




ಮಡಿಕೇರಿ, ಏ.3 NEWS DESK : ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಕೊಡಮಾಡುವ 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಜಿಲ್ಲಾ ಸಿಐಡಿ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕಿ ಸಿ.ಯು. ಸವಿ ಭಾಜನಾರಾಗಿದ್ದಾರೆ. ಬೆಂಗಳೂರಿನ ಕೋರಮಂಗಲ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕವನ್ನು ಸಿ.ಯು. ಸವಿ ಅವರಿಗೆ ಪ್ರದಾನ ಮಾಡಿದರು. ಗೃಹ ಸಚಿವ ಜಿ. ಪರಮೇಶ್ವರ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಹಾಜರಿದ್ದರು. ಸವಿ ಅವರು ಬೆಟ್ಟಗೇರಿಯ ಚಳಿಯಂಡ ಉತ್ತಯ್ಯ, ಕಮಲ ದಂಪತಿ ಪುತ್ರಿ. ಕೋಕೇರಿ ನಿವಾಸಿ ಲೋಕೇಶ್ ಅವರ ಪತ್ನಿ.