




ಗೋಣಿಕೊಪ್ಪ ಏ.4 NEWS DESK : ಭಗತ್‍ಸಿಂಗ್ ಯುವಕ ಸಂಘ ಅಯೋಜಿಸಿದ ಜಿಸಿಎಲ್ ಐದನೇ ಅವೃತಿಗೆ ಗೋಣಿಕೊಪ್ಪ ದಸರಾ ಮೈದಾನದಲ್ಲಿ ಚಾಲನೆ ದೊರೆತಿದೆ. ಪೊನ್ನಂಪೇಟೆ ರಾಮಕೃಷ್ಣ ಶಾರದ ಆಶ್ರಮದ ಅಧ್ಯಕ್ಷ ಪರಹಿತ ನಂದಾಜಿ ಮಹಾರಾಜ್ ಮತ್ತು ಗೋಣಿಕೊಪ್ಪ ಸಂಥ ಥೋಮಸ್ ಶಾಲೆಯ ಪ್ರಾಂಶುಪಾಲ ಆಂಟೋನಿ ಪಯ್ಯಪಲ್ಲಿ ಮತ್ತು ಇತರ ಅತಿಥಿಗಳು ಪಂದ್ಯಾವಳಿಗೆ ಚಾಲನೆ ನೀಡಿದರು. ಇಪ್ಪತ್ತು ತಂಡಗಳು ನಾಲ್ಕು ದಿನಗಳು ಗೋಣಿಕೊಪ್ಪಲು ಚಾಂಪಿಯನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ. ನಂತರ ಮಾತನಾಡಿದ ಸ್ವಾಮಿ ಪರಾಹಿತಾನಂದ ಮಹರಾಜ್, ಏಕಾಗ್ರತೆಯನ್ನು ಮೈಗೂಡಿಸಿಕೊಳ್ಳಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯುತ್ತಮವಾಗಿದೆ. ದೇವರ ಪ್ರಾರ್ಥನೆಯಿಂದ ಏಕಾಗ್ರತೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾದರೂ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಏಕಾಗ್ರತೆ ಸಿಗಲಿದೆ ಎಂದು ತಿಳಿಸಿದರು. ಸ್ವಾಮಿ ವಿವೇಕಾನಂದರು ಈ ಭಾರತ ದೇಶ ಕಟ್ಟಲು ಬಲಿಷ್ಠ ಯುವಕರ ಶಕ್ತಿ ಬೇಕು ಎಂದು ಹೇಳುತ್ತಿದ್ದರು, ಅಂತಹ ಶಕ್ತಿ ಕ್ರೀಡೆಯಿಂದ ಯುವಕರು ಪಡೆದುಕೊಳ್ಳಬಹುದು. ನಮ್ಮ ಶಕ್ತಿ ಬಗ್ಗೆ ನಂಬಿಕೆ ಇರಬೇಕು. ಧ್ಯಾನ ಮತ್ತು ಕ್ರೀಡೆಗಳು ಪರಿಣಾಮಕಾರಿ ಜೀವನವನ್ನು ರೂಪಿಸುತ್ತದೆ ಎಂದು ಸಲಹೆ ನೀಡಿದರು. ಗೋಣಿಕೊಪ್ಪ ಸಂತ ಥೋಮಸ್ ಶಾಲೆಯ ಪ್ರಾಂಶುಪಾಲ ಆಂಟೋನಿ ಪಯ್ಯಪಲ್ಲಿ ಮಾತನಾಡಿ, ಕ್ರೀಡೆಯಿಂದ ಮನೋಲ್ಲಾಸ ಪಡೆದುಕೊಳ್ಳಲು ಸಾಧ್ಯವಿದೆ. ಯುವಕರು ವ್ಯಸನಗಳಿಗೆ ಬಲಿಯಾಗುವ ಬದಲು ಕ್ರೀಡೆಯಂತಹ ಅಭ್ಯಾಸಗಳನ್ನು ಬಳಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು. ಕವಿ, ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಮನಸ್ಸಿನಲ್ಲಿರುವ ನಕರಾತ್ಮಕಗಳನ್ನು ತೆಗೆದು ಏಕಾಗ್ರತೆಯ ಮನಸ್ಸನ್ನು ಸಿದ್ದಿಸಿಕೊಳ್ಳಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಉಪಯುಕ್ತ. ನಮ್ಮ ಆತ್ಮಶಕ್ತಿಯನ್ನು ಹೆಚ್ಚಿಸಿಕೊಂಡು ಕಿನ್ನತೆಗಳಿಂದ ಹೊರಬರಲು ಕ್ರೀಡೆಗಳು ಸಹಕಾರಿಯಾಗುತ್ತದೆ. ಆಧ್ಯಾತ್ಮ ಮತ್ತು ಕ್ರೀಡೆ ಎರಡು ಮುಖದ ಒಂದೇ ನಾಣ್ಯಗಳಿದ್ದಂತೆ. ಮನುಷ್ಯನ ನಕರಾತ್ಮಕ ಗುಣಗಳನ್ನು ನಿಯಂತ್ರಿಸಲು ಆಧ್ಯಾತ್ಮಿಕ ಮಾರ್ಗಗಳಿಂದ ಸಾಧ್ಯವಾಗುವಂತೆಯೇ ಕ್ರೀಡೆಗಳಿಂದಲೂ ಸಾಧ್ಯವಾಗಬಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಗತ್‍ಸಿಂಗ್ ಯುವಕ ಸಂಘ ಆಯೋಜನೆಯ ಜಿಸಿಎಲ್ ಕ್ರಿಕೆಟ್ ಪಂದ್ಯಾಟದ ಅಧ್ಯಕ್ಷ ಸ್ನೇಕ್ ಶಾಜಿ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳ, ಸದಸ್ಯ ಬಿಎನ್ ಪ್ರಕಶ್, ಜಿಪಂ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಹ್ಮಣಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಅಧ್ಯಕ್ಷ, ಹೆಚ್.ಕೆ ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಹೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ಪೊನ್ನಂಪೇಟೆ ಕೆಪಿಎಸ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್, ಡಿಕೋಚ್ ಮಾಲಿಕ ಡಾ. ನಿತಿನ್, ಕಾಪ್ಸ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಸೋಮಯ್ಯ, ಪೌರಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷ ವಿಜಯ್‍ಕುಮಾರ್, ಫ್ರೆಂಡ್ಸ್ ಆಟೋ ಸ್ಪೇರ್ಸ್ ಮಾಲೀಕ ಗಂಗಾಧರಯ್ಯ, ಧಾನಿಗಳಾದ ಮನು ಸರೋಜಮ್ಮ, ಕವಿ ಸೋಮಯ್ಯ, ಪ್ರಮುಖರುಗಳಾದ ಸಿಂಗಿ ಸತೀಶ್, ಮನೆಯಪಂಡ ಶೀಲಾ ಬೋಪಣ್ಣ, ತಂಡ ಮಾಲೀಕರು, ಭಗತಸಿಂಗ್ ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.