





ಮಡಿಕೇರಿ ಏ.2 NEWS DESK : ಮುದ್ದಂಡ ಕಪ್ ಹಾಕಿ ಉತ್ಸವ : ಏ.2 ರಂದು ನಡೆದ ಪಂದ್ಯಾವಳಿಯ ವಿಜೇತ ತಂಡಗಳ ವಿವರ
ಮೈದಾನ 1 :: ಪೊಂಜಂಡ ಮತ್ತು ಪಟ್ಟಮಾಡ ತಂಡಗಳ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಪಟ್ಟಮಾಡ ತಂಡ ಗೆಲುವು ದಾಖಲಿಸಿತು. ಪಟ್ಟಮಾಡ ಪರ ದೀಪಕ್ ಪೂವಣ್ಣ, ನಿಖಿಲ್ ತಿಮ್ಮಯ್ಯ ಹಾಗೂ ಶ್ರೀಷ್ಮ ಬೊಳ್ಳಮ್ಮ ತಲಾ 1 ಗೋಲು ದಾಖಲಿಸಿದರು. ದೇಗುಲ್ ಪಿ.ಎನ್. ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮುದ್ದಿಯಡ ಮತ್ತು ಚಿಮ್ಮಣಮಾಡ ನಡುವಿನ ಪಂದ್ಯದಲ್ಲಿ ಮುದ್ದಿಯಡ ತಂಡ 3-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮುದ್ದಿಯಡ ತಂಡದ ಧೀರಜ್ 2 ಹಾಗೂ ದಿಶಾಂತ್ 1 ಗೋಲು ಬಾರಿಸಿದರು. ಚಿಮ್ಮಣಮಾಡ ಸಚಿನ್ ಪ್ಲೇಯರ್ ಆಫ್ ಮ್ಯಾಚ್ ಪ್ರಶಸ್ತಿಗೆ ಭಜನರಾದರು.
ಬೊಳೆಯಾಡಿರ ಮತ್ತು ಪೆಮ್ಮುಡಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳೆಯಾಡಿರ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಬೊಳೆಯಾಡಿರ ಚೇತನ್ ಸುಬ್ಬಯ್ಯ 2 ಹಾಗೂ ಸಚಿನ್ ಗಣಪತಿ 1 ಗೋಲು ಬಾರಿಸಿದರು. ಪೆಮ್ಮುಡಿಯಂಡ ಸೋನು ಮೇದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕೊಂಡಿರ ಮತ್ತು ಪೇರಿಯಂಡ ನಡುವಿನ ಪಂದ್ಯದಲ್ಲಿ ಕೊಂಡಿರ 2-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ತಂಡದ ಪರ ತೀರ್ತಿ ತಮ್ಮಯ್ಯ ಹಾಗೂ ಸುಬ್ಬಯ್ಯ ತಲಾ 1 ಗೋಲು ಬಾರಿಸಿದರು. ಪೇರಿಯಂಡ ನಿತಿನ್ ನಂಜಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕುಟ್ಟಂಡ (ಕಾರ್ಮಾಡ್) ಮತ್ತು ಪಾರುವಂಗಡ ವಾಕ್‍ಓವರ್ ನಲ್ಲಿ ಕುಟ್ಟಂಡ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ಚಿಲ್ಲವಂಡ ಮತ್ತು ಮುದ್ದಂಡ ನಡುವಿನ ಪಂದ್ಯದಲ್ಲಿ ಚಿಲ್ಲವಂಡ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಚಿಲ್ಲವಂಡ ತಂಡದ ಪರ ಮಾಚಯ್ಯ ಹಾಗೂ ಅಯ್ಯಪ್ಪ ತಲಾ 1 ಗೋಲು ದಾಖಲಿಸಿದರು. ಮುದ್ದಂಡ ರಶಿನ್ ಸುಬ್ಬಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಂಜಿತಂಡ ಮತ್ತು ಪೊನ್ನಕಚ್ಚಿರ ನಡುವಿನ ಪಂದ್ಯದಲ್ಲಿ ಕಂಜಿತಂಡ 2-0 ಗೋಲು ಅಂತರದಲ್ಲಿ ಗೆಲುವು ಸಾಧಿಸಿತು. ಕಂಜಿತಂಡ ತಂಡದ ಪರ ಬೆಳ್ಯಪ್ಪ ಹಾಗೂ ದರ್ಶನ್ ತಲಾ 1 ಗೋಲು ಬಾರಿಸಿದರು. ಪೊನ್ನಕಚ್ಚಿರ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೇವಡ ಮತ್ತು ಚಾರಿಮಂಡ ನಡುವಿನ ಪಂದ್ಯದಲ್ಲಿ ಮೇವಡ ತಂಡ 4-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮೇವಡ ತಂಡದ ಅಂಜನ್ 2, ಜಶನ್ ತಮ್ಮಯ್ಯ ಹಾಗೂ ನಿತಿನ್ ತಲಾ 1 ಗೋಲು ಬಾರಿಸಿದರು. ಚಾರಿಮಂಡ ನಿತೀನ್ ಪ್ಲೇಯರ್ ಆಫ್ ದಿ ಮ್ಯಾಚ್ ಪಡೆದರು.
