

ಮಡಿಕೇರಿ ಮಾ.31 NEWS DESK : ಪೇರಡ್ಕ-ಗೂನಡ್ಕದಲ್ಲಿ ಸಂಭ್ರಮದ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಇತಿಹಾಸ ಪ್ರಸಿದ್ಧ ಅತಿ ಪುರಾಣ ಪೇರಡ್ಕ-ಗೂನಡ್ಕ ಮೋಹಿಯದ್ದಿನ್ ಜುಮ ಮಸ್ಜಿದ್ ಖತೀಬ್ ಉಸ್ತಾದ ನಹೀಮ್ ಫೈಜಿ ಅಲ್ ಮಹಬರಿ ಈದ್ ಸಂದೇಶ ನೀಡಿ ಕೋಮು ಸೌಹಾರ್ದತೆ, ಕುಟುಂಬ ಜೀವನ,ರಂಜಾನ್ ಪಾವಿತ್ರತೆ ಬಗ್ಗೆ ತಿಳಿಸಿದರು. ಜಮಾ ಅತ್ ಸರ್ವರೂ ಪಾಲ್ಗೊಂಡು ಪರಸ್ಪರ ಸ್ನೇಹ ಮಿಲನ ಮಾಡಿಕೊಂಡರು. ಮೃತಪಟ್ಟವರಿಗೆ ಖಬರ್ ಸ್ಥಾನದಲ್ಲಿ ಝಿಯಾರತ್ ಮತ್ತು ಪೇರಡ್ಕ ವಲಿಯುಲ್ಲಾಹಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ಪದಾಧಿಕಾರಿಗಳದ ಟಿ.ಬಿ.ಹನೀಫ್, ಪಿ.ಕೆ.ಉಮ್ಮರ್ ಗೂನಡ್ಕ, ತೆಕ್ಕಿಲ್ ಮೊಹಮದ್ ಕುಂಞಿ ಪೇರಡ್ಕ, ಪಾಂಡಿ ಉಸ್ಮಾನ್, ಸಿನಾನ್ ದರ್ಕಾಸ್, ಡಿ.ಎ.ಮೊಯಿದು ದರ್ಕಾಸ್ ಗೂನಡ್ಕ, ಭಾತಿಶ ತೆಕ್ಕಿಲ್ ಸೆಟ್ಟಿಯಡ್ಕ, ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಎಸ್.ಕೆ.ಎಸ್.ಎಸ್.ಎಫ್.ಅಧ್ಯಕ್ಷ ಮುನೀರ್ ಧಾರಿಮಿ, ಅಕ್ಬರ್ ಕರಾವಳಿ, ಪಾಂಡಿ ಅಬ್ಬಾಸ್ ನಿವೃತ್ತ ಅರಣ್ಯ ಅಧಿಕಾರಿ ಯೂಸುಫ್, ತಾಲೂಕು ಕಚೇರಿ ಸಿಬ್ಬಂದಿ ರಜಾಕ್ ಮೊದಲಾದವರು ಭಾಗವಹಿಸಿದರು.