





ಸುಂಟಿಕೊಪ್ಪ ಏ.7 NEWS DESK : ಶ್ರಿ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಕೋದಂಡ ರಾಮ ಮಂದಿರದಲ್ಲಿ ಶ್ರದ್ಧಾಭಕ್ತಿಯಿಂದ ರಾಮ ನವಮಿ ಆಚರಿಸಲಾಯಿತು. ಬೆಳಿಗ್ಗೆ ಶುದ್ಧಿ ಪೂಜೆಯೊ0ದಿಗೆ ಆರಂಭಗೊಂಡಿತು.ರಾಮ, ಲಕ್ಷ್ಮಣ, ಸೀತೆ, ಆಂಜನೇಯ ದೇವರಿಗೆ ವಿವಿಧ ಹೂವಿನ ಅಲಂಕಾರ ನಡೆಯಿತು. ನಂತರ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕದ ಬಳಿಗೆ ಗಣ ಹೋಮ ಹಾಗೂ ರಾಮತಾರಕ ಹೋಮವನ್ನು ಪ್ರಧಾನ ಅರ್ಚಕ ಜಯಂಂತ್ ಭಟ್, ಕಕ್ಕಬ್ಬೆಯ ಸಂತೋಷ್ ಹೆಬ್ಬಾರ್ , ರಾಘವೇಂದ್ರ ಭಟ್, ರವಿಶಂಕರ್ ಭಟ್, ಗಣೇಶ್ ಉಪಾಧ್ಯಯ, ಮಂಜುನಾಥ್ ಶರ್ಮಾ ನೆರವೇರಿಸಿದರು.
ವಿಶೇಷ ಮಂಗಳಾರತಿ, ಮಹಾ ಆರತಿ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನೆರೆದಿದ್ದ ನೂರಾರು ಭಕ್ತರಿಗೆ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ನೆರವೇರಿತು. ಸುಂಟಿಕೊಪ್ಪ ಸೇರಿದಂತೆ ಸುತ್ತಲಿನ ನೂರಾರು ಭಕ್ತರು ಆಗಮಿಸಿ ಪೂಜಾ ಕೈಂಕಾರ್ಯಗಳಲ್ಲಿ ಭಾಗವಹಿಸಿದರು. ರಾಮ ನವಮಿಯ ಅಂಗವಾಗಿ ದೇವಾಲಯವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಲಾಗಿತ್ತು. ಪಟ್ಟಣ ಹಾಗೂ ದೇವಾಲಯದ ರಸ್ತೆಯಲ್ಲಿ ಕೇಸರಿ ಧ್ಚಜ ಹಾಗೂ ಬಂಟಿಂಗ್ಸ್ ಗಳು ರಾರಾಜಿಸುತ್ತಿದ್ದವು. ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಘ್ನೇಶ್, ಪಿ.ಆರ್.ಸುನಿಲ್ ಕುಮಾರ್, ಧನುಕಾವೇರಪ್ಪ, ಬಿ.ಎಂ.ಸುರೇಶ್, ಸುರೇಶ್ ಗೋಪಿ, ನಿಖಿಲ್, ಗಣೇಶ ಹಾಗೂ ಪದಾಧಿಕಾರಿಗಳು ಇದ್ದರು.