ಮೈದಾನ 2 :: ನಾಪನೆರವಂಡ ಮತ್ತು ನೆಲ್ಲಪಟ್ಟಿರ ನಡುವಿನ ಪಂದ್ಯದಲ್ಲಿ ನಾಪನೆರವಂಡ ತಂಡ ವಾಕ್ ಓವರ್ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ತೀವ್ರ ಹಣಾಹಣಿಯಿಂದ ಕೂಡಿದ್ದ ಮುದ್ದಂಡ ಕಪ್ ಹಾಕಿ ಉತ್ಸವದ ಪಂದ್ಯವೊಂದರಲ್ಲಿ ಕೋಣಿಯಂಡ ತಂಡ ಟೈಬ್ರೇಕರ್ ಮೂಲಕ ಎದುರಾಳಿ ಕಲ್ಲುಮಾಡಂಡ ತಂಡವನ್ನು 6-3 ಗೋಲುಗಳ ಅಂತರದಿಂದ ಮಣಿಸಿ ನಿಟ್ಟುಸಿರು ಬಿಟ್ಟಿತು.
ದಾಳಿ ಪ್ರತಿದಾಳಿಯ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕಲ್ಲುಮಾಡಂಡ ತಂಡದ ಚಮನ್ ಚಂಗಪ್ಪ 13ನೇ ನಿಮಿಷವೆ ಆಕರ್ಷಕ ಗೋಲು ಸಿಡಿಸಿ ತಂಡಕ್ಕೆ 1-0 ಗೋಲಿನ ಮುನ್ನಡೆಯನ್ನು ದೊರಕಿಸಿಕೊಟ್ಟರು. ಸಮಬಲದ ಗೋಲಿಗಾಗಿ ದಾಳಿಯ ಆಟಕ್ಕಿಳಿದ ಕೋಣಿಯಂಡ ತಂಡಕ್ಕೆ 28 ನೇ ನಿಮಿಷ ದೊರೆತ ಅವಕಾಶವನ್ನು ತಂಡದ ಕುಟ್ಟಪ್ಪ ಗೋಲಾಗಿ ಪರಿವರ್ತಿಸುವುದರೊಂದಿಗೆ ನಿಗದಿತ ಅವಧಿಯಲ್ಲಿ ಪಂದ್ಯ 1-1 ಗೋಲಿನಿಂದ ಡ್ರಾ ಗೊಂಡಿತು.
ವಿಜೇತ ತಂಡವನ್ನು ನಿರ್ಧರಿಸಲು ಅಳವಡಿಸಿದ ಟೈಬ್ರೇಕರ್‍ನಲ್ಲಿ ಕೋಣಿಯಂಡ 5 ಗೋಲು ಗಳಿಸಿದರೆ, ಕಲ್ಲುಮಾಡಂಡ ತಂಡ 2 ಗೋಲುಗಳನ್ನಷ್ಟೆ ಗಳಿಸಲು ಶಕ್ತವಾಯಿತು. ಅಂತಿಮವಾಗಿ ಕೋಣಿಯಂಡ ತಂಡ 6-3 ಗೋಲಿನ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿತು.
ಕೊಲತಂಡ ಮತ್ತು ಮಲ್ಲಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಲಂಡ ತಂಡ 5-0 ಗೋಲು ಅಂತರದಿಂದ ಜಯ ಸಾಧಿಸಿತು. ಮಲ್ಲಂಡ ತಂಡದ ಪರ ಪೊನ್ನಪ್ಪ ಹಾಗೂ ನಾಚಪ್ಪ ತಲಾ 2 ಹಾಗೂ ಮದನ್ ತಿಮ್ಮಯ್ಯ 1 ಗೋಲು ದಾಖಲಿಸಿದರು. ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಪಾಂಡಿರ ಮತ್ತು ಪೋರಂಗಡ ತಂಡದ ನಡುವಿನ ಪಂದ್ಯದಲ್ಲಿ ಪಾಂಡಿರ ತಂಡ ವಾಕ್ ಓವರ್‍ನಲ್ಲಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ಮಾಳೆಯಂಡ ಮತ್ತು ಬಲ್ಯಂಡ ತಂಡದ ನಡುವಿನ ಪಂದ್ಯದಲ್ಲಿ ಮಾಳೆಯಂಡ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮಾಳೆಯಂಡ ಪರ ಅಪ್ಪಣ್ಣ ಎಂ.ಎ. ಹಾಗೂ ರೋಹಿತ್ ಬೋಪಣ್ಣ ತಲಾ 1 ಗೋಲು ದಾಖಲಿಸಿದರು. ವರುಣ್ ನಾಚಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.
ಮುಂಡಚಾಡಿರ ಮತ್ತು ಅಯ್ಯಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಮುಂಡಚಾಡಿರ ತಂಡ 3-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮುಂಡಚಾಡಿರ ತಂಡದ ಪರ ಮದನ್, ನಿಹಾಲ್ ಹಾಗೂ ರಜಿತ್ ತಲಾ 1 ಗೋಲು ದಾಖಲಿಸಿದರು. ಅಯ್ಯಮಾಡ ಕುಟ್ಟಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.
ಅಮ್ಮೆಕಂಡ ಮತ್ತು ಚೆಂಬಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಚೆಂಬಂಡ ಗೆಲುವು ದಾಖಲಿಸಿತು. ಚೆಂಬಂಡ ಪರ ವಿನ್ನ ನಂಜಪ್ಪ 2 ಹಾಗೂ ರಂಜು ಭೀಮಯ್ಯ 1 ಗೋಲು ದಾಖಲಿಸಿದರು. ಯೋಗ್ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಬೊಟ್ಟಂಗಡ ಮತ್ತು ಉದ್ದಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಟ್ಟಂಗಡ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಬೊಟ್ಟಂಗಡ ಪರ ಕೌಶಿಕ್, ಪ್ರಥು ಹಾಗೂ ನಿಖಿಲ್ ತಲಾ 1 ಗೋಲು ದಾಖಲಿಸಿದರು. ರಜತ್ ಕುಶಾಲಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ 3 :: ಚಿಂಡಮಾಡ ಮತ್ತು ಕೇಚೆಟ್ಟಿರ (ಬೆಂಗೂರು) ನಡುವಿನ ಪಂದ್ಯದಲ್ಲಿ ಚಿಂಡಮಾಡ ತಂಡ 3-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಚಿಂಡಮಾಡ ತಂಡದ ಪರ ತೀರ್ಥನ್ ಚಿಣ್ಣಪ್ಪ 2 ಮತ್ತು ತೀರ್ಥನ್ ತಮ್ಮಯ್ಯ 1 ಗೋಲುಗಳನ್ನು ಬಾರಿಸಿದರೆ, ಕೇಚೆಟ್ಟಿರ ತಂಡದ ಪರ ಪ್ರೀತಮ್ ತಮ್ಮಯ್ಯ 1 ಗೋಲು ದಾಖಲಿಸಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಅರಮಣಮಾಡ ಮತ್ತು ತಾತಿರ ವಾಕ್ ಓವರ್‍ನಲ್ಲಿ ಅರಮಣಮಾಡ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ತೇಲಪಂಡ ಮತ್ತು ತೀತಿರ ವಾಕ್ ಓವರ್‍ನಲ್ಲಿ ತೇಲಪಂಡ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಕಾಕಮಾಡ ಮತ್ತು ಕುಂಡ್ರಂಡ ವಾಕ್ ಓವರ್‍ನಲ್ಲಿ ಕುಂಡ್ರಂಡ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ಕುಂಚೆಟ್ಟಿರ ಮತ್ತು ಮಳವಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಳವಂಡ ತಂಡ 3-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮಳವಂಡ ಪರ ಕಲನ್ ಚಿಟ್ಟಿಯಪ್ಪ 2 ಹಾಗೂ ಆದಿತ್ ಮುತ್ತಣ್ಣ 1 ಗೋಲು ದಾಖಲಿಸಿದರು. ಕುಂಚೆಟ್ಟಿರ ತಂಡದ ಪರ ಪುನೀತ್ 1 ಗೋಲು ಬಾರಿಸಿದರು. ಕುಂಚೆಟ್ಟಿರ ಪೃಥ್ವಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.