ಮಡಿಕೇರಿ ಮೇ 20 NEWS DESK : ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುವ ರಾಜ್ಯ ಪ್ರಶಸ್ತಿಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಮುದ್ದು ಮಹದೇವ ಹಾಗೂ ವಿಶೇಷ ಮಕ್ಕಳ ಘಟಕದ ಕಲ್ಯಾಣಾಧಿಕಾರಿ ಹೆಡ್ ಕಾನ್ಸ್ ಟೇಬಲ್ ಸುಮತಿ ಅವರು ಭಾಜನರಾಗಿದ್ದಾರೆ. ಕರ್ನಾಟಕ ಪೊಲೀಸ್ ಡಿಜಿ ಹಾಗೂ ಐಜಿಪಿ ಅವರು ಇದೇ ಮೊದಲ ಭಾರಿಗೆ ಈ ಪ್ರಶಸ್ತಿಯನ್ನು ಘೋಷಿಸಿದ್ದು, ಮೊದಲ ವರ್ಷವೇ ಕೊಡಗಿನ ಅಧಿಕಾರಿಗಳು ಪ್ರಶಸ್ತಿ ಪಡೆಯುತ್ತಿರುವುದು ವಿಶೇಷ. ಮೇ 21ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.











