಂಗಡ ಜಪ್ಪು, ನಿರ್ದೇಶಕರುಗಳಾದ ಚಿಮ್ಮಣಮಾಡ ಕಷ್ಣಗಣಪತಿ, ಮಾಪಂಗಡ ಸಂಪತ್, ಅರಮಣಮಾಡ ರಂಜನ್ ಚಂಗಪ್ಪ, ನಿಟ್ಟೂರು ಗ್ರಾಮ ಪಂಚಾಯತಿ ಸದಸ್ಯರಾದ ಚಕ್ಕೇರ ಅಯ್ಯಪ್ಪ, ಅಲೇಮಾಡ ಕರುಂಬಯ್ಯ ಸೇರಿದಂತೆ ಪ್ರಮುಖರು ಹಾಜರಿದ್ದರು.