






ಮಡಿಕೇರಿ ಏ.7 NEWS DESK : ಕೊಡಗು ಜಿಲ್ಲೆಯ ಪ್ರಸಿದ್ಧ ಝಿಯಾರತ್ ಕೇಂದ್ರವಾದ ಮೇಕೇರಿ ಮಸೀದಿಯ ಮಖಾಂ ಉರೂಸ್ ಸಮಾರಂಭವು ಏ.11 ರಿಂದ 15ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಏ.11 ರಂದು ಜುಮಾ ನಮಾಜಿನ ಬಳಿಕ ಮೇಕೇರಿ ಕಿಜರ್ ಜುಮಾ ಮಸೀದಿ ಅಧ್ಯಕ್ಷ ಜನಾಬ್ ಸಯ್ಯದ್ ಜಂಬ್ರುದ್ದೀನ್ ಸಾಹೇಬ್ ಅವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದ್ದು, ಪ್ರಧಾನ ಕಾರ್ಯದರ್ಶಿ ಎಂ.ಎಲ್.ರಹೀಮ್ ಉಪಸ್ಥಿತರಿರಲಿದ್ದಾರೆ. ರಾತ್ರಿ ಇಶಾ ನಮಾಜಿನ ಬಳಿಕ ಉದ್ಬೋದನೆ ಹಾಗೂ ದಿಕ್ರ್-ದುಆ ಸಮ್ಮೇಳ ನಡೆಯಲಿದ್ದು, ಸಯ್ಯದ್ ಇಲ್ಯಾಸ್ ತಂಙಳ್ ಅಲ್ ಹೈದರೂಸಿ ಎಮ್ಮೆಮಾಡು ಪಾಲ್ಗೊಳ್ಳಲಿದ್ದಾರೆ. ಏ.12 ರಂದು ಇಶಾ ನಮಾಜಿನ ಬಳಿಕ ರಾತ್ರಿ 8 ಗಂಟೆಗೆ ಖಮರುದ್ದೀನ್ ಸಖಾಫಿ ಅನ್ವಾರಿ ಹಾಗೂ ಸಂಗಡಿಗರ ನೇತೃತ್ವದಲ್ಲಿ ಬುರ್ದಾ ಮಜ್ಲೀಸ್ ಹಾಗೂ ನಅತೆ ಶರೀಫ್ ನಡೆಯಲಿದ್ದು, ಮೇಕೇರಿಯ ಅಬ್ದುಲ್ ಸಲಾಂ ಹಳರಮಿ ದುಆಃ ನೇತೃತ್ವ ವಹಿಸಲಿದ್ದಾರೆ. ಏ.13 ರಂದು ರಾತ್ರಿ 8 ಗಂಟೆಗೆ ಇಶಾ ನಮಾಜಿನ ಬಳಿಕ ಧಾರ್ಮಿಕ ಮತ ಪ್ರವಚನ ನಡೆಯಲಿದೆ. ಕಿಲ್ಲೂರು ಬಹು ಉಸ್ತಾದ್ ಅಬ್ದುಲ್ ಹಮೀದ್ ಪೈಜಿ ಮುಖ್ಯ ಭಾಷಣ ಮಾಡಲಿದ್ದು, ಬಹು ನೌಷಲ್ ಹನೀಫಿ ಸದರ್ ಮುಆಲಿಮ್ ಸ್ವಾಗತ ಭಾಷಣ ಮಾಡಲಿದ್ದಾರೆ. ಏ.14 ರಂದು ಅಪರಾಹ್ನ 2.30 ಗಂಟೆಗೆ ಸಂದಲ್ ಮೆರವಣಿಗೆ ನಡೆಯಲಿದೆ. 3.30 ಗಂಟೆಗೆ ಮೌಲಿದ್ ಪಾರಾಯಣ ಹಾಗೂ ಸಾಮೂಹಿಕ ಪ್ರಾರ್ಥನೆ ಜರುಗಲಿದ್ದು, ವೆಳ್ಳಿತ್ತೋಡ್ ಅಬೂ ಸಿನಾನ್ ಹಳರಮಿ ನೇತೃತ್ವ ವಹಿಸಲಿದ್ದಾರೆ. ಸಂಜೆ 4.30 ಗಂಟೆಗೆ ಅನ್ನದಾನ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮೇಕೇರಿಯ ಕಿಜರ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಎಂ.ಎಲ್.ರಹೀಮ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